
‘ನಿನಗೀಗ ಬರಿ ಐದು-ಇಪ್ಪತ್ತು ಬೆಳೆದಿಂತು ಬಹಳ ಎತ್ತರವಾದೆ’ ಯೆಂದು ನುಡಿವಳು ತಾಯಿ. ‘ನಿಂತೆಹೆವು ದಡದಲ್ಲಿ; ನಿನ್ನ ಹಡಗದ ಹಾಯಿ ಮುಂದೊಯ್ಯುತಿದೆ ನಿನ್ನ’ : ಸಖರೊರೆವರೊಲವಾಂತು ಎಳೆಯರೆಲ್ಲರು ಕೂಡಿ, ‘ನೀನು ನೋಂಪಿಯನೋಂತು ನಡೆವ ಬಗೆಯನ್ನರುಹು. ತ...
‘ಹುಟ್ಟು ಕುರುಡನು ಇವನು, ಈ ಮಗನಿಗೆಂದೆನ್ನ ಮನೆಗೆ ಮನೆಯೇ ಹಾಳು ಆದ್ ಸಾಲವು ಸಾಲ- ದೆನುವಂತೆ ಆಗಿಹನು ಋಣಗೂಳಿಗಿವ ಮೂಲ ಓದುವದದೇಕಿವನು ಕೊಂಡು ಗ್ರಂಥಗಳನ್ನು? ಕುರುಡರಿಗೆ ಸಾಲೆ! ಭಲೆ! ಏನು ತಿಳಿಯುವದಣ್ಣ, ಆಳರಸುಮನೆತನಕೆ ! ಇದು ಎಂಥ ಅಳಿಗಾಲ? ...
ಅಲ್ಲೊಮ್ಮೆ ಇಲ್ಲೊಮ್ಮೆ ತಾನೆ ಹರಿವುದು ಮನಸಿ- ನಿರುವಿಕೆಯು, ದಿವ್ಯಹರ್‍ಮ್ಯವನೊಮ್ಮೆ ಬೇಡುವುದು ಅರಸರೈಸಿರಿಯೆಲ್ಲ ಬೇಕೆಂದು ಕಾಡುವುದು. ಅನುದಿನವು ಕೊರಗುವುದು ತನ್ನ ಸ್ಥಿತಿ ಕೆಡುಕೆನಿಸಿ. ಒಮ್ಮೆ ಚೆಲುವೆಯರಾದ ಲಲನೆಯರನತಿ ನೆನಸಿ,- ಅವರ ಚಂಚಲ ...
ಏಳೇಳು ಚಲುವತಿಯೆ! ನಿನಗಾಗಿ ತವಕಿಸುತ ನಿಂತಿಹರು ಯೋಗಿಗಳು, ಪಂಧವನೆ ತೊಟ್ಟಿಹರು ಕವಿವರರು ನಿನ್ನ ನೋಡುವದೆಂದು, ಬಿಟ್ಟಿಹರು ದೆಸೆದೆಸೆಗೆ ಬೆಳಕಿನಂಬುಗಳನ್ನು ಚದರಿಸುತ ಕತ್ತಲೆಯನರಸಿಗರು ತಾರೆಗಳು ಚಮಕಿಸುವ ತಮ್ಮ ಕಿರುವೆರಳನ್ನು, ನಲಿಯುವವು. ಮೆ...
ಕೈಲಾಸವೆನ್ನುತಿದೆ ವಿಂಧ್ಯಾದ್ರಿಯನು ಕಂಡು ‘ದಕ್ಷಿಣಾಪಥಕೆಂದು ದಾಂಟಿದನು ಸಾಹಸಿಯು ನಿನ್ನ ನಡಿಮುಡಿ ಮೆಟ್ಟಿ. ನನ್ನ ನೇರುವ ಗಂಡು ಯಾರವನು’ ಬಿಳಿಮೋರೆಗಂಟಿಕೊಂಡಿತು ಮಸಿಯು, ಕರಿಮೊಗವು ಬಿಳಿದಾಯ್ತು, ನನ್ನಡಿಯೆ ಕೈಲಾಸ ಮಾನವಗೆ; ಮತ್ತೆ ಮಂಜು ಮುಸ...














