ಲಿಂಗಮ್ಮನ ವಚನಗಳು – ೧೧
ನಿಶ್ಚಿಂತನಿರಾಳದಲ್ಲಿ ಆಡುವ ಮಹಾದೇವನ ಕರ್ತೃವೆಂದರಿದ ಕಾರಣದಿಂದ, ತತ್ವವೆಂಬುದನರಿದು ಮನವ ನಿಶ್ಚಿಂತವ ಮಾಡಿ, ನಿಜಸುಖದಲ್ಲಿ ನಿಂದು, ಕತ್ತಲೆಯ ಹರಿಯಿಸಿ, ತಮವ ಹಿಂಗಿಸಿ, ವ್ಯಾಕುಲವನಳಿದು, ನಿರಾಕುಳದಲ್ಲಿ ನಿಂದು, ಬೇಕುಬೇಡೆಂಬುಭಯವಳಿದು, ಲೋಕದ […]
ನಿಶ್ಚಿಂತನಿರಾಳದಲ್ಲಿ ಆಡುವ ಮಹಾದೇವನ ಕರ್ತೃವೆಂದರಿದ ಕಾರಣದಿಂದ, ತತ್ವವೆಂಬುದನರಿದು ಮನವ ನಿಶ್ಚಿಂತವ ಮಾಡಿ, ನಿಜಸುಖದಲ್ಲಿ ನಿಂದು, ಕತ್ತಲೆಯ ಹರಿಯಿಸಿ, ತಮವ ಹಿಂಗಿಸಿ, ವ್ಯಾಕುಲವನಳಿದು, ನಿರಾಕುಳದಲ್ಲಿ ನಿಂದು, ಬೇಕುಬೇಡೆಂಬುಭಯವಳಿದು, ಲೋಕದ […]
ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ, ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ ಎಂಬ ಅಣ್ಣಗಳಿರಾ ನೀವು ಕೇಳಿರೊ, ಹೇಳಿಹೆನು. ಕಾಮವಿಲ್ಲದವಂಗೆ ಕಳವಳ ಉಂಟೆ? ಕ್ರೋಧವಿಲ್ಲದವಂಗೆ ರೋಷ ಉಂಟೆ? ಲೋಭವಿಲ್ಲದವಂಗೆ ಆಸೆಯುಂಟೆ? ಮೋಹವಿಲ್ಲದವಂಗೆ […]
ಆಸೆಯುಳ್ಳನ್ನಕ್ಕ ರೋಷ ಬಿಡದು. ಕಾಮವುಳ್ಳನ್ನಕ್ಕ ಕಳವಳ ಬಿಡದು. ಕಾಯಗುಣವುಳ್ಳನ್ನಕ್ಕ ಜೀವನ ಬುದ್ಧಿ ಬಿಡದು. ಭಾವವುಳ್ಳನ್ನಕ್ಕ ಬಯಕೆ ಸವೆಯದು. ನಡೆಯುಳ್ಳನ್ನಕ್ಕ ನುಡಿಗೆಡದು. ಇವೆಲ್ಲವು ಮುಂದಾಗಿರ್ದ್ದು ಹಿಂದನರಿದೆನೆಂಬ ಸಂದೇಹಿಗಳಿರಾ ನೀವು […]
ವ್ಯಾಪಾರವ ಬಿಟ್ಟು, ತಾಪತ್ರಯವನೆ ಹಿಂಗಿ. ಲೋಕದ ಹಂಗನೆ ಹರಿದು, ಬೇಕು ಬೇಡೆಂಬುದನೆ ನೂಕಿ, ತಾ ಸುವಿವೇಕಿಯಾದಲ್ಲದೆ, ಜ್ಯೋತಿಯ ಬೆಳಗ ಕಾಣಬಾರದೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****
ನಿಮ್ಮ ಪಾದವಿಡಿದು, ಮನ ನಿರ್ಮಳವಾಯಿತು. ನನ್ನ ತನು ಶುದ್ಧವಾಯಿತು. ಕಾಯ ಗುಣವಳಿಯಿತು. ಕರಣಗುಣ ಸುಟ್ಟು ಭಾವಳಿದು ಬಯಕೆ ಸವೆದು, ಮಹಾದೇವನಾದ ಶರಣರ ಪಾದವಿಡಿದು, ನಿಜಮುಕ್ತಳಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. […]
ನೆನವುತ್ತಿದೆ ಮನ. ದುರ್ವಾಸನೆಗೆ ಹರಿವುತ್ತಿದೆ. ಕೊನೆಕೊಂಬೆಗೆ ಎಳೆವುತ್ತಿದೆ. ಕಟ್ಟಿಗೆ ನಿಲ್ಲದು- ಬಿಟ್ಟರೆ ಹೋಗದು. ತನ್ನ ಇಚ್ಫೆಯಲಾಡುವ ಮನವ ಕಟ್ಟಿಗೆ ತಂದು, ಗೊತ್ತಿಗೆ ನಿಲ್ಲಿಸಿ, ಬಚ್ಚಬರಿಯ ಬೆಳಗಿನೊಳಗೆ ಓಲಾಡುವ […]
ಆಸೆಯನಳಿದು, ರೋಷವ ನಿಲ್ಲಿಸಿ, ಜಗದ ಪಾಶವನರಿದು, ಈಶ್ವರನೆನಿಸಿಕೊಂಬ ಶರಣರ ಜಗದ ಹೇಸಿಗಳೆತ್ತ ಬಲ್ಲರೊ ಅಪ್ಪಣಪ್ರಿಯ ಚನ್ನಬಸವಣ್ಣಾ? *****
ಮನ ಮರವೆಗೆ ಮುಂದುಮಾಡಿತ್ತು. ತನು ಕಳವಳಕ್ಕೆ ಮುಂದುಮಾಡಿತ್ತು. ಆಸೆರೋಷವೆಂಬವು ಅಡ್ಡಗಟ್ಟಿದವು. ಕೋಪ ಕ್ರೋಧವೆಂಬವು ಮುಂದುವರಿದವು. ಇದರೊಳಗೆ ಜಗದೀಶ್ವರನೆನಿಸಿಕೊಂಬವರ ನುಡಿಯ ಓಸರಿಸುವದು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****
ಮದ ಮತ್ಸರ ಬಿಡದು. ಮನದ ಕನಲು ನಿಲ್ಲದು. ಒಡಲ ಗುಣ ಹಿಂಗದು. ಇವ ಮೂರನು ಬಿಡದೆ ನಡಿಸುವನ್ನಕ್ಕ, ಘನವ ಕಾಣಬಾರದು. ಘನವ ಕಾಂಬುದಕ್ಕೆ, ಮದಮತ್ಸರವನೆ ಬಿಟ್ಟು, ಮನದ […]
ಮಚ್ಚಬೇಡ. ಮರಳಿ ನರಕಕ್ಕೆರಗಿ, ಕರ್ಮಕ್ಕೆ ಗುರಿಯಾಗಬೇಡ. ನಿಶ್ಚಿಂತನಾಗಿ ನಿಜದಲ್ಲಿ ಚಿತ್ತವ ಸುಯಿಧಾನವ ಮಾಡಿ, ಲಿಂಗದಲ್ಲಿ ಮನ ಅಚ್ಚೊತ್ತಿದಂತಿರಿಸಿ, ಕತ್ತಲೆಯನೆಕಳೆದು, ಬಚ್ಚಬರಿಯ ಬೆಳಗಿನೊಳಗೆ ಓಲಾಡಿ ಸುಖಿಯಾಗೆಂದರು ನಮ್ಮ ಅಪ್ಪಣ್ಣಪ್ರಿಯ […]