ನಳಿನಾಕ್ಷಿಯ ಕಂಡೆ ನಾ

ನಳಿನಾಕ್ಷಿಯ ಕಂಡೆ ನಾ
ತಿಳವಳ್ಳಿಯ ಕಳಿಯುಳ್ಳ ಮೋಜಿನ್ಹೆಣ್ಣ
ಹೊಳಿವ ಚಂದುಟಿ ಎಳಿವ ಮುಡಿ
ಥಳ ಥಳ ಪದಕ ಒಪ್ಪಿನ ಜಾಣೆ
ತನ್ನ ಕಲಶ ಕುಚಯುಗದಲಿ
ಸರಿಯ ಗರತಿಯರೋಳು ಮೇಲ್ ||೧||

ಕುಸುಮಶರನ ರಾಣಿಯೋ
ಕೊರಳೆಸೆವ ಪಲ್ಲವ ಪಾಣಿಯೋ
ಬಿಸಿಜಿಕೊರಕ ಸ್ಥಾನವೋ
ಯೋಚಿಸಿ ರೂಪ ಮಧುರ ಪಲ್ಲವ ಪಾಣಿಯೋ
ವಸುಧಿಯೊಳು ಕಡುಜಾಣ ರೀತಿಯ
ಕುಶಲ ರತಿಯಲೆ ಕೂಡಿದ್ಹೇಳ್
ಅಸು ನೀಗದೆ ಬಿಡರು ಎಮ್ಮನು
ಮಸಣಿಸಿ ಮುಂದೆ ಹೋಗಲೊಲ್ಲದು ||೨||

ಸರಳ ಬೈತಲಿ ಮರನ ಸಿಂಗಾಡಿಯು
ತೀಡಿ ಪೊರ್ಬಿನ ಕೊರಳೊಳ್
ಹಾರ ಮುತ್ತಿನ ರತ್ನಗಳಿಂದ ಮೆರೆಯುತಿಹುದು ಒಡ್ಡ್ಯಾಣ
ತರುಣಿ ಕರ್ಣದೊಳಿಟ್ಟು ಆಭರಣ
ಅಪರಿಮಿತ ಇನ್ನೆಷ್ಟು ಹೇಳಲಿ
ನೆರೆದ ಜನರ್ಬಾಯ್ದೆರೆವರೀಕೆಯ
ತುರುಬ ಚಲ್ವಿಕೆಗೆ ಮರುಳಗೊಂಡರು ||೩||

ಹವಳದುಟಿಯ ಬಾವಲಿಯು
ಕುವಲನೇತ್ರ ದಿವಿಜಲೋಕದ ಸ್ತ್ರೀ
ಅಯ್ಯಯ್ಯೋ ನವಮೋಹನದ ನಿಧಿಯು
ಭವದ ಅಜನ ಪಟ್ಟದ ರಾಣಿಯು
ಶಿವಶಿವಾ ಹೆಣ್ಣಿವಳ ರೂಪಕ
ಅವನೀಪತಿ ಕಡೆಯಿಲ್ಲ ದೇವರು
ಪವನಸುತ ಘನರೂಪ ಮಾರುತಿ
ಅವನ ಬಲದಿಂದುಳಿದೆನು ಜವದಿ ||೪||

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓದುವವ್ಗ ಎಚ್ಚರ ಇರಬೇಕು
Next post ಹೇಮರೆಡ್ಡಿ ಮಲ್ಲಮ್ಮ

ಸಣ್ಣ ಕತೆ

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ಧನ್ವಂತರಿ

  ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

 • ಮತ್ತೆ ಬಂದ ವಸಂತ

  ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

 • ಕನಸುಗಳಿಗೆ ದಡಗಳಿರುದಿಲ್ಲ

  ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…