
ಒರೆಯುವೊಡೆ, ಬರೆಯುವೊಡೆ ಸಾಲದದು ಕೃಷಿಯ ಕುರಿತೋದಿದೊಡೆ. ಮಾಡದೋದಿದ ಮಂಡೆ ಬರಿ ಗೂಡೆ ಕೊರಡ ನೆಟ್ಟು ನೀರೆರೆದೊಡದು ಮರವಪ್ಪುದುಂಟೇ? ಸೂರ್‍ಯ ಸಂಶ್ಲೇಷಣೆಯ ಕಷ್ಟವನಿಷ್ಟದೊಳನುಭವಿಪ ಬರಿ ಹುಲ್ಲನೀಕ್ಷಿಸಲದುವೆ ಕೃಷಿ ಪಾಠವನೊರೆಗು – ವಿಜ್ಞಾನ...
ಬಟ್ಟೆಯದೆಷ್ಟು ಸುಂದರವಾದೊಡಂ ತೊಟ್ಟ ಮಾರನೆಯ ದಿನಕದು ಹಳತು ನೆಟ್ಟ ಸಸಿಯದು, ಸವಿಯ ಫಲವದು ಸೃಷ್ಟಿಯೊಳನುದಿನವು ಹೊಸತು ಕಷ್ಟ ಕೃಷಿಯೆನುತಾರಿಗೋ ಬಿಟ್ಟ ಬಾಳೆಲ್ಲ ಹಳತು – ವಿಜ್ಞಾನೇಶ್ವರಾ *****...
ಕೃಷಿಯೆಂದು ತೆಂಗನು ನೆಟ್ಟೊಡದನೊಣಗಿಸುತ ಕೊಬ್ಬರಿ ಮಾಡಿ ಹಿಂಡಿದೆಣ್ಣೆಯ ಬಳಸಲು ಬೇಕು ಕೊಂಡುಣುವ ಕುಪ್ಪಿಯೊಳಿಹುದು ಕಲಬೆರಕೆಗಾಹ್ವಾನ ಖೊಟ್ಟಿಯುದ್ಯೋಗದೊಳು ಜೀವನವೆ ಕಲಬೆರಕಾಗಿರಲು ಕಸಬರಿಕೆಯೆಷ್ಟಿದ್ದೊಡಂ ಸಾಲದಾಗಿಹುದದನು ಗುಡಿಸಲು – ವಿ...
ದುಡಿದು ಗಳಿಸಿರ್‍ಪನ್ನ ಪಕ್ಕದೊಳಿರ್‍ದು ಬಡತನ ದೂರದೂರದ ಸೂರೆಯುದ್ಯೋಗಿಗೆಲ್ಲ ಸಿರಿತನ ದೈನ್ಯವಲಾ ಎಸೆದ ಬಿಸ್ಕತ್ತಿಗೆಳಸುವ ಶ್ವಾನ ದಂತೆಮ್ಮ ರೈತರ ಪಾಡು ದುಡ್ಡನಾಘ್ರಾಣಿಸುತಿರಲ್ ಧರೆ ಸತ್ತ್ವಗಳಂತೆ ಸೂರೆ ಹೋಗುತಿದೆ ಅಧಿಕ ಇಳುವರಿಗೆ – ವ...
ವೇದವನು ತೊರೆದವರು ಮತ್ತಾ ವೇದವನು ಓದುತೋದುತಲೊರೆವವರು ಅವರಿವರೆಲ್ಲರುಂ ಚೋದನೆಯಮಲಿನ ಪೇಟೆಯುದ್ಯೋಗಕೊಲಿದವರೆ ವೇದ ಮೂಲದಾರಣ್ಯಿಕದ ಕೃಷಿಯ ತೊರೆದವರೆ ವೇದನೆಯ ಕೃಷಿಗೆಲ್ಲರುಂ ಸೂತ್ರಧಾರಿಗಳೆ – ವಿಜ್ಞಾನೇಶ್ವರಾ *****...
ಕೃಷಿ ಎಂದರದೊಂದು ಮಕ್ಕಳಾಟದವೊಲಿರಲು ರಾಶಿ ನಿಯಮಗಳದನು ಬಾಧಿಸದಿರಲು ಉಸಿರಾಟದವೊಲೆಮ್ಮ ಜೀವನದೊಳಾ ಕೃಷಿ ಇರಲು ನಿಸರ್ಗದೊಳಿಂತಪ್ಪುದಕೆಲ್ಲ ಮೂಗ ತೂರಿಸಲು ಅಸ್ತಮದುಸಿರಾಟ ಪುಸ್ಸೊತ್ತು ಯಂತ್ರದೊಳು – ವಿಜ್ಞಾನೇಶ್ವರಾ *****...
ಸುರಿದ ಬೆವರಿನ ಫಲದಿ ತೋಡು ಬಾವಿಯೊಳಂ ಕುರಿಪ ಜಲದ ತೆರದೊಳೆಮ್ಮ ಸಾಹಿತ್ಯವಿರಲದಕೆ ಶಕ್ತಿ ಬರಿದೋದುತೋದುತ ಬರೆವ ಸಾಹಿತ್ಯವದು ಬೋರು ನೀರಿನ ತೆರದಿ ಕ್ಷಣಿಕ ಕಾಸಿನ ಯುಕ್ತಿ ಸುರಿವಾಗಸಕೆ ಆಲಿಕೆಯಂತಿರ್ಪ ಹಸುರೆಲ್ಲದಕು ಶಕ್ತಿ – ವಿಜ್ಞಾನೇಶ್...
ಬರಿಗಾಲ ತುಳಿತವನು ಬರಿಗೈಯ ಥಳಿತವನು ಸೈರಿಸಬಲ್ಲಳೆಮ್ಮಮ್ಮ ಮಣ್ಣಮ್ಮ ಪ್ರೀತಿಯೊಳೆ ಬರಿ ರೈತನೇನು ಮಾಡಿದರು ಮಕ್ಕಳಾಟದ ರಗಳೆ ಜಾರ ಯಂತ್ರದೊಳೆಲ್ಲ ಹಸುರುಡೆಯ ಸೂರೆ ಪರಿಸರದ ಪಾಠವಿನ್ನೇನು? ಆರಕ್ಷಕರ ಕೈ ಮೀರೆ – ವಿಜ್ಞಾನೇಶ್ವರಾ *****...
ಹಸಿ ಬಿಸಿಯ ಸ್ಥಿತ್ಯಂತರಕೆಂಥ ಕಲ್ಲಾದೊಡಂ ತುಸು ತುಸು ಒಡೆದಂತಿಮದಿ ಮಣ್ಣಕ್ಕು ಹುಸಿ ದುಡಿಮೆಯನುದಿನವು ನೂರ್ ಬಾರಿ ಬಿಸಿ ದುಡ್ಡಪ್ಪಾವರ್ತನೆಯ ವೇಗಕೆಮ್ಮ ಕೃಷಿ ಬದುಕಿನಾರೋಗ್ಯ ನುಚ್ಚು ನೂರಾಗುತಿದೆ – ವಿಜ್ಞಾನೇಶ್ವರಾ *****...
ಅಮ್ಮಮ್ಮ ಲಾಭದಾಯಕವೆಂಬೊಂದು ವಿಶೇಷಣಕೆಂಥ ಸಮ್ಮೋಹನ ಶಕ್ತಿಯೋ? ಸುಮ್ಮನೀ ಪದವನೆಸೆದೊ ಡೆಮ್ಮ ರೈತರು ಹೊಸ ಬೆಳೆಯ ನೆಚ್ಚುವರು ತಮ್ಮನೆ ಅಡವಿಟ್ಟು ನೆಲವ ಕಚ್ಚುವರು ಅಮ್ಮನಭಿಮಾನದಡಿ ಮುಗ್ಗರಿಸಿ ನೋಯುವರು – ವಿಜ್ಞಾನೇಶ್ವರಾ *****...








