
ಸೇದಿದಿಯಾ ಬತ್ತಿ ನೀ ಸೇದಿದಿಯಾ ||ಪ|| ಸೇದಿ ಬತ್ತಿಯ ಹೊಗಿ ಊದಿ ಊರ್ಧ್ವಕೆ ನಿಂತು ನಾದ ಬ್ರಹ್ಮದ ಗುರುಪಾದವ ಭಜಿಸಿ ||೧|| ವಿಷಯವನೆಲ್ಲವ ಬಿಟ್ಟು ವ್ಯಸನಕಗ್ನಿಯ ಕೊಟ್ಟು ಹಸನಾದ ಹಸರು ತಂಬಾಕದ ಬತ್ತಿಯ ||೨|| ಸಧ್ಯಕ್ಕೆ ಶಿಶುನಾಳ ಸದ್ಗುರು ದಯದಿ...
ಕರುಣಿಕರು ಕೊಟ್ಟ ಅರಪಾವ ಜೋಳದಿಂದ ಹೊಟ್ಟೆ ಬರ ಹಿಂಗುವುದ್ಯಾಂಗಲೋ ಮನಸೇ ||ಪ|| ಸ್ಥಿರವಲ್ಲ ಸಂಸಾರ ಕೆರವಿನಟ್ಟಿಯ ಸರಿ ಬರಿದೆ ಆಸೇಕ ಬಿದ್ದೆಲ್ಲೋ ಮನಸೇ ||ಅ.ಪ.|| ನೇಮಿಸಿ ದೇಶಪಾಂಡೆ ಭೀಮರಾಯನೆಂಬೊ ನಾಮವನು ಕೇಳಿ ಬಂದೆಲ್ಲೋ ಮನಸೇ ಇವನ್ನು ಕೊಡುತ...
ಬಿಡತೇನಿ ದೇಹ ಬಿಡತೇನಿ ||ಪ|| ಬಿಡತೇನಿ ದೇಹವ ಕೊಡತೇನಿ ಭೂಮಿಗೆ ಇಡತೇನಿ ಮಹಿಮಾದ ನಡತೆ ಹಿಡಿದು ದೇಹಾ ||೧|| ಪಾವಕಗಾಹುತಿ ಮಾಡಿ ಜೀವನದಸು ನಾ ಬೇರೆ ಬೈಲು ಬ್ರಹ್ಮದೊಳಾಡುತಲಿ ದೇಹಾ ||೨|| ಅವನಿಯೊಳು ಶಿಶುನಾಳಧೀಶನೆ ಗತಿಯೆಂದು ಜವನ ಬಾಧೆ ಗೆದ್ದ...
ಕಲ್ಯಾಣಿಯು ಕರುಣವಾಯಿತು ನಮಗ ||ಪ|| ಮಲ್ಲೇಶ ಕೇಳೆಲೋ ಸುಣ್ಣ ತಂಬಾಕವು ಸೊಲ್ಲು ಸಾರಿತು ಗುಲ್ಲುಎನಿಸುತಲಿ ||ಅ.ಪ.|| ಕಲ್ಯಾಣದಿಂ ಹೊರುಟು ದಾರಿ ಹಿಡಿದಿರುತಲಿ ಶಿಗ್ಗಲಿಯೊಳು ಬಾಯಲಿ ನುಡಿದ ಪರಿಪರಿಯ ಮೋಹಕ್ಕೆ ಬೆರೆತು ಕಾಲಿಡುತಲಿರೆ ಸರಸದಿ ಭೀಮಗ...
ದತ್ತೂರಿ ಕೊಟ್ಟವನು ಸತ್ತುಹೋಗಲಿ ಸಾಂಬಾ ಮತ್ತೆ ಅವರಿಗೆ ಮರಣ ಮೂರು ತಿಂಗಳಿಗೆ ಚಿತ್ತದೊಳು ಮಹೇಶಮಂತ್ರ ಜಪದೊಳಿರಲು ಮೃತ್ಯುವಿನ ಭಯವ್ಯಾಕೆ ಮರೆಯದಿರು ಸಾಂಬಾ ||೧|| ಮೂರು ದೇಹದೊಳಿದ್ದು ತೋರುತಿಹ ಭವಗೆದ್ದು ಮೀರಿ ನಡೆದವನಿಗಿದು ಬರಲರಿಯದು ತಾರಕದ...
ಬುದ್ಧಿ ಇಲ್ಲವೇ ನಿನಗೆ ನಿದ್ರೆಯೆಂಬೋ ನಿಜ ಹಾದರಗಿತ್ತಿ ? ||ಪ|| ಸಿದ್ಧ ಜ್ಞಾನದೊಳ್ ಇರುತ್ತಿರಲಾಕ್ಷಣ ಕದ್ದಡಗಿದೀಕಾಯದ ಮನೆಯೊಳು ಎದ್ದು ನೋಡಿದರೆ ಎಲ್ಲಿ ಪೋದಿಯೋ ? ||೧|| ಸೋಗ ಮಾಡಿ ನೀ ಹ್ಯಾಂಗಾರ ಬರತಿ ತೂಕಡಿಕಿಯೆಂಬಾಕಿ ನೀ ಬಲು ಗರತಿ ಬಾಗಿ...
ಸಣ್ಣ ಹುಡುಗನ ಶಡುವಿಗೆ ಮಿಡಿಕ್ಯಾಡೋ ಮನಕ ಮಚ್ಚಿಲ್ಹೊಡೆದು ||ಪ|| ಅಣಕವಾಡು ಶಿವನಂದಿ ಪಿಟೀಲಿಗೆ ತುಣಕ ಚರಂತಿಯ ತಾಳ ಕುಟೀಲಗೆ ಹೆಣಕ್ಯಾಡುವ ಸೊಟ್ಟದ ಕೌಚಾಪಿಗೆ ಕಣಕಹಚ್ಚಿ ಬಾರಿಸುವ ಮೃದಂಗದ ಘನಶಾಸ್ರ ಅರಿಯದ ಗುಣಗೇಡಿಗಳಿಗೆ ||೧|| ಹೊಸಹಳ್ಳಿ ಗ್ರ...
ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ ನಾಗಲಿಂಗಯೋಗಿ ತಾನು ತಿರುಗುವುದ್ಯಾತಕೆ ||ಪ|| ದುರಿತಭವದ ಯೋಗದಿಂದ ವಾದವ್ಯಾತಕೆ ವಾದದಿಂದ ಸಿದ್ಧಯೋಗ ಮಾಡುವುದ್ಯಾತಕೆ ||೧|| ನಾಗಲಿಂಗಯೋಗಿ ತಾನು ತಿರುಗುವುದ್ಯಾತಕೆ ಬಗಳಾಮುಖಿಯ ಮಗನಕೂಡ ರಗಳಿಯಾತಕೆ |...
ಕುಲಕರ್ಣಿ ಕೊಟ್ಟ ಪಾವಲಿ ರೊಕ್ಕದೀ ಬ್ರಹ್ಮನೆಲಗಾಂಬುದ್ಯಾಂಗಲೋ ಮನಸೇ ಬಲುದಿನದ ಸಲಗಿಯಲಿ ಸಾಲಿ ಬರಸಿದ ಸ್ನೇಹ ತಿಳಿದು ಇಲ್ಲಿಗೆ ಬಂದೆಲ್ಲೇ ಮನಸೇ ||೧|| ಪೊಡವಿಯೊಳು ಗುಡಗೇರಿ ಹಿರಿಯ ಪೋಲೀಸ- ಗೌಡ ಕರೆದರೆ ಇಲ್ಲಿಗೆ ಬಂದೆಲ್ಲೇ ಮನಸೇ ಕಡು ಹರುಷ ಇವ...
ಸೂಜಿಯೇ ನೀನು ಸೂಜಿಯೇ ಈ ರಾಜ್ಯದೊಳಗೆಲ್ಲ ತೇಜ ಕಾಣಿಸುವಂಥ ||ಪ|| ಹರಿಯ ಶಿರದಮ್ಯಾಲೆ ಮೆರೆದಂಥ ಸೂಜಿಯೇ ಹರನ ಕಪಾಲದಿ ಬೆರೆದಂಥ ಸೂಜಿಯೇ ಮರವಿಯ ಅರವಿಯ ಹೊಲಿವಂಥ ಸೂಜಿಯೇ ಮರೆ ಮೋಸವಾಗಿ ಮಾಯವಾದಂಥ ಸೂಜಿಯೇ ||೧|| ತಂಪುಳ್ಳ ಉಕ್ಕಿನೊಳ್ ಹುಟ್ಟಿದ ಸ...













