Home / Kannada Childrens Poems

Browsing Tag: Kannada Childrens Poems

ಕಾಡಿನ ಮೃಗಗಳು ಒಂದೆಡೆ ಸೇರಿ ಬಿಸಿ ಬಿಸಿ ಚರ್ಚೆಗೆ ತೊಡಗಿದವು ಮರಗಳ ಕಡಿದಾ ಮನುಜರಿಗೆ ಹಿಡಿ ಹಿಡಿ ಶಾಪ ಹಾಕಿದವು ಮನುಜನ ಕೃತ್ಯಕೆ ಮರುಗಿದವು ಪರಿಹಾರಕೆ ದಾರಿ ಹುಡುಕಿದವು ಕಾಡನು ಉಳಿಸುವ ಬಗೆಯದು ಹೇಗೆ ಎಂಬಾ ಚಿಂತನೆ ನಡೆಸಿದವು ಮರಗಳ ನೆಡುವಾ ಕ...

ಶಾಲೆಗಿಂದು ರಜೆಯೋ ಏನೋ ಎಳೆಯರೆದೆಯ ಹರುಷವೇನು ಹನುಮನಂತೆ ಹಾರುವನೊಬ್ಬ ಹುಟ್ಟುಡುಗೆಯ ಬಾಲನೊಬ್ಬ ಬಾಲ್ಯದಲ್ಲಿ ಇಲ್ಲ ಭಯ ಎಲ್ಲ ಜಯ ಅವನು ಇವನು ಎಲ್ಲ ಸೇರಿ ಒಂದೆ ಜಲ, ಒಂದೆ ಗಾಳಿ ಒಂದೇ ನೆಲದ ಅಂಗಳದಿ ಆಡಿ ತಿಳಿನೀರಲಿ ಹಾರಿ ಜಿಗಿದು ಕಣ್ಣ ಕೆಂಪಗಾ...

ಚಟಪಟ ಚಟಪಟ ಪಟಾಕಿ ಢಂ ಢಂ ಢಂ ಢಂ ಸುಟ್ಹಾಕಿ ಗಾಳಿಗೆ ಸೇರಿತು ಹೊಗೆ ಮತ್ತಷ್ಟೇರಿತು ಧಗೆ ಕಲುಷಿತವಾಯ್ತು ಗಾಳಿ ಗೆಳೆಯರಿಗೂ ಇದ ಹೇಳಿ ಢಂ ಢಂ ಜೋರಿನ ಶಬ್ದ ಹಕ್ಕಿಗಳಿಂಚರ ಸ್ತಬ್ಧ ಹಚ್ಚಿರಿ ಸಾಲು ದೀಪ ತೊಲಗಿಸಿ ಕತ್ತಲೆ ಶಾಪ ಹಚ್ಬೇಡಿ ನೀವು ಪಟಾಕಿ ...

ಅಮ್ಮನು ಇಲ್ಲದ ಹೊತ್ತು ಮೊದಲ ಮಳೆ ಹನಿ ಬಿತ್ತು ಆಡಲು ಬಾ ಎಂದಿತ್ತು ಅಂಗಳಕೆ ಕರೆದಿತ್ತು ತಟಪಟ ತಟಪಟ ಹನಿ ಚಟಪಟ ಚಟಪಟ ದನಿ ಯಾರೂ ಇಲ್ಲದ ಹೊತ್ತು ಮೊದಲ ಮಳೆ ಹನಿ ಮುತ್ತು ದಪ್ಪನೆ ಆಲಿಕಲ್ಲು ಕರಗ್ಹೋಯ್ತು ಬಾಯಿಯ ಹಲ್ಲು ಕುಣಿ ಕುಣಿದು ನಲಿದು ಬಿಟ...

ಒಂದೂರಲ್ಲಿ ಇದ್ದರು ರಾಯರು ಅವರ ಮನೆಯಲಿ ಇಲಿಗಳು ನೂರು ಎಲ್ಲೆಂದರಲ್ಲಿ ಅವುಗಳ ವಾಸ ಬೇಡ ರಾಯರಿಗಿದು ತರಲೆ ಸಹವಾಸ ಮಗಳ ಬೂಟು ರಾಯರ ಹ್ಯಾಟು ಹೆಂಡತಿ ಸೀರೆ ಮಗನ ಸೂಟು ಸೋಪು ಬ್ರೆಷ್ ಕಿಟಕಿಯ ಕರ್ಟನ್ ಎಲ್ಲವು ಆದವು ರೂಪದಿ ಮಾಡ್ರನ್ ಇಲಿಗಳ ಓಡಿಸೆ ...

ಸಾಲು ಮರಗಳ ಊರು ಜೀವ ಸಂಕುಲಕೆ ಸೂರು ಬಗೆ ಬಗೆ ಹೂವಿನ ತೇರು ಸವಿ ಸವಿ ಹಣ್ಣಿನ ಸಾಲು ಹತ್ತಿರದಲ್ಲೇ ಕೆರೆಯೊಂದು ನೀರು ನೆರಳಿಗೆ ಬರವಿಲ್ಲ ಸೊಂಪಾದ ಮರಗಳು ತಂಪಾದ ನೆರಳನು ನೀಡುತಲಿದ್ದವು ನಿತ್ಯ ಪ್ರಾಣಿ ಪಕ್ಷಿಗಳು ಸುಖವಾಗಿದ್ದವು ಸತ್ಯ ಆ ಮರದಲ್ಲ...

ನಾಯಿ ಮರಿಗೆ ಶಾಲೆಗ್ಹೋಗೊ ಆಸೆಯಾಯಿತು ಪಾಟಿ ಚೀಲ ಬಗಲಲಿಟ್ಟು ಸೈಕಲ್ ಏರಿತು ಬೆಕ್ಕು ಮರಿಯು ನಾನು ಬರುವೆ ತಾಳು ಎಂದಿತು ಹಿಂದೆ ಸೀಟಿನಲ್ಲಿ ಅದಕೆ ಕೂರಲು ಹೇಳಿತು ನಾಯಿ ಜೊತೆಗೆ ಬೆಕ್ಕು ಕೂಡ ಸೈಕಲ್ ಏರಿತು ಜಂಟಿಯಾಗಿ ಬೆಕ್ಕು ನಾಯಿ ಶಾಲೆಗ್ಹೊರಟವ...

ಮನೆಯ ಮುಂದೆ ಒಂದು ಪುಟ್ಟ ತೋಟ ಮಾಡಿದೆ ಹೂವು ಹಣ್ಣು ಗಿಡವನೆಟ್ಟು ಅಂದ ಗೊಳಿಸಿದೆ ನಿತ್ಯ ನೀರು ಹನಿಸಿ ನಾನು ಹಸನು ಮಾಡಿದೆ ಹೂವು ಬಿಟ್ಟು ಕಾಯಿ ಕೊಟ್ಟು ಗಿಡವು ನಕ್ಕವು ಪೂಜೆಗೆಂದು ಅಮ್ಮ ಬಂದು ಹೂವು ಒಯ್ದಳು ಮುಡಿಯಲಿಕ್ಕೆ ತಂಗಿ ಬಂದು ಹೂವು ಕಿ...

ಕೋಳಿ ಕೂಗೊ ಮೊದಲೆ ಎದ್ದ ನಮ್ಮ ಪುಟ್ಟ ಅಜ್ಜಿಗ್ಹೇಳಿ ಟಾಟ ಸೈಕಲ್ ತುಳಿದು ಬಿಟ್ಟ ಪೇಪರ್ ಬಂಡಲ್ ಹಿಡಿದು ಸೈಕಲ್ಲಿಗೆ ಬಿಗಿದು ಟ್ರಿಣ್ ಟ್ರಿಣ್ ಸದ್ದು ಮಾಡಿ ಮುಂದಕ್ಹೋಯ್ತು ಗಾಡಿ ಪ್ರತಿಮನೆಗೂ ಹೋಗಿ ಪೇಪರ್ ಎಂದು ಕೂಗಿ ಸುದ್ದಿ ಮುಟ್ಟಿಸಿ ಪುಟ್ಟ ...

ಪಟ್ಟ ಪುಟಾಣಿ ಹಕ್ಕಿ ಕೊಕ್ಕಲಿ ಏನೋ ಹೆಕ್ಕಿ ಹಾರುವೆ ಬಾನಲಿ ನೀನು ನೋಡುವೆ ನಿನ್ನನು ನಾನು ಬಣ್ಣ ಬಣ್ಣದ ಪುಕ್ಕ ಹಾರೋದ್ರಲ್ಲಿ ಪಕ್ಕಾ ಹಣ್ಣಿನ ಮರವ ಹುಡುಕಿ ತಿನ್ನುವೆ ಹಣ್ಣನು ಕುಕ್ಕಿ ದೂರದೂರಕೆ ಹಾರಿ ಸಾಗುವೆ ಯಾವುದೊ ದಾರಿ ಟ್ರಾಫಿಕ್ ಪೊಲೀಸ್ರ...

1...45678

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...