Home / ಬೇಸಾಯ

Browsing Tag: ಬೇಸಾಯ

ಸತ್ಯವನು ಎತ್ತಿ ತೋರುವ ಬೆಳಕನೊಡೆದಲ್ಲಿ ಸ್ತುತ್ಯದ ಹಸುರಿಹುದದರ ಮಧ್ಯದಲಿ ಎತ್ತಿ ಹೇಳುವುದೆಮ್ಮ ಬದುಕಿನ ಸತ್ಯವಿಹುದಿಲ್ಲಿ ಅತ್ತ ಕೆಂಪೇರಿ ಗರ ಬರ ಬಾರದಿರಲಿ ಇತ್ತ ನೀಲಿಮದ ನೆರೆಯೇರದಿರಲಿ – ವಿಜ್ಞಾನೇಶ್ವರಾ *****...

ಮನೆ ಮನೆಯೊಳೆಮಗೆಷ್ಟೊಂದು ಅಡುಗೆ ಯನುಕೂಲವಿರುತ್ತಿರಲೇನು ಮಲವೆದ್ದು ಘಂ ಮೈನುವ ಬೀದಿ ಬದಿಯನ್ನದಾತುರವೋ? ಮನೆ ಮಡದಿ ಮಕ್ಕಳೊಲವಿನಲಿ ಉಂಬನ್ನ ತನು ಮನವಾಗೆ ಮನೆಯೆ ಮಂದಿರವಕ್ಕು – ವಿಜ್ಞಾನೇಶ್ವರಾ *****...

ಸುರಿದಳೆದು ಕೊಡಬಹುದು ದೊಡ್ಡವರೊಂದಷ್ಟು ತೆರಿಗೆಯದು ಸರಕಾರಕಲ್ಲದೆ ಪ್ರಕೃತಿಗ ದರೊಳಗೆ ಪಾಲಿಲ್ಲವದರಿಂದ ದಿನದಿನವು ಸೊರಗುತಿಹುದದಕಷ್ಟಿಷ್ಟು ಕೊಡುವ ವರು ಏನಿಲ್ಲದವರೆಲ್ಲರಿಗನ್ನದಾತರಾದವರು – ವಿಜ್ಞಾನೇಶ್ವರಾ *****...

ಹಸಿವಿನೊಳಂದು ಗತಿಗೆಟ್ಟು ಮರಗೆಣಸು ಬೇ ಯಿಸುತುಣುತಿದ್ದೆವೆಂದು ವಿಷಾದದೊಳೆನುವರುಂಟು ವಿಷಾದವಿಂದಧಿಕ ಜನ ಮತಿಗೆಟ್ಟು ತಿನ್ವರಲಾ ಮರಗೆ ಣಸನೇಕತರ ಕಲಬೆರಕೆಗೊಳ್ಳುತಿರಲೆಮ್ಮನ್ನದೊಳು ಶಿಶು ಡಬ್ಬದೊಳದುವೆ ಇರುತಿರಲೆಲ್ಲರಾ ಬುದ್ದಿ ಕಲಬೆರಕೆ &#8211...

ಎಲ್ಲರೆಲ್ಲವನು ಮಾಳ್ಪುದಳವಲ್ಲವಾದೊಡಂ ಎಲ್ಲರವರವರೆ ಊಟವನು ಶೌಚವನು ಕ್ಷುಲ್ಲವೆನದರಿತು ಮಾಳ್ಪವಸರ ಉಂಟು ಎಲ್ಲೆಲ್ಲೂ ಕೊಳಚೆಯೊಳಿಪ್ಪ ಖಾನಾವಳಿಯೆಮ್ಮ ಕಲಿಕೆಯ ಸೋಲನರುಹಿ ಪೇಳುತಿದೆ – ವಿಜ್ಞಾನೇಶ್ವರಾ *****...

ಎಂದಾದರೆಲ್ಲಾದರುಂ ತಿನಲೆಮಗಪ್ಪುದಷ್ಟೇ ಅಂದೀ ಮನುಜ ಕುಲವುದಿಸಿದಂದೆಷ್ಟೋ ಅಷ್ಟೇ ಉಂಬುದಷ್ಟಾದೊಡಂ ಹತ್ತಾರುಪಟ್ಟಧಿಕ ಕಷ್ಟ ವಿಂದದನು ಗಳಿಸಲಾ ದೂರದ ಪೇಟೆ ಯಂಗಡಿ ಸೇರಿಸಲೆಲ್ಲ ಶಕುತಿಯು ನಷ್ಟ – ವಿಜ್ಞಾನೇಶ್ವರಾ *****...

ಇರುನೆಲದೊಳನ್ನ ದೊರೆಯುತಿರಲೇಕಿಂತು ನರನಲೆಯುವನೋ ಉದ್ಯೋಗವೆಂದೆನುತ ಊರೂರಲೆದು ಬಂದಿರ್‍ಪ ನೂರೊಂದಮೇಧ್ಯವ ನಾರೋಗಿಸಿದ ರಕುತದೊತ್ತಡದ ಶಕುತಿಯಿಂದೆಮದು ತಿರುತಿರುಗಿ ಬೇಕೆನಿಪ ಶಕುತಿ ಸುರೆಗಿಹುದು – ವಿಜ್ಞಾನೇಶ್ವರಾ *****...

ಅಧಿಕ ಇಳುವರಿಗೆಂದೇನೇನೋ ಮಾಡುತಲಿರಲು ಅಧಿಕವಾಗಿಹುದಲಾ ಎಮ್ಮೊಳಗೆ ರೋಗರುಜಿನಗಳು ಬದನೆ ಬೆಂಡೆಯೊಳಿದ್ದ ರೋಗವನಲ್ಲಿಂದಲೋಡಿಸ ಲದುವೆ ಬಂದಡರಿಹುದೆಮ್ಮ ತನುವಿನೊಳು ಕಾದುವಾ ವಿಷವದರ ಹಿಂದು ಹಿಂದಿನೊಳು – ವಿಜ್ಞಾನೇಶ್ವರಾ *****...

ರುಚಿಯದೆಲ್ಲಿಹುದು? ಬಿಸಿ ಕಾಫಿಯೊಳೇ? ಕಚಗುಳಿಯಯಿಸ್‌ಕ್ರೀಮಿನೊಳೇ? ದುಡಿದುಣುವ ಹಚ್ಚ ಹಸಿವಿನೊಳೇ? ದುಡಿಮೆ ಕಷ್ಟವೆಂದೊಡಾ ರುಚಿಯನುಚ್ಛ ನೀಚೋಷ್ಣತೆಗೇರಿಸಲಿಳಿಸಲು ಹಚ್ಚ ಹಸಿರಿಂಗೆಷ್ಟು ಕಷ್ಟವಿಹುದೆಂದರಿತಿಹಿರಾ ? – ವಿಜ್ಞಾನೇಶ್ವರಾ ***...

ಊಣುವಾರೋಗ್ಯವಿಲ್ಲದೆಲೆ ಅಡುಗೆಯೊಳು ಪ್ರಾ ವೀಣ್ಯದಿಂದೇನು? ವಸನ ವಸತಿ ವಾಹನ ಗ ಡಣಗಳೇನಿದ್ದೊಡೇನು? ನೌಕರಿಯ ವರಕ ರುಣೆಯಲ್ಲದೊಡುಣಿಸೇನು? ಅನ್ನದೊಳನ್ನ ಬೆಳೆ ದುಣುವಾ ಚೈತನ್ಯವಿಲ್ಲದಿಳೆಯೊಳಬಲ ಬದುಕೇನು? – ವಿಜ್ಞಾನೇಶ್ವರಾ *****...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....