ಸಾಮಾನ್ಯ

ಏನ ಮಾಡಿ ಒಗದ್ಯೋ, ಯಾತರಿಂದ ಮಾಡಿ ಒಗದ್ಯೋ, ತಂದೆ! ಇವನು ಎಷ್ಟು ಹಂಡ ಬಂಡ, ಎಷ್ಟು ಅಡಸಲ ಬಡಸಲ, ಬೆಳದಂಗೆಲ್ಲಾ ಬಿಚಿಗೆಂಡು ಹೊಂಟಂಗೆ ಯಾವ್ದೋ ಕಗ್ಗಂಟು, ಎಲ್ಲಾ ಗೊತ್ತಾಗಿತ್ತೇನೊ ಅನುವಂಗೆ ಒಂದೊಂದೇ ಕಂಡಿ, ಒಂದೊಂದೇ...

ಎಲ್ಲವನ ಜಾತ್ರೆ

ಹಗಲ ಭಂಡವಾಳವು ಇರುಳ ಕಾರಖಾನೆಯ ಸೇರುವುದು ಹಲ್ಲು ಮಸೆದು ಕಬಳಿಸಿತು ಯಂತ್ರ ಮಂತ್ರವೂದಿ ಚೇತನಗೊಳಿಸಿತು ತಂತ್ರ ಅವರಿವರ ಭಂಡವಾಳಗಳ ಮೇಲೆ ಹೂಡಿದ ಬೃಹದುದ್ಯಮವಿದು ಬಡ್ಡಿಗೆ ಬಡ್ಡಿ ಸೇರಿ ಬೊಡ್ಡೆ ಬಲಿತಿದೆ ಮೂಲ ಅಸಲೆಲ್ಲೋ ಒಂದೆರಡು...

ಮಾನ

ಅಂತರದಲ್ಲಾಡುವಳತೆಗೋಲು ಅಳೆದೂ ಸುರಿದೂ ಹಗಲಿರುಳು ಬಟ್ಟೆ ತೊಡಿಸುತ್ತದೆ-ಕಳಚುತ್ತದೆ-ತೊಡಿಸುತ್ತದೆ ತನಗೆ ಸರಿಕಂಡಂತೆ ಕೆಲವ ತಲೆಮೇಲಿಂದಿಳಿಬಿಡುತ್ತದೆ ಮತ್ತೆ ಕೆಲವ ಕಾಲೊಳಗಿಂದ ಮೇಲೇರಿಸುತ್ತದೆ ಕೆಲವು ಸೈಲು ಜೋಲಾಗಿ, ನೆಲ ಬಳಿಯುತ್ತಾ ಹರಿದು ಚಿಂದಿಯಾಗುತ್ತವೆ ಕೆಲವು ನನ್ನ ಮೈಕೈ ಕಾಲುಗಳೊಡನೆ...

ದಾರಿ ಬಿಡಿರೋ

ದಾರಿ ಬಿಡಿರೋ ಇವನಿಗೆ, ಉಸಿರು ಕಟ್ಟಬೇಡಿ, ದಾರಿ ಕಟ್ಟಬೇಡಿ ಹುಲಿಕರಡಿಗಳಂತೆ ಹೆದರಿಸಬೇಡಿ ಮರಿಗಿಳಿಯಂತಿವನು ಕತ್ತಿ ಬಡಿಗೆಗಳನಾಡಿಸಬೇಡಿ ಬಳ್ಳಿ ಚಿಗುರಿನಂತಿವನು ಮುಳ್ಳು ಕಲ್ಲುಗಳ ಹರವಬೇಡಿ, ಹೂಪಾದ ಇವನವು ಕೋಲಾಹಲದಲೆಯಪ್ಪಳಿಸಬೇಡಿ ಆಶ್ರಮ ಶಾಂತಿಯಲ್ಲರಳಿದ ಕಿವಿಯಿವನವು ಉರಿಮಾರಿಯ ಮೆರವಣಿಗೆ...

ದೌರ್ಬಲ್ಯ

ತಾಯಿ ಸೊಟಕ್ಕಂಟಿದ್ದ ದೌರ್ಬಲ್ಯವು ಬೆಳೆಬೆಳೆದು ಹೆಮ್ಮರವಾಗಿ ಬಳ್ಳಿ ನಡು ಬಳಸುವುದು ಕಾಲ ಬಳಸಿದ್ದೀಗ ಕೈಯ ಟಳಕುವುದು ಜೊಲ್ಲು ಸುರಿಸುತ್ತಾ ನಿಂತ ನಾಯಿಯ ಕಾಲಕೆಳಗೇ ಅದರ ಸೆರೆ ಬಿಡಿಸಿಕೊಳ್ಳಲು ಹವಣಿಸುತ್ತದೆ ನೆರಳು ಪ್ರಾಬಲ್ಯ ಬದುಕು ರಥವನ್ನೆಳೆವ...

ಕಳ್ಳುಬೇರು

ನೀತಿ ನೇಮಾ, ರಾಜಕೀಯಾ, ಧರ್ಮ, ಕುಲ ಆಚಾರ ಇವೆಲ್ಲ ಮೈಮ್ಯಾಲಿನ ಬಟ್ಟೆಗಳಂಗೆ ಕಾಲಕಾಲಕ್ಕೆ ಅವಶ್ಯಬಿದ್ದಂಗೆ ಹೊತ್ತು ಬಂದಂಗೆ ಹಿಗ್ಗಿಸಿಯೋ, ಕುಗ್ಗಿಸಿಯೋ, ಕತ್ತರಿಸಿಯೋ, ಸೇರಿಸಿಯೋ ಬದಲಾವಣೆ ಮಾಡಿಕೊಂತೀವಿ ಬ್ಯಾರೆ ಬ್ಯಾರೆ ರೀತಿ ಹೊಂದಿಸಿ ಉಟುಗೊಂತೀವಿ ಎಲ್ಲಕ್ಮೊದಲು...

ಅಳು

ಅದು ಅಳುತ್ತಲೇ ಇದೆ ಅಳುವೇ ಹುಟ್ಟಿ ಅಳು ಹೊಳೆಯಾಗಿ ಹರಿದಿದೆ, ಅದು ನಕ್ಕರೂ ಅತ್ತಂತೆಯೇ ಇರುತ್ತದೆ ಅದರ ಅಳುವು ನೋಡಿದವರಿಗೆ ಅಳು ಬರುವುದಿಲ್ಲ. ಮನೆ ತುಂಬ ಮಂದಿ, ಉಂಡುಡಲು ಬೇಕಾದಷ್ಟು ತುಂಬಿದ್ದರೂ ಅದು ಅಳುತ್ತಲೇ...

ಸಾಕು ಮಾಡೋಣ

ಪುರಾಣ ಪುಣ್ಯಕಥೆಗಳ ಮಿಥ್ಯಾಲಾಪಗಳು ಇನ್ನು ಸಾಕು ಮುಗಿಲ ಮಲ್ಲಿಗೆಗಳ ಮೂಸುವ ಭ್ರಮೆ ಇನ್ನು ಸಾಕು, ಕಾಣದುದರ ಕೈಕಾಲುಗಳಿಗೆ ಜೋತಾಡಿ ಕರ್ರಗೆ ಕಲೆಕಲೆ ಮಾಡಿದ್ದ ಕಂತೆಗಳು ಇನ್ನು ಸಾಕು ಇದೋ ನೋಡಿ ನಿಮ್ಮ ಮುಂದಿರುವುದು ಪುಣ್ಯ...

ಚಾರಿತ್ರಹೀನಳ ಚರಿತ್ರೆ

ಇವಳ ಹುಲ್ಲು ಹುದುಗಲಿನಂಥ, ಕಳ್ಳಕೆಸರಿನಂಥ, ವಿಲವಿಲಿ ಹುಳ ಹರಿದಾಡುವಂಥ ಚಾರಿತ್ರ ಹೀನ ಚರಿತ್ರೆಯು ಪಾತಾಳಕ್ಕೆ ಬೇರಿಳಿಸಿದೆ ಮೇಲಿನ ತೊಳೆಯೋಣ ತಿಕ್ಕೋಣಗಳೆಲ್ಲ ಮೋಟುಮರಕ್ಕೆ ಗಾಳಿ ಮಾಡುವ ಪರಿಣಾಮವಷ್ಟೆ ಸಾವಿರಾರು ವರ್ಷಗಳ ಇವಳ ಹಳಸು ರೋಗ ವಂಶಾನುಗತವಾಗಿ...

ಎಲ್ಲದಾನವ್ನು ಮನಸ್ಯಾ

ಈ ಜಂಗಳ್ಯಾಗೆ ಎಲ್ಲದಾನವ್ನು ಮನಸ್ಯಾ ಅಂಬೋನು ಕೆಲವು ಕಾಗದಾ ತಿಂಬೋ ಕತ್ತೆಗ್ಳು ಕೆಲವು ಮೈಗೆ ಮಣ್ಣುಮೆತ್ತಿಗೆಂಡು ಮಣ್ಣುತಿಂಬೋ ಮುಕ್ಕುಗ್ಳು ಕೆಲವು ಹೆಣಾತಿನ್ನೋ ಹದ್ದುಗಳು ಕೆಲವು ಮಾಂಸಾ ಮೂಸೋ ನಾಯಿಗಳು ಕೆಲವು ದುರ್ವಾಸನೆ ಗಟಾರದೊಳಗೇ ಹೊರಳೋ...