Home / Chandrashekara AP

Browsing Tag: Chandrashekara AP

ಏನಿದೆಷ್ಟೊಂದು ಸಾಹಿತ್ಯ, ಕೃಷಿ ತಂತ್ರ ಪೇಳಲಿಕೆ ಇನ್ನೊಂದಷ್ಟು ಇಳುವರಿಯನೇರಿಸುತ ಉಬ್ಬಲಿಕೆ ಧ್ಯಾನಿಸುವೊಡೊಂದಷ್ಟು ಸಾಹಿತ್ಯ ಸಾಕೆಮಾತ್ಮನಡೆ ತಿದ್ದಲಿಕೆ ಹೀನವದೆಲ್ಲ ಯತುನವು ಬಾಹ್ಯ ಪ್ರಕೃತಿಯನೆಮ್ಮಂತೆ ಮಾಡಲಿಕೆ ಊನವಲಾ ಮದ್ದಿನೊಳಾರೋಗ್ಯ ಓದಿನ...

ಅಲ್ಲೊಂದು ಇಲ್ಲೊಂದು ಸಿಕ್ಕಿದೊಂದೊಂದು ಮೌಲ್ಯದ ಬೀಜವನಿಟ್ಟು ಬೆವರನು ಕೊಟ್ಟು ನೆಲ ಜಲ ಬಲವನೇರಿಸಿಡೊಡದನು ಕೃಷಿಯೆನಲಕ್ಕು ಬಲ್ಲೊಡೆಲ್ಲ ಕೃಷಿ ನಿಯಮಗಳೆ, ಸಾಹಿತ್ಯಕ್ಕು ಒಲುಮೆ ಬರಿ ರೊಕ್ಕದೊಳಿರಲು ಕೊಳೆರೋಗವೆಲ್ಲದಕು – ವಿಜ್ಞಾನೇಶ್ವರಾ *...

ಶುದ್ಧ ಪ್ರಕೃತಿಯ ತುಂಬೆಲ್ಲ ವಿಧವಿಧದ ಸಂಗೀತ ಇದಕಿಲ್ಲವಾವುದೇ ಪಕ್ಕ ವಾದ್ಯದ ಬಡಿತ ಇದನಾಲೋಚಿಸುತೆಮ್ಮ ಮನ ಮೀಡಿತ ಎದೆ ಬಡಿತ, ಹದತಪ್ಪಿದೆಮ್ಮ ಭೀತಸಂಗೀತವನು ತಿದ್ದಿದೊಡೆಮ್ಮ ಬಾಳ ಸವಿಯುಳಿದೀತು ಖಚಿತ – ವಿಜ್ಞಾನೇಶ್ವರಾ *****...

ಅಂತರಂಗದ ದೋಷಗಳನೊಂದಷ್ಟು ಕಳೆವ ಸಂಗೀತಕಷ್ಟಿಷ್ಟು ಶಕ್ತಿ ತುಂಬುವ ಪಕ್ಕವಾದ್ಯ ದಂದದಲಿ ಮಿತಿಯೊಳಿದ್ದರೆ ಯಂತ್ರ ತಂತ್ರಗಳಾದವು ಸುಂದರ ಜೀವನಕವು ಬಲವಪ್ಪ ಹಿಡಿ ಕಾವು ಸುಂಮನುದ್ದ ಮಾಡಿದೊಡೇನು ಗುದ್ದಲಿಯ ಕಾವು – ವಿಜ್ಞಾನೇಶ್ವರಾ *****...

ಬರ ಬರದಂತಿಳೆಯ ಕಾಯುವ ಕಾನನಕೆ ಬರ ಬರಿಸಿದಬ್ಬರದ ಪೇಟೆಯೊಳೇನು ತೋರುವುದೋ ಹಲಸಿನಡುಗೆಯ ಮಾಡಿ ನೂರು ದಾರಿಗಳೂರಿಗಿರಲದು ಬೇಡೆನುವ ಕುರುಡು ಕಾಲದೊಳೆಲ್ಲ ದೀಪವು ವ್ಯರ್‍ಥ – ವಿಜ್ಞಾನೇಶ್ವರಾ *****...

ಮೇಳದೊಳು ಮೈಕಿಟ್ಟು ಕಿವಿಕುಟ್ಟಿ ಪೇಳಲು ಬೇಕೇ? ಸಾಲದೊಳು ಕೊಂಡುಂಬುದನು ಮೇಳದುನ್ನತಿ ಎನಬೇಕೇ? ಮಲೆನಾಡ ಪೇಟೆಯೊಳ್ಯಾಕಿಂಥ ದೀನ ಮೇಳದಾರೈಕೆ? ಬಲು ಬಗೆಯೊಳಾತ್ಮ ಶಕುತಿಯೊಳುಣುವಲ್ಲಿ ಏನೆಂಥ ಕೊರತೆ? ಮೇಳದೊಳಷ್ಟಿಷ್ಟು ಕರಿದ ಹಲಸಿನ ಘಮಲೆದ್ದರದು ಸಾ...

ಕಾಡನು ನಾಡು ಮಾಡಿದದಟಿನುತ್ಸಾಹದೊಳು ನಾಡನು ನಗರ ಮಾಡಿರಲಿಳಿದಂತರ್‍ಜಲದ ಪಾಡನರಿಯದೆ ಮೋಡ ಬಿತ್ತನೆ ಎಂದೊಡೇನಹುದು? ಬಡಬಡಿಸಿ ಮಲೆನಾಡ ನಗರದೊಳಿಂದು ನಡೆಸುವ ನಾಡ ಹಸು ಹಲಸು ಮೇಳಗಳಂತೆ ಮೋಡ ಬಿತ್ತನೆ ಕಂತೆ – ವಿಜ್ಞಾನೇಶ್ವರಾ *****...

ಎಂಥ ದುಃಸ್ಥಿತಿ ಬಂದೊದಗಿತಲಾ ಪುತ್ತೂರು ಮಂಗ್ಲರಂತೂರಿನೊಳು ಹಲಸಿನ ಮೇಳವ ನಾಂತದರ ಆಹಾರದೈಸಿರಿಯನೊರೆವಂತಾಯ್ತಲಾ ಸಂರಕ್ಷಿತಾರಣ್ಯದೊಳು ಜಲಬತ್ತಿ ಬೋರುನೀರೆತ್ತಿ ಟ್ಯಾಂಕರಿನೊಳುಪಚರಿಪತಿರೇಕಕಿದು ಸಮವಾಯ್ತಲಾ – ವಿಜ್ಞಾನೇಶ್ವರಾ *****...

ಉಂಡು ಕೈ ತೊಳೆವಂತೆ ಉರುಚಿ ಅಂಡೊರಸು ವಂತೆ ಎಮ್ಮಡುಗೆಯೆಮ್ಮ ಕೈಯೊಳಾದೊಡದು ಚಂದ. ಅಟ್ಟುಣುವ ಅನ್ನವದೆಮ್ಮ ಮೈ ದುಡಿದು ಬಂದೊಡದು ಮತ್ತಂದ, ಸಿದ್ಧ ವಸ್ತುಗಳಿಂದು ಕೊಂದಿಹುದೆಲ್ಲರಾ ಶುದ್ಧ ಮನದಂದ – ವಿಜ್ಞಾನೇಶ್ವರಾ *****...

ಗಂಡ ಹೆಂಡಿರ ಜಗಳದೊಳು ಕೂಸು ಬಡವಾ ದಂತಾಯ್ತಲಾ ಕೂಪ ಮಂಡೂಕ ನ್ಯಾಯದೊಳು ಗಂಡಿಂದೇನು ಕಮ್ಮಿ ತಾನೆನುತ ಲೋಕವನರಿಯುವ ವಾಂಛೆಯೊಳು ಅಂಬೆಯರಡುಗೆಮನೆವಾರ್‍ತೆ ತೊರೆಯುತಿರೆ ನಂಮ್ಮೊಳನ್ನದರಿವೇ ಕನ್ನದೊರೆಗಳಿಗಾಹುತಿಯಾಗುತಿದೆ – ವಿಜ್ಞಾನೇಶ್ವರಾ ...

1...34567...27

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...