ಸಿಹಿಯಾದ ಶಿಕ್ಷೆ

ಆರನೇ ಕ್ಲಾಸಿನ ಹುಡುಗಿ ಹೋಂ ವರ್ಕ್ ಮಾಡದೇ ಶಾಲೆಗೆ ಬರುತಿದ್ದಳು. ಮೇಷ್ಟ್ರಿಗೆ ಕೋಪ ಬಂದು "ಶಾಲೆಯ ಗಿಡ ಮರಗಳಿಗೆ ನೀರು ಹಾಕಿ ಬಾ" ಎಂದು ಶಿಕ್ಷೆ ಕೊಟ್ಟರು. ಹುಡುಗಿಗೆ ಬೇಸರವೂ ಆಗಲಿಲ್ಲ. ಕಣ್ಣೀರು ಬರಲಿಲ್ಲ....

ಟೂ ಬಿಡಲು ಕಾರಣ

ಎರಡು ಪುಟ್ಟ ಹುಡುಗಿಯರು "ಟೂ, ಟೂ" ಎಂದು ಜೊತೆ ಬಿಟ್ಟರು. ಒಂದು ಪಟ್ಟು ಹುಡುಗ ಬಂದು ಕೇಳಿದ "ಏಕೆ ಟೂ ಬಿಡ್ತೀಯಾ?" ಎಂದು. "ಅಲ್ವೋ, ಅವಳು ನನ್ನ ಎಡಗಾಲಿನ ಚಪ್ಪಲಿ ಬಲಗಾಲಿನ ಕಡೆ ಇಟ್ಟಿದ್ದಾಳೆ....

ಸುನಾಮಿ

ಅವನೊಬ್ಬ ಚಿತ್ರಕಾರ. ಸುಂದರ ನಿಸರ್ಗದ ಚಿತ್ರದಲ್ಲಿ ಸಮುದ್ರದ ಕಿರು ಅಲೆಗಳು ತೇಲಿ ಬರುವುದನ್ನು ಚಿತ್ರಿಸುತ್ತಿದ್ದ. ಗೆಳೆಯ ಕೇಳಿದ "ಭೋರ್ಗರೆವ ಅಲೆಗಳನ್ನು ಏಕೆ ಬಿಡಿಸುತ್ತಿಲ್ಲ?" ಎಂದು. ಸುನಾಮಿ ಅಲೆ ಬಿಡಿಸಲಾರೆ ಆಚೆ ದಡದಲ್ಲಿ ನನ್ನ ಪ್ರಿಯೆ...

ಕೊರಗು

ಅವನೊಬ್ಬ ಕಾಮುಕ. ಮೊದಲ ಹೆಂಡತಿಗೆ ಮೂರು ಮಕ್ಕಳಾದ ಮೇಲೆ ಅವಳನ್ನು ಬಿಟ್ಟು ಎರಡನೇಯ ಮದುವೆ ಆದ. ಅವಳಿಗೆ ಎರಡು ಮಕ್ಕಳಾದ ಮೇಲೆ ಮೂರನೇಯವಳನ್ನು ಕಟ್ಟಿ ಕೊಂಡ. "ನನ್ನದು ಇದೀಗ ಪುನರ್ ಜನ್ಮ. ನಾನು ಇವಳೊಂದಿಗೆ...

ಸತ್ಯ ಸಾಯಲಿಲ್ಲ

ಹುಡುಗಿ ತಪ್ಪು ಹೆಜ್ಜೆ ಇಟ್ಟಿದ್ದಳು. ಸಮಾಜವನ್ನು ಎದುರಿಸಲಾರದಾದಳು. ಸತ್ಯವನ್ನು ಹೂತಿಡಲು ಆತ್ಮಹತ್ಯೆ ಮಾಡಿಕೊಂಡಳು. ಅವಳು ಸತ್ತಳು. ಸತ್ಯ ಸಾಯಲಿಲ್ಲ. "ಅವಳಿಗೆ ಮೂರು ತಿಂಗಳು ತುಂಬಿತ್ತು" ಎಂಬ ಸತ್ಯ ಎಲ್ಲರ ಬಾಯಲ್ಲೂ ಕುಣಿದಾಡುತಿತ್ತು. *****

ದೇವರ ಕುಂಕುಮ

ದೇವಸ್ಥಾನಗಳಲ್ಲಿ ಕೊಟ್ಟ ಕುಂಕುಮವನ್ನು, ಕುಂಕುಮ ಭರಣಿಯಲ್ಲಿ ತುಂಬಿಡುತಿದ್ದಳು ಆಕೆ. ಮನೆಗೆ ಬಂದ ವಿಧವೆಯರಿಗೆ ನಿಸ್ಸಂಕೋಚವಾಗಿ ಉದಾರ ಮನಸ್ಸಿನಿಂದ ದೇವರ ಕುಂಕುಮ ತೆಗೆದುಕೊಳ್ಳಿ ಎನ್ನುತ್ತಿದ್ದಳು. ಅವರನ್ನು ಬೀಳ್ಕೊಡುವಾಗ ಅವರು ಕುಂಕುಮ ಪ್ರಸಾದದೊಂದಿಗೆ ವೀಳ್ಯ ತೆಗೆದುಕೊಂಡು ಕಳೆದು...

ದುಬಾರಿ ಮುಗುಳು ನಗೆ

ಅವರು ಸಲಹಾ ಕೇಂದ್ರದಲ್ಲಿ ಮಾನಸಿಕ ರೋಗಿಗಳಿಗೆ ಆಪ್ತ ಸಲಹೆ ನೀಡುತ್ತಿದ್ದರು. ಇವರು ಎಷ್ಟು ನನ್ನ ಹತ್ತಿರದವರಾಗಿ ಮನದಾಳದಲ್ಲಿ ಹೊಕ್ಕು ಸಲಹೆ ನೀಡುತ್ತಾರೆ ಎಂದು ಅನಿಸುತಿತ್ತು. ರೋಗಿಯನ್ನು ರಸ್ತೆಯಲ್ಲೋ, ಮಾರುಕಟ್ಟೆಯಲ್ಲೋ ಎದುರಾದಾಗ ಅಪರಿಚಿತರಂತೆ ಹೋಗಿಬಿಡುತ್ತಿದ್ದರು. ರೋಗಿಗೆ...

ತಮಿಳ್ ಸೆಲ್ವಿ

ಮನೆಕೆಲಸಕ್ಕೆ ಬರುತಿದ್ದ ಇಪ್ಪತ್ತು ವರ್ಷದ ಸೆಲ್ವಿಗೆ ಆಂಗ್ಲ ಭಾಷೆಯ ಮೋಹ. "ಆಂಟೀ ಓಪನ್ ದ ಡೋರ್" ಎಂದು ಒಳಗೆ ಬರುತ್ತಿದ್ದ ಅವಳು ಆಂಟಿಯ ಎಲ್ಲಾ ಪ್ರಶ್ನೆಗೆ "ಎಸ್ ಆಂಟಿ, ನೋ‌ಆಂಟಿ, ಐ ನೋ ಆಂಟಿ"...

ಮಾತೃವಾತ್ಸಲ್ಯ

ಅಂಗಳಕ್ಕೆ ಹಾಕಿದ ಬೇಲಿ ಹತ್ತಿರ ನಿಂತಿದ್ದೆ. ಇದ್ದಕ್ಕಿದ್ದಂತೆ ಆಕ್ರಂದನ ಕೇಳಿಸಿತು. ಬೇಲಿಮುರಿದು ಒಳನುಗ್ಗಿದೆ. ಮನೆಯ ಕತ್ತೆಲೆಯ ಮೂಲೆಯಲ್ಲಿ ಎರಡು ಹೋಳಪಿನ ಮಿಣ ಮಿಣ ಕಣ್ಣುಗಳು ಕಾಣಿಸಿದವು. ಮಲಗಿದ್ದ ಮಗು ಎದ್ದು ಕಿಟಾರನೆ ಕಿರಚಿತು. ತಂದೆಯಾದಾವನು...

ಪರಿವರ್ತನೆ

ಬಾಳಿನಲ್ಲಿ ಪರಿವರ್ತನೆ ಬಯಸಿ ಅವನು ದಿನವೂ ಮನೆಯ ವಸ್ತುಗಳ ಸ್ಥಳಾಂತರ ಮಾಡುತಿದ್ದ. ಮನೆಯಲ್ಲಿದ್ದ ಸೋಫ, ಮಂಚ, ಹೂದಾನಿ, ಪುಸ್ತಕಗಳು, ಚಪ್ಪಲಿ, ಹೂಗಳನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ, ಮೂಲೆ ಮೂಲೆಗೆ ಬದಲಾಯಿಸಿ, ಬಾಳಲ್ಲಿ ಏನು...
cheap jordans|wholesale air max|wholesale jordans|wholesale jewelry|wholesale jerseys