ಯೌವನ

ಯೌವನವೆಂದರೇ ಹೀಗೆ ಹೂ ಬಿಟ್ಟ ಮರದ ಹಾಗೆ ಹುಚ್ಚು ಹುರುಪು ನೂಕು ನುಗ್ಗಲು ಕಾಯನ್ನು ಹಿಸುಕಿ ಹಣ್ಣು ಮಾಡುವ ಒಕ್ಕಲು ಸಮಯವಿಲ್ಲ ಯಾವುದಕ್ಕೂ ಧಾವಿಸುತ್ತಿರು ಮುಂದೆ ಕೈ ಜಾರಿ ಹೋದೀತು ತಡಮಾಡಿದರೆ ನಿಲ್ಲದಿರು ಹಿಂದೆ...

ಆಗಾಗ

ಆಗಾಗ ಭೂ ಕಂಪಗಳು ಯುದ್ಧಗಳು ಸುನಾಮಿಗಳು ಮುಗಿಯದ ತಾಪ ತ್ರಯಗಳು ಗೋಜು ಗೊಂದಲಗಳು ಶರಧಿಯ ತಿಮಿಂಗಿಲಗಳು ಅಲ್ಲಲ್ಲಿ ಮಿಂಚು ಹುಳುಗಳು ದ್ವೀಪಗಳು ಕಾಪಾಡ ಬಂದ ಹಡಗುಗಳು ಸಿಡಿಸುತ್ತಿರುವ ಮತಾಪುಗಳು ಅನವರತ ಸಾಗುವ ಈ ಪ್ರಯಾಣ...

ತಿದ್ದು

ತಿದ್ದುವುದೆಂದರೆ ಸುಮ್ಮನೆ? ತಿದ್ದಲೇ ಬೇಕಿದೆ ಈಗ ಅಕ್ಷರ ಮಗ್ಗಿ ಬಿಟ್ಟು ಕಂಡ ಕಂಡ ವರನ್ನು ಆಗೀಗ ಎದುರಾಗು ವವರನ್ನು ಹೇಳದೇ ಮಾಡು ವವರನ್ನು ಹೇಳಿಯೂ ಮಾಡದವರನ್ನು ಬೆಲೆ ತಿಳಿಯದವರನ್ನು ತಿಳಿದೂ ಬಿಸುಟವರನ್ನು ಆತು ಹತ್ತಿರ...

ಹಳಸಿವೆ

ಎಂತಹ ಒಳ್ಳೆ ಅವಕಾಶ ಸಿಕ್ಕಿತ್ತು. ಆದರೂ ನಾನು ಆರರ ಮೇಲೆ ಏರಲಿಲ್ಲ ಮನುಷ್ಯರೆಂದರೇ ವಾಕರಿಕೆ ಅದೇ ಮುಗುಳ್ನಗೆ ಅದೇ ನಮಸ್ಕಾರ ಅದೇ ಪ್ರಶ್ನೆ ಹೇಗಿದ್ದೀರ? ಅದೇ ಉತ್ತರ ಚೆನ್ನಾಗಿದ್ದೇನೆ. ಕೇಳೀ ಕೇಳೀ ಹಳಸಿ ಹೋಗಿರುವ...

ಕಾಲ ನಿಲ್ಲುತ್ತದೆ

ಕಾಲ ನಿಲ್ಲುವುದಿಲ್ಲ ಎಂದು ಕಣವಿ ಹೇಳಿದರು ಸುಮ್ಮನೆ ಕಾಲ ನಿಲ್ಲುತ್ತದೆ ಮೋಡದೊಳಗೆ ವಿಮಾನ ಹೊಕ್ಕಾಗ ಗಕ್ಕನೇ ಮೊನ್ನೆ ಕುಳಿತೆ ಜೀವಮಾನದ ಮೊದಲ ವಿಮಾನಾಂತರಂಗ ಪ್ರವೇಶ ಮನೆ ಮರಗಳು ಆಗುತ್ತಾ ಚಿಕ್ಕ ಬೆಂಕಿ ಪೊಟ್ಟಣ ಯಂತ್ರ...

ಕಾಯುತ್ತಿರು

ಕಾಯುವುದೊಂದು ಕಾಯಕ ಹಾಲು ಕಾಯುವುದು ಊಟಕ್ಕೆ ಕಾಯುವುದು ಬಸ್ಸಿಗಾಗಿ ಕಾಯುವುದು ಹಣ ದೊರೆಯುವುದೆಂದು ಚಳಿ ಬೇಗ ಮುಗಿಯಲೆಂದು ಮಳೆ ಚೆನ್ನಾಗಿ ಸುಲಿಯಲೆಂದು ಕೊನೆಗೆ ಅವರಿವರನ್ನು ಕಂಡು ಮನಸ್ಸಿನಲ್ಲೇ ಕಾದು ಹೋಗುವುದು. ಇದೆಲ್ಲದಕ್ಕಿಂತ ಚೆನ್ನ ನಿನ್ನ...

ಕನಸಾಗುತ್ತದೆ

ಇಲ್ಲಿ ನಾನು ಬಿದ್ದಂತೆ ಎದ್ದಂತೆ ನಡೆದಂತೆ ಮರೆತಂತೆ ಅಲ್ಲಿ ನಿನಗೆ ಕನಸಾಗುತ್ತದೆ. ನನ್ನ ಉಸಿರು ಕಟ್ಟಿದಂತೆ ಸತ್ತಂತೆ ಹೂತಂತೆ ಸೋತಂತೆ ಸಾಯುವುದಿಲ್ಲ ಗೆಳೆಯಾ ಯೋಚಿಸ ಬೇಡ ಸಮ್ಮನೇ ಸತ್ತಂತೆಯೇ ಬದುಕುವುದು ಅಭ್ಯಾಸವಾಗಿದೆ ಬಿಡು ಮತ್ತೆ...

ಬೆಳೆಯಲಿ

ಮತ್ತೆ ಮೋಹಿಸುವ ಬಯಕೆ ತೃಷೆ ತೀರದು ಹಲವು ಸಲ ಜಗಿದರೂ ಈ ರಸ ತೀರದು, ಒಸರಿ ಬರುವ ಒರತೆ ನಿಲ್ಲದೆಂದೇ ತೋರಿದೆ, ಬದುಕೇ ಬಾಯಾರಿದೆ ಸ್ವೀಕರಿಸು ಓ ಬದುಕೇ ನನ್ನದೆಲ್ಲವೂ ನಿನ್ನದೇ ಏಕಿನ್ನೂ ಸಂಕೋಚ,...

ಕೇಳು

ಅಯ್ಯಾ ನೀ ಓದಿದರೆ ಓದು ಓದದಿದ್ದರೆ ಬಿಡು ನಾ ನಿನಗೆ ಬರೆದಲ್ಲದೇ ಸೈರಿಸಲಾರೆ ಅಯ್ಯಾ ನೀ ಬಂದರೆ ಬಾ ಬಾರದಿದ್ದರೆ ಬಿಡು ನಾ ನಿನಗೆ ಕರೆದಲ್ಲದೇ ಸೈಲಿಸಲಾರೆ ಅಯ್ಯಾ ನೀ ಸ್ವೀಕರಿಸಿದರೆ ಸ್ವೀಕರಿಸು ಸ್ವೀಕರಿಸದಿದ್ದರೆ...

ಬಿಡು

ಹರಿಯುತಿರುವ ನದಿ ಹರಿಯುತಿರಲಿ ಬಿಡು ತಡೆಯನೆಂದೂ ಒಡ್ಡದಿರು ಬದುಕನೆಂದೂ ಕದಡದಿರು ಗಡಿಯನೆಂದೂ ನೀಡದಿರು ಆಶಯವನು ಬಿಡದಿರು ನಿರೀಕ್ಷೆಯನು ಸುಡದಿರು ಮೋಡ ಚಲಿಸುತ್ತದೆ ಬಿಸಿಲು ಬಾಡುತ್ತದೆ. ವರ್ಷಗಳು ಉರುಳುತ್ತವೆ ಅಂಗಾಂಗಗಳು ಕುಸಿಯುತ್ತವೆ. ಉಸಿರು ನಿಲ್ಲುತ್ತದೆ. ನಿಲ್ಲಲಿ...