Home / ಲೇಖನ / ಇತರೆ / ಸ್ವಾಭಿಮಾನ- ರೊಟ್ಟಿಯ ಹೊಡೆದಾಟ – ಗಂಡನ ಶೂರತನ

ಸ್ವಾಭಿಮಾನ- ರೊಟ್ಟಿಯ ಹೊಡೆದಾಟ – ಗಂಡನ ಶೂರತನ

ತಂದೆಗೆ ತನ್ನ ಮಕ್ಕಳು ಬಲು ಚಂದ! ಚಿತ್ರಕಾರನಿಗೆ ತನ್ನ ಚಿತ್ರಗಳು ಬಹಳ ಸುಂದರ! ಕವಿಗೆ ತನ್ನ ಕವಿತೆಗಳೆ ಬಲು ಪ್ರಿಯ. ಗ್ರಂಥಕರ್ತನಿಗೆ ತನ್ನ ಗ್ರಂಥಗಳು ಮೇಲಾದವು. ಹಾಗೆಯೇ ತಂಗಾಳಿಯ ಅಭಿಮಾನ ನನಗೆ ಬಹಳ. ವರ್ತಮಾನಪತ್ರ ಬಂದ ಕೂಡಲೆ ಪ್ರಥಮತಃ ಹುಡುಕುವದು “ತಂಗಾಳಿ”ಯ ಕಾಲಮ್’! ಓದುತ್ವ ನಗುವೆ, ನಗುತ್ತ ಓದುವೆ ! ಒಂದೆರಡು ಸಾರೆಯಲ್ಲ, ಅನೇಕ ಸಾರೆ ತಿರುತಿರುಗಿ ಓದುತ್ತೇನೆ. ನನಗೆ ವರ್ತಮಾನಪತ್ರವೆಂದರೆ ತಂಗಾಳಿ ! ತಂಗಾಳಿಯೆಂದರೆ ವರ್ತಮಾನಪತ್ರ !!
****
ಸಿಟ್ಟಿನ ಕೈಯಲ್ಲಿ ಬುದ್ದಿ ಕೊಡಬಾರದು. ಸಿಟ್ಟಿನಲ್ಲಿದ್ದ ಮನುಷ್ಯನಿಗೆ ತನ್ನ ಕೈಯಲ್ಲಿ ಅಥವಾ ಎದುರಿಗೆ ಏನಿರುವದೆಂಬ ಅರಿವೇ ಇರುವದಿಲ್ಲ, ಕೈಗೆ ಸಿಕ್ಕದ್ದನ್ನು ಬೀಸಿ ಒಗೆಯುವನು, ಕೇವಲ ಕಲ್ಲು, ಕಟ್ಟಿಗೆ ಸಿಕ್ಕರೆ ವಿರೋಧಿಯ ಪುಣ್ಯ! ಯಾಕಂದರೆ ಬಡಿಗೆ-ಕಲ್ಲುಗಳು ಮನುಷ್ಯನಿಂದ ನಿತ್ಯ ಬಡಿದಾಟದಲ್ಲಿ ಉಪಯೋಗಿಸಲ್ಪಡುವ ಸಾಮಾನ್ಯ ಆಯುಧಗಳು !
  * * * *
ಜೇಗ್ರೆಡ್ ಜೈಲಿನಲ್ಲಿ ಕೈದಿಗಳಿಗೆ ಕಲ್ಲಿನಷ್ಟು ಬಿರುಸಾದ ರೊಟ್ಟಿಗಳನ್ನು ಕೊಡುತ್ತಿದ್ದರು. ಕೈದಿಗಳು ತಕರಾರು ಮಾಡಿದರೂ ಕೇಳಲಿಲ್ಲ. ಒಮ್ಮೆ ಕೈದಿಗಳು ಊಟಕ್ಕೆ ಕೂತಾಗ ಅವರಿಗೆ ತೀರ ಬಿರಸು ರೊಟ್ಟಿಗಳನ್ನು ಕೊಟ್ಟರು. ಕೈದಿಗಳು ರೊಚ್ಚಿಗೆದ್ದು ರೊಟ್ಟಿಗಳನ್ನೇ ಬೀಸಿ ಅಧಿಕಾರಿಗಳ ಕಡೆಗೆ ಎಸೆದರು ! “ಗಾಯ ಮಾಡುವ ಉದ್ದೇಶದಿಂದ ಬಿರಸು ಪದಾರ್ಥಗಳನ್ನು ಒಗೆದರು ” ಎಂದು ಅಧಿಕಾರಿಗಳು ಕೈದಿಗಳ ಮೇಲೆ ಆರೋಪ ಇಡುವಂತಿದ್ದಿಲ್ಲ. ಯಾಕಂದರೆ ರೊಟ್ಟಿಗಳು ಬಿರಸು ಇದ್ದವೆಂದು ತಾವೇ ಒಪ್ಪಿದಂತಾಗುತ್ತಿತ್ತು.  ರೊಟ್ಟಿಯಿಂದ ಹೊಡೆದ ಈ ಪ್ರಸಂಗವೇನೂ ಹೊಸದಲ್ಲ. ನಮ್ಮಲ್ಲಿ ಅತ್ತೆಯು ಸಿಟ್ಟಾಗಿ ಸೋಸಿಗೆ ರೊಟ್ಟಿಯಿಂದ ಹೊಡೆದದ್ದನ್ನು ಕೇಳಿರಬಹುದು. ಅಥವಾ ಸೊಸಿಯು ಅತ್ತೆಗೆ ಹೊಡೆದಿರಬಹುದು. ಗಂಡನು ಹೆಂಡತಿಗಾಗಲಿ ಅಥವಾ ದಿಟ್ಟ ಹೆಂಡತಿಯು ಗಂಡನಿಗಾಗಲಿ ಹೊಡೆದಿರಬಹುದು !
  * * * *
ಒಮ್ಮೆ ಹೆಂಡತಿಯನ್ನು ಹೊಡೆದ ಆರೋಪದ ಮೇಲೆ ಗಂಡನನ್ನು ಕೋರ್ಟಿಗೆ ಎಳೆದರು. ಹೊಡೆವ ಕಾರಣವೇನೆಂದು ನ್ಯಾಯಾಧೀಶನು ಆರೋಪಿಯ(ಗಂಡನ)ನ್ನು ವಿಚಾರಿಸಿದನು. ಆಗ ಗಂಡನು ಸಮರ್ಥಿಸಿಕೊಂಡ : ‘ನನ್ನ ಹೆಂಡತಿಯು ನನ್ನನ್ನು ಬಹಳವಾಗಿ ಪೀಡಿಸುತ್ತಿದ್ದಳು. ಆದರೆ ಸೇಡು ತೀರಿಸಿಕೊಳ್ಳುವ ಸಮಯವು ಇಲ್ಲಿಯ ವರೆಗೆ ದೊರೆತಿದ್ದಿಲ್ಲ. ಇಂದು ಅವಳ ಕೈಯಲ್ಲಿ ಏನೂ ಇದ್ದಿಲ್ಲ. ಅವಳ ಸಮೀಪದಲ್ಲಿ ಬಡಿಗೆ, ಕಲ್ಲು, ಮುಂತಾದ ಯಾವ ವಸ್ತುವೂ ಇದ್ದಿಲ್ಲ. ಅಕಸ್ಮಾತ್ ನನ್ನ ಕಡೆಗೆ ಬೆನ್ನು ಮಾಡಿ ನಿಂತಿದ್ದಳು. ನಾನು ಅರಿವೆ ತೊಟ್ಟು ಕೊಂಡು ಹೊರಗೆ ಹೋಗುವ ಸಿದ್ಧತೆಯಲ್ಲಿದ್ದೆನು. ಮುಂದಿನ ಬಾಗಿಲು ತೆರೆದಿತ್ತು. ಇದೇ ಸಮಯವೆಂದು ಸಾಧಿಸಿ ಬೆನ್ನ ಮೇಲೆ ಒಂದು ಏಟು ಕೊಟ್ಟವನೇ ಹೊರಗೆ ಓಡಿ ಹೋದೆ.”  ಮತ್ತೊಮ್ಮೆ ಒಬ್ಬ ಕಳ್ಳನು ಒಂದು ಮನೆಯನ್ನು ಹೊಕ್ಕನು. ಮನೆಯ ಯಜಮಾನನು ಮನೆಯಲ್ಲಿದ್ದಿಲ್ಲ. ಅವನ ಹೆಂಡತಿಯು ಕಳ್ಳನನ್ನು ನೋಡಿ, “ಸುಮ್ಮನೆ ಹೊರಗೆ ಹೋಗುವೆಯೋ ಅಥವಾ ನನ್ನ ಗಂಡನನ್ನು ಕರೆಯಲೋ ? ” ಎಂದು ಅಂದಳು. ಆಗ ಕಳ್ಳನು ಅಂದ: ” ನಿನ್ನ ಗಂಡನು ಎಷ್ಟು ಶೂರನಿರುವನೆಂಬದು ನನಗೆ ಗೊತ್ತಿದೆ. ನಿನ್ನೆ ನಾನು ಬಂದಾಗ ಅವನು ಮನೆಯಲ್ಲಿದ್ದನು, ನೀನು ಮನೆಯಲ್ಲಿದ್ದಿಲ್ಲ. ಆಗ ನನಗೆ ‘ಹೊರಗೆ ಹೋಗುವಿಯೋ ಅಥವಾ ನನ್ನ ಹೆಂಡತಿಯನ್ನು ಕರೆಯಲೋ’ ಎಂದು  ಆಂದಿದ್ದನು.
*****
Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...