ಆನು ಪೇಳಿದೆಲ್ಲವನು ಮಾಡದೊಡೇನಂತೆ ?

ಆನು ಪೇಳಿದೆಲ್ಲವನು ಮಾಡದೊಡೇನಂತೆ ? ಆನಿಲ್ಲ ಪೇಳಿದೆಲ್ಲವನು ಆನು ಮಾಡಿ ದೆನೆಂದಿಲ್ಲ ಆನೆಷ್ಟು ಮಾಡಿಹನೆಂದು ಆನು ಪೇಳುವುದಲ್ಲ, ಬುದ್ಧಿಮಾತನು ಎನಗಾನೇ ಪೇಳಿ ಆದನಾನೇ ಕೇಳಿ ಆನೆಷ್ಟು ಮಾಡಿದರಷ್ಟು ಲಾಭವೆನಗೆ - ವಿಜ್ಞಾನೇಶ್ವರಾ *****

ಪರಿಪರಿ ನೆನೆದೊಡಾ ಐದೆನ್ನ ಕಾಯದೇ ?

ಪರಿಪರಿ ನೆನೆದೊಡಾ ಐದೆನ್ನ ಕಾಯದೇ ? ಪ್ರಕೃತಿಯೊಳೈದಕ್ಕೆ ಉನ್ನತದ ಬೆಲೆಯುಂಟು ಪಂಚಭೂತಂಗಳೆಲ್ಲ ಜೀವದೊಳುಂಟು ಪ್ರಾಣಂಗಳೆಮ್ಮೊಳೈದು ಇಂದ್ರಿಯಂಗಳೈದು ಪಿಡಿವ ನಡೆದ ಬೆರಳೈದು ಅಂತೆನ್ನ ಕವನಕು ಪಂಕ್ತಿಗಳೈದು - ಅದುವೆ ಕಾಯಲಿ ಎಂದೆನುತ - ವಿಜ್ಞಾನೇಶ್ವರಾ *****

ಪೇಳಲಾಪರಿ ಕಿರಿದಾಗಿ, ಬೇಕಲ್ಲಾ ಹಿರಿ ಪ್ರತಿಭೆ?

ಪೇಳಲಾಪರಿ ಕಿರಿದಾಗಿ, ಬೇಕಲ್ಲಾ ಹಿರಿ ಪ್ರತಿಭೆ? ಪೇಳಿಹರೆಮ್ಮ ಹಿರಿಯರವರ ಜೀವನ ದೊಳುಂಡನುಭವವ ಮೂರ್‌ನಾಕು ಸಾಲಿ ನೊಳು, ಮಂತ್ರದೊಳು, ಗಣಿತದೊಳು ಕೇಳಿದೆನಗಂತೆ ಕವನದ ಕಂತೆಯೊಳಿಡಲು ಬಾಳಿನನುಭವ ಸಾಲದೆನ್ನ ಸಾಲುಗಳೈದಾಗಿಹವು -ವಿಜ್ಞಾನೇಶ್ವರಾ *****

ಕವನವೆನ್ನದಿದ್ಯಾಕೆ ಪ್ರಶ್ನೋತ್ತರದಂತಿಹುದು?

ಕವನವೆನ್ನದಿದ್ಯಾಕೆ ಪ್ರಶ್ನೋತ್ತರದಂತಿಹುದು? ಜೀವನವೆಂದೊಡೇನದರ ಅಂದಾನಂದವದೇನು? ನಾವೇನು ಮಾಡಿದೊಡೇನು? ಮಾಡದೊಡೇನು? ತವಕದೊಳೇಳ್ವ ಪ್ರಶ್ನಾವಲಿಯ ಮೇಲೆಮ್ಮ ಜೀವನವೆ ನಿಂದಿಹುದದರಿಂದ ನಿಲಿಸಿಹೆನೆನ್ನ ಕವನಗಳ ಪರಿಪರಿಯ ಪ್ರಶ್ನೆಗಳ ಮೇಲೆ - ವಿಜ್ಞಾನೇಶ್ವರಾ *****

ಲಿಂಗಮ್ಮನ ವಚನಗಳು – ೧೦೧

ತನು ಕರಗಿತ್ತು. ಮನ ನಿಂದಿತ್ತು. ಉಲುಹು ಅಡಗಿತ್ತು. ನೆಲೆಗೆ ನಿಂದಿತ್ತು. ಮನ ಪವನ ಬಿಂದು ಒಡಗೂಡಿತ್ತು. ಉರಿ ಎದ್ದಿತ್ತು. ಊರ್ಧ್ವ ಕ್ಕೋಡಿತ್ತು. ಶರಧಿ ಬತ್ತಿತ್ತು. ನೊರೆ ತೆರೆ ಅಡಗಿತ್ತು. ಅಷ್ಟ ಮದವೆಲ್ಲ ಹಿಟ್ಟುಗುಟ್ಟಿತ್ತು. ಕರಣಂಗಳೆಲ್ಲ...

ಲಿಂಗಮ್ಮನ ವಚನಗಳು – ೧೦೦

ಬೆಟ್ಟ ಬೆಂದಿತ್ತು. ಬಿದಿರುಗಣ್ಣು ಒಡೆದಿತ್ತು. ಸುತ್ತನೋಡಿದರೆ ನಿರಾಳವಾಯಿತ್ತು. ಕತ್ತಲೆ ಹರಿಯಿತ್ತು. ಮನ ಬತ್ತಲೆಯಾಯಿತ್ತು. ಚಿತ್ತ ಮನ ಬುದ್ಧಿ ಏಕವಾದವು. ಎಚ್ಚತ್ತು ನೋಡಿದರೆ, ಬಚ್ಚಬರಿಯ ಬೆಳಗಲ್ಲದೆ, ಕತ್ತಲೆಯ ಕಾಣಬಾರದು ಕಾಣಾ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಲಿಂಗಮ್ಮನ ವಚನಗಳು – ೯೯

ಮನ ಮಂಕಾಯಿತ್ತು. ತನುವು ಮರೆಯಿತ್ತು. ವಾಯು ಬರತಿತ್ತು. ಉರಿ ಎದ್ದಿತ್ತು. ಹೊಗೆ ಹರಿಯಿತ್ತು. ಸರೋವರವೆಲ್ಲ ಉರಿದು ಹೋಯಿತ್ತು. ಒಳಗೆ ಹೊಕ್ಕು ಕದವ ತೆಗೆದು ಬಯಲ ನೋಡಿ, ಬೆಳಗಕೂಡಿದಲ್ಲದೆ ನಿಜ ಮುಕ್ತಿ ಇಲ್ಲವೆಂದರು ನಮ್ಮ ಅಪ್ಪಣಪ್ರಿಯ...

ಲಿಂಗಮ್ಮನ ವಚನಗಳು – ೯೮

ನೋಡಿಹೆನೆಂದರೆ ನೋಟವಿಲ್ಲ. ಕೇಳಿಹೆನೆಂದರೆ ಕಿವಿ ಇಲ್ಲ. ವಾಸಿಸಿಹೆನೆಂದರೆ ನಾಸಿಕವಿಲ್ಲ. ನುಡಿದಿಹೆನೆಂದರೆ ಬಾಯಿಲ್ಲ. ಹಿಡಿದಿಹೆನೆಂದರೆ ಹಸ್ತವಿಲ್ಲ. ನಡೆದಿಹೆನೆಂದರೆ ಕಾಲಿಲ್ಲ. ನೆನೆದಿಹೆನೆಂದರೆ ಮನವಿಲ್ಲ. ಇಂತು ನೆನಹು ನಿಷ್ಪತ್ತಿಯಾಗಿ, ಶರಣರ ಪಾದಲ್ಲಿಯೆ ಬೆರೆದು ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಲಿಂಗಮ್ಮನ ವಚನಗಳು – ೯೭

ಅಂಗವ ಮರೆದಂಗೆ ಲಿಂಗದ ಹಂಗೇಕೊ? ಅರವ ಕಂಡವಂಗೆ ಕುರುಹಿನ ಹಂಗೇಕೊ? ತಾನು ತಾನಾದವಂಗೆ ಧ್ಯಾನದ ಹಂಗೇಕೊ? ಮನಮುಗ್ಧವಾದವಂಗೆ ಮಾನವರ ಹಂಗೇಕೊ? ಆಸೆಯನಳಿದವಂಗೆ ರೋಷದ ಹಂಗೇಕೊ? ಕಾಮನ ಸುಟ್ಟವಂಗೆ ಕಳವಳದ ಹಂಗೇಕೊ? ನಡೆಗೆಟ್ಟವಂಗೆ ನುಡಿಯ ಹಂಗೇಕೊ?...

ಲಿಂಗಮ್ಮನ ವಚನಗಳು – ೯೬

ಕಾಯವೆಂಬ ಕದಳಿಯ ಹೊಕ್ಕು, ಜೀವ ಪರಮರ ನೆಲೆಯನರಿದು, ರಸ, ರುಧಿರ, ಮಾಂಸ, ಮಜ್ಜೆ, ಮಿದುಳು, ಅಸ್ಥಿ, ಶುಕ್ಲ ಈ ಸಪ್ತ ಧಾತುಗಳ ಸಂಚವ ತಿಳಿದು, ಮತ್ತೆ ಮನ ಪವನ ಬಿಂದುವನೊಡಗೂಡಿ ಉತ್ತರಕ್ಕೇರಿ ನೋಡಲು, ಬಟ್ಟಬಯಲಾಗಿದ್ದಿತ್ತು....
cheap jordans|wholesale air max|wholesale jordans|wholesale jewelry|wholesale jerseys