ಮುಪ್ಪು

ದೇಹ ಗಳಿಯುತ್ತಿರಲು ಮನಕೆ ಯೌವನವಯ್ಯ ಮನಕೆ ಯೌವನವಿರಲು ಆಸೆಗಳು ಹೆಚ್ಚಯ್ಯ, ಸಾಧಿಸುವ ಶಕ್ತಿಗಳು ಭೋಗಿಸುವ ಶಕ್ತಿಗಳು ಕುಂದುತ್ತ ಬರಬರಲು ನೊಂದು ಸಾಯುವೆವಯ್ಯ. ನರೆಸುಕ್ಕುಗಳ ನೋಡಿ ಮೋಸ ಹೋಗಲು ಬೇಡ ಮನಕೆ ಸುಕ್ಕುಗಳಿಲ್ಲ ಹಿರಿಯತನ ಮುನ್ನಿಲ್ಲ....

ಮುಕ್ತಕ

ಓದದೇ ಬರೇದೇ ಅರೆಘಳಿಗೆ, ಬದುಕಲಾರೆ ಗುರುವೆ, ಸದಾ ನಿನ್ನ ಚರಣದಾಸನು, ಅನಾವರತದಿ ಗುರುವೆ. ಕೃತಕ ನಗೆ, ಸದಾ ಹಗೆ, ನಿತ್ಯ ಸ್ಫೋಟ, ಭೀತಿ ಗುರುವೆ, ನೆಮ್ಮದಿ ಜೀವಕೆ, ಜ್ಞಾನವೊಂದೇ ತಾರಕ ಮಂತ್ರ ಗುರುವೆ. ಓದಿಲ್ಲದೇ...

ತಾಯಿ ಮಗನಿಗೆ ಹೇಳಿದ್ದು

ಸೂರ್ಯ ನೋಡು ನಿನ್ಹಾಗಲ್ಲ ಎಷ್ಟು ಜಾಣ ಕತ್ತಲಾಗೋದರ ಒಳಗೆ ಮನೆಗೆ ಸೇರ್‍ಕೋಳ್ತಾನೆ ಒಂದು ದಿನಾನು ಲೇಟ್ ಮಾಡೋದಿಲ್ಲ ಕತ್ತಲಾದ ಮೇಲೆ ಒಂದು ಕ್ಷಣವು ಆಕಾಶದಲ್ಲಿರೋದಿಲ್ಲ. *****

Navy man ತನ್ನ ಹೆಂಡತಿಗೆ ಬರೆದ ಪತ್ರ

ಎಲ್ಲಾ ಥೇಟ್ ನಿನ್ನ ಹಾಗೆಯೇ ಇವಳು ಸೊಂಟ ಹೊಟ್ಟೆಯ ಸುತ್ತಳತೆ ಬಿಟ್ಟರೆ - ಇರಲಿ ಬಿಡು ನನ್ನ ಮಕ್ಕಳಿಗೆ ಅಮ್ಮ ಅಲ್ಲವೆ ನೀನು. ಮಾತು ಕಡಿಮೆ ಮೌನಿ ಯಾವತ್ತೂ ಕಣ್ಣಂಚಿನ ನಗೆಯವಳು - ಹೋಗಲಿ...

ಯಾತ್ರಿಕ

ಜಡ ಮಾನಸವ ತಟ್ಟಿ ಚೇತನವ ಬಿತ್ತರಿಸಿ ಸಾಗುತಿಹ ಓ ಯಾತ್ರಿಕ ತಾಳಣ್ಣ ನಾ ಬರುವೆ ಹಿಂದಿಷ್ಟು ಸೋತಿರುವೆ ದಿಬ್ಬಗಳ ಹಾಯ್ವತನಕ ಮುಳ್ಳೆಷ್ಟೊ ತುಳಿದಿಹೆನು ಕಲ್ಲೆಷ್ಟೊ ಎಡವಿದೆನು ಹಸಿವಿನಿಂ ಸೊರಗುತಿಹೆನು ನಿಲ್ಲಣ್ಣ ನಿಲ್ಲಣ್ಣ ನಿನ್ನಂಥ ಪಯಣಿಗರ...

ಯಾರು ಜೀವವೇ ಯಾರು ಬಂದವರು

ಯಾರು ಜೀವವೇ ಯಾರು ಬಂದವರು ಭಾವನೆಗಳನೇರಿ? ಒಣಗಿದೆನ್ನೆದೆಗೆ ಮಳೆಯ ತಂದವರು ಬಿಸಿಲ ತೆರೆಯ ಸೀಳಿ? ಬಾನನೀಲಿಯಲಿ ಕರಿ ಬಿಳಿ ಬಣ್ಣದ ಗಾನ ಚಿಮ್ಮಿದವರು? ಕಾನು ಮಲೆಗಳಲಿ ಚಿಗುರು ಹೂವುಗಳ ಚಪ್ಪರ ಬೆಳೆದವರು? ನಸುಕಿನ ಬೆಳಕನು...

ಜಾಣ-ಕೋಣ

"ಎಲ್ಲಾ ತಿಂಡಿಯು ನನಗೇ ಬೇಕು ಎಲ್ಲಾ ಹಣ್ಣೂ ನನಗೇ ಬೇಕು ಆರಿಗು ಚೂರನು ಗೀರನು ಕೊಡೆನು" ಕೊಡೆನೆನ್ನುತ ಎಳ ಮಗ ಹರಮಾಡಿದನು. "ಅಣ್ಣನು ತಮ್ಮನು ಎಲ್ಲರು ಇರುವರು ಅಕ್ಕನು ತಂಗಿಯು ಎಲ್ಲರು ಇರುವರು ನಾನೂ...

ದೀಪಾವಳಿ ದಿನ

ದೀಪಾವಳಿ ದಿನ: ನನ್ನ ಮೈಮನ ಕಮ್ಮಾರನ ಕುಲುಮೇ ಚಟಪಟ ಸಿಡಿವ ಪಟಾಕಿ ಗೂಡು ಎದೆಯಲ್ಲಿ! ದಿವಾಳೆಬ್ಬಿಸಿ, ಪಾತಾಳ ಕಾಣಿಸಿದ ದಿನವ, ನಾ ಹೇಗೆ ಮರೆಲಿ?! ಆದಿಶೇಷನ ತೆರದಿ ಭುಸುಗುಟ್ಟುವೆ! ಕಣ್ಣು ಗುಡ್ಡೆ... ನಿಗಿ, ನಿಗಿ......

ಹೊದಿಕೆ ಹೊದಿಸೋಕೆ

ಕಿಟಕಿಯಲ್ಲಿ ಹಣಕಿದ್ದು ಹನಿಮೂನ್ ಗಂಡು ಹೆಣ್ಣನ್ನ ಕದ್ದು ನೋಡೋಕಲ್ಲ ಮಾರಾಯರೆ, ಹೇಳ್ತಿನಿ ಕೇಳಿ ಹೋದದ್ದು ಪಾಪ, ಬೆತ್ತಲೆ ಮಲಗಿದ್ದವರಿಗೆ ಬೆಳದಿಂಗಳ ಹೊದಿಕೆ ಹೊದಿಸೋಕೆ. *****

ಮರದ ವ್ಯಥೆ

ನಿಮ್ಮ ಮನೆಯಂಗಳಕೆ ಗುಲಾಬಿ ಮಲ್ಲಿಗೆ ಗಿಡವಾಗಿ ಬೆಳೆದಿದ್ದರೆ ನಿಮ್ಮ ಉಡಿಯಲಿ ಬೆಚ್ಚಗಿರುತ್ತಿದ್ದೆ. ಬೆಳೆದಿದ್ದೇನೆ, ಅಲ್ಲಲ್ಲ-ಬೆಳೆಸಿದ್ದಾರೆ ಕಾರ್ಪೊರೇಶನ್‌ದವರು ನಿಮ್ಮ ಕಂಪೌಂಡಿನ ಹೊರಗೆ ಅದಕ್ಕೆ ನಾನು ನಿಮ್ಮ ಮಗುವಲ್ಲವೆಂದು ಗೊತ್ತಾದುದು. ಬೆಳೆಯುತ್ತಿದ್ದೇನೆ ನಿಮ್ಮ ಮಕ್ಕಳನು ನೋಡುತ್ತಾ ಆಟ...
cheap jordans|wholesale air max|wholesale jordans|wholesale jewelry|wholesale jerseys