Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಗುರುವಾರ, ಅಕ್ಟೋಬರ್ ೨೯, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಗುರುವಾರ, ಅಕ್ಟೋಬರ್ ೨೯, ೧೯೪೨

ಪ್ರೀತಿಯ ಕಿಟಿ,

ನಾನಂತೂ ತುಂಬಾ ಬೇಸರದಲ್ಲಿರುವೆ. ಡ್ಯಾಡಿಗೆ ಹುಷಾರಿಲ್ಲ. ಅವರಿಗೆ ಮೈಮೇಲೆಲ್ಲಾ ಕೆಂಪು ಸಿಬ್ಬುಗಳು ಎದ್ದಿವೆ. ತುಂಬಾ ಜ್ವರವೂ ಇದೆ. ನೋಡಿದರೆ ದಡಾರ ಇರುವಂತಿದೆ. ನೋಡು! ನಾವೀಗ ಡಾಕ್ಟರನ್ನು ಕರೆಯುವಂತೆಯೂ ಇಲ್ಲ. ಮಮ್ಮಿ ಅವರಿಗೆ ಬೆವರು ಬರಿಸುವಂತೆ ಮಾಡುತ್ತಿದ್ದಾರೆ. ಅದರಿಂದಲಾದರೂ ಅವರ ಜ್ವರದ ತಾಪ ಇಳಿಯಬಹುದೆಂದು.

ವ್ಯಾನ್ಡ್ಯಾನ್‌ರ ಮನೆಯಿಂದ ಎಲ್ಲ ಸಾಮಾನುಗಳು ತೆಗೆಯಲಾಗಿದೆ ಎಂದು ಇಂದು ಮುಂಜಾನೆ ಮೇಪ್ ನಮಗೆ ಹೇಳಿದಳು. ನಾವಿನ್ನು ಶ್ರೀಮತಿ ವ್ಯಾನ್ಡ್ಯಾನ್‌ರಿಗೆ ಅದನ್ನು ಹೇಳಿಲ್ಲ. ಅವರಂತೂ ಮೊದಲೇ ತೀರಾ ಉದ್ವೇಗದವರು. ತಮ್ಮ ಮನೆಯಲ್ಲಿ ಬಿಟ್ಟು ಬಂದ ಚೆಂದದ ಪಿಂಗಾಣಿ ಪಾತ್ರೆಗಳ ಸುಂದರವಾದ ಕುರ್ಚಿಗಳ ಕುರಿತೇ ದಿನವಿಡಿ ಗೋಳಿಡುವುದನ್ನು ಕೇಳಲು ನಮಗಾರಿಗೂ ಇಷ್ಟವಿರಲಿಲ್ಲ. ನಮ್ಮ ಅತ್ಯಮೂಲ್ಯವಾದ ವಸ್ತುಗಳನ್ನು ನಾವು ಬಿಡಲೇಬೇಕಿತ್ತು. ಹಾಗಾಗಿ ಅದಕ್ಕಾಗಿ ಈಗ ಬೊಬ್ಬಿರಿಯುವುದು ಸರಿಯಲ್ಲ.

ತಡವಾಗಿಯಾದರೂ ನನಗೂ ವಯಸ್ಕರು ಓದುವ ಪುಸ್ತಕವನ್ನು ಓದಲು ಅನುಮತಿ ಸಿಕ್ಕಿದೆ. ನಿಕೋ ವ್ಯಾನ್ ಬರೆದ “Eva’s Youth” ಈಗ ನಾನು ಓದುತ್ತಿರುವೆ. ಶಾಲಾ ಹುಡುಗಿಯ ಪ್ರೇಮ ಕಥೆಗಳಿಗೂ ಮತ್ತು ಇದಕ್ಕೂ ಅಂತಹ ವ್ಯತ್ಯಾಸವಿಲ್ಲ. ಹಿಂದುಳಿದ ಬೀದಿಗಳಲ್ಲಿ ಕೆಲವು ಹೆಂಗಸರು ತಮ್ಮನ್ನು ಅಪರಿಚಿತ ಗಂಡುಗಳಿಗೆ ಮಾರಿಕೊಳ್ಳುತ್ತಾರೆ ಎನ್ನುವುದು ಸತ್ಯ. ಅದಕ್ಕಾಗಿ ಅವರು ಹಣವನ್ನು ಕೇಳುತ್ತಾರಂತೆ. ಅಂತಹ ಪರಿಸ್ಥಿತಿ ಏನಾದರೂ ಬಂದಿದ್ದರೆ ನಾನು ಮರ್ಯಾದೆಯಿಂದ ಸತ್ತೇ ಹೋಗುತ್ತಿದ್ದೆ. ಅಲ್ಲದೇ ಇವಾ ಆ ಹೊತ್ತು ತಿಂಗಳ ಪಿರಿಯಡ್‌ನಲ್ಲಿ ಇದ್ದಳೆಂದು ಕಥೆ ಹೇಳುತ್ತದೆ. ಓ! ಈ ತಿಂಗಳ ಅವಧಿ ನನಗೂ ಬರಲೆಂದು ಬಯಸುವೆ: ಅದು ಬಹು ಮುಖ್ಯವಾದದ್ದು.

ಡ್ಯಾಡಿ ಗಯಟೆ ಮತ್ತು ಸ್ಚಿಲ್ಲರ್‌ನ ನಾಟಕಗಳನ್ನು ಕಬೋರ್ಡಿನಿಂದ ಹೊರ ತೆಗೆದು ತಂದಿದ್ದಾರೆ. ಪ್ರತಿ ದಿನ ಸಂಜೆ ಅದನ್ನು ನನಗವರು ಓದಿ ಹೇಳಲಿದ್ದಾರೆ. ನಾವು ಡಾನ್ ಕ್ಯಾರ್‍ಲೋಸ್‌ರಂದಿಗೆ ಅದನ್ನು ಶುರು ಮಾಡಿದ್ದೇವೆ.

ಡ್ಯಾಡಿಯನ್ನು ನೋಡಿ ಮಮ್ಮಿಯೂ ತನ್ನ ಪಾರ್ಥನಾ ಪುಸ್ತಕವನ್ನು ನನ್ನ ಕೈಯಲ್ಲಿ ತುರುಕಿದ್ದಾರೆ. ಅವರಿಗೆ ನಮ್ರವಾಗಿ ನಾನು ಕೆಲವು ಪಾರ್ಥನೆಗಳನ್ನು ಜರ್ಮನಿಯಲ್ಲಿ ಓದಿದೆ. ಅವು ನಿಜಕ್ಕೂ ಚೆನ್ನಾಗಿವೆ. ಆದರೆ ಅವು ನನಗೆ ಹೆಚ್ಚಿನದೇನನ್ನೂ ತಿಳಿಸುತ್ತಿಲ್ಲ. ಮಮ್ಮಿ ಯಾಕಾಗಿ ನನ್ನನ್ನು ಧಾರ್ಮಿಕಳನ್ನಾಗಿಸಲು ಬಯಸುತ್ತಾರೆ, ಅವರಿಗೆ ವಿಧೇಯಳಾಗಿರಲೆಂದೇ?

ನಾಳೆ ಮೊದಲ ಸಲ ನಾವು ಕಾಯಿಸಿಕೊಳ್ಳಲು ಬೆಂಕಿಯನ್ನು ಮಾಡಲಿದ್ದೇವೆ. ಹೊಗೆಯಿಂದ ಉಸಿರುಗಟ್ಟಿದಂತಾಗಬಹುದೆಂದು ನನ್ನ ಊಹೆ. ಯಾಕೆಂದರೆ ಎಷ್ಟೋ ಕಾಲದಿಂದಲೂ [ಹೊಗೆಗೊಳುವೆ] ಚಿಮಣಿಯನ್ನು ಸ್ವಚ್ಛಗೊಳಿಸಿದ ಹಾಗಿಲ್ಲ. ಆದರೂ ಆಶಾವಾದದಿಂದಲೇ ಎದಿರು ನೋಡೋಣ.

ನಿನ್ನ,
ಆನ್

Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...