ಗುರು ಬ್ರಹ್ಮ – ಗುರು ವಿಷ್ಣು
ಗುರು ಸಕಲ ಚರ್‍ಯ ಜೀವಿಗಳ
ಸನ್ಮಾರ್ಗ – ಸುವಿಚಾರಗಲ
ತ್ಯಾಗಮಯ – ಸಾಕಾರಮೂರ್ತಿ

ಬದುಕಲಿ – ಬೇಯುತಲಿ…
ಭವಕ್ಕೆಲ್ಲಾ – ಭಾವಜೀವಿಯಾಗಿ
ಎಳೆ ಜೀವ ಸಮೂಹಕ್ಕೆಲ್ಲಾ
ಸುಮವಾಗಿಸಿ ಅರಳಿಸುವ ಮಾಂತ್ರಿಕ

ಭವಿಷ್ಯದ ಬಾನಲ್ಲಿ…
ಅರಳೀ ಬೆಳಗುವ ಸುಮಗಳ
ಪೋಷಕ, ಪಾಲಕ ಮಹರ್ಶಿ
ಪ್ರೀತಿಯ ಪ್ರತಿರೂಪದ ದೇವೋಭವ

ಬದುಕಿನ ಬಾಳಜ್ಯೋತಿಯಾಗುತ
ಬೆಳೆದು… ನಾಳಿನ ಬಾಳಿನ…
ಕಲೆಯ ಶಿಲೆಗಳನು
ಕೆತ್ತನೆಯಲಿ ಚಿತ್ತಾರ
ಮೂಡಿಸುವ ಚತುರ ಶಿಲ್ಪಿ.

***