Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಗುರುವಾರ, ಡಿಸೆಂಬರ್ ೨೨, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಗುರುವಾರ, ಡಿಸೆಂಬರ್ ೨೨, ೧೯೪೨

ಪ್ರೀತಿಯ ಕಿಟಿ,

ಕ್ರಿಸ್‌ಮಸ್‌ಗೆ ಎಲ್ಲರಿಗೂ ಒಂದು ಪೌಂಡ ಬೆಣ್ಣೆ ಹೆಚ್ಚಾಗಿ ಸಿಗಲಿದೆ ಎಂಬ ಸಂತೋಷದ ಸುದ್ದಿಯಿಂದ ಗುಪ್ತಗೃಹ ಖುಷಿಯಾಗಿದೆ. ಸುದ್ದಿ ಪತ್ರಿಕೆಯಲ್ಲಿ ಅದು ಕೇವಲ ಅರ್ಧ ಪೌಂಡ ಎಂದಿದೆ. ಅದೂ ಕೇವಲ ಸರಕಾರದಿಂದ ರೇಷನ್ ಪುಸ್ತಕ ಹೊಂದಿದವರಿಗೆ ಮಾತ್ರ, ಹೊರತು ಎಂಟು ರೇಷನ್ ಪುಸ್ತಕಗಳ ಬದಲಿಗೆ ಬರಿಯ ನಾಲ್ಕು ಕಾನೂನು ಬಾಹಿರ ರೇಷನ್ ಪುಸ್ತಕ ಹೊಂದಿದ ಗುಪ್ತವಾಸದ ಯಹೂದಿಗಳಿಗಲ್ಲ.

ನಾವೆಲ್ಲ ನಮ್ಮ ಬೆಣ್ಣೆಯಿಂದ ನಮಗೆ ಬೇಕಾದದ್ದನ್ನು ತಯಾರಿಸಲು ಹೋಗುತ್ತಿದ್ದೇವೆ, ನಾನು ಇವತ್ತು ಮುಂಜಾನೆ ಕೆಲವು ಬಿಸ್ಕೀಟು ಮತ್ತು ಎರಡು ಕೇಕ್‌ಗಳನ್ನು ಮಾಡಿದೆ. ಮೇಲ್ಮಹಡಿಯಲ್ಲಿ ಎಲ್ಲರೂ ಬಹಳೆ ಬ್ಯೂಸಿ ಇದ್ದಾರೆ. ಅದಕ್ಕಾಗಿ ಮಮ್ಮಿ ಅವರ ಕೆಲಸ ಮುಗಿಯುವವರೆಗೆ ನನಗೆ ಅಲ್ಲಿಗೆ ಓದಲಾಗಲೀ ಅಥವಾ ಇನ್ನಾವುದೇ ಕೆಲಸ ಮಾಡಲಾಗಲೀ ಹೋಗದಿರುವಂತೆ ಹೇಳಿದಳು.

ಶ್ರೀಮತಿ ವ್ಯಾನ್ಡ್ಯಾನ್ ತಮ್ಮ ಉಳುಕಿದ ಸೊಂಟದ ಕಾರಣ ಹಾಸಿಗೆಯಲ್ಲಿ ಬಿದ್ದುಕೊಂಡು, ಆಗಾಗ ಪದೇ ಪದೇ ಡ್ರೇಸಿಂಗ್‌ಗೆ ತಮ್ಮನ್ನು ಒಪ್ಪಿಸಿಕೊಳ್ಳುತ್ತ ಇದ್ದರೂ ಯಾವುದರಿಂದಲೂ ತೃಪ್ತಿಗೊಳ್ಳದವರಂತೆ ದಿನವಿಡಿ ದೂರುತ್ತಲೇ ಇರುತ್ತಾರೆ. ಅವರು ಬೇಗ ಪುನಃ ಮೊದಲಿನಂತಾಗಿ ತನ್ನ ವಸ್ತುಗಳನ್ನು ತಾನೇ ಅಚ್ಚು ಕಟ್ಟಾಗಿ ಜೋಡಿಸಿಕೊಂಡರೆ ನನಗೆ ಬಹಳ ಸಂತೋಷ. ಯಾಕೆಂದರೆ ಈಗ ಅವರ ಈ ಎಲ್ಲ ಕೆಲಸಗಳನ್ನು ನಾನು ಮಾಡಬೇಕಾಗಿದೆ. ಅವರು ತುಂಬಾ ದುಡಿಯುವ ಹಾಗೂ ಅಚ್ಚುಕಟ್ಟಾಗಿ ಇರುವ ಅಪರೂಪದ ಹೆಣ್ಣು, ಅದೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾಗ. ಆಕೆ ಉತ್ಸಾಹಿ ಕೂಡಾ.

ನಾನು ಮಾಡುತ್ತಿದ್ದ ಸದ್ದಿಗೆ ಇಂದು ದಿನದ ಉದ್ದಕ್ಕೂ ನಾನು ಶ್.. ಶ್ ॒ಎಂಬುದನ್ನು ಕೇಳಲಿಲ್ಲ. ನನ್ನ ಕೋಣೆಯ ಜೊತೆಗಾರ ರಾತ್ರಿಯೂ ಕೂಡಾ ನನಗೆ ಶ್.. ಶ್.. ಎಂದು ಹೇಳುತ್ತಲೇ ಇರುತ್ತಾರೆ ಅವರ ಪ್ರಕಾರ ನಾನು ಆಚೀಚೆ ಹೊರಳಾಡುವುದನ್ನು ಕೂಡಾ ಮಾಡಬಾರದು. ನಾನು ಅವರೆಡೆಗೆ ಸಣ್ಣ ಗಮನವನ್ನು ನೀಡದೇ ಅವರು ಹೇಳಿದ ಶ್.. ಶ್.. ಶಬ್ದವನ್ನೇ ಅವರಿಗೆ ಪುರುಚ್ಚರಿಸುವೆ.

ಅವರು ನಾನು ಕೋಪಗೊಳ್ಳುವಂತೆ ಮಾಡುತ್ತಾರೆ, ಅದೂ ವಿಶೇಷವಾಗಿ ರವಿವಾರದಂದು,ತನ್ನ ವ್ಯಾಯಾಮಗಳನ್ನು ಮಾಡಲು ಬೇಗನೇ ಎದ್ದು ದೀಪಗಳನ್ನು ಹಚ್ಚಿಬಿಡುತ್ತಾರೆ. ಈ ವ್ಯಾಯಾಮಗಳಿಗೆ ಸುಮಾರು ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ಅಷ್ಟು ಹೊತ್ತು ಬಡಪಾಯಿಯಾದ ಬಡಜೀವವೊಂದು ಇದೆಲ್ಲವನ್ನೂ ಸಹಿಸಿಕೊಳ್ಳುತ್ತ ಬಿದ್ದುಕೊಳ್ಳುತ್ತದೆ. ನಾನು ನನ್ನ ಹಾಸಿಗೆಯನ್ನು ಉದ್ದಮಾಡಲು ತಲೆಯ ಕಡೆಯಲ್ಲಿ ಜೋಡಿಸಿಕೊಂಡ ಕುರ್ಚಿಗಳು ಅಲ್ಲಾಡುತ್ತ ನನಗೆ ತೊಂದರೆ ಕೊಡುತ್ತವೆ. ಮಲಗಿದ ನನ್ನ ತಲೆಯ ಕೆಳಗೆ ಹಿಂದಕ್ಕೂ ಮುಂದಕ್ಕೂ ಈ ಕುರ್ಚಿಗಳು ಜಾರುತ್ತ ಇರುತ್ತವೆ. ಮಾಂಸಖಂಡಗಳನ್ನು ಸಶಕ್ತಗೊಳಿಸಲು ಮಾಡುವ ತೋಳು-ಬೀಸುವ ಕಠಿಣ ವ್ಯಾಯಾಮವನ್ನು ಕೊನೆಗೊಳಿಸುತ್ತಲೇ ಅವರ ಮಹಾರಾಜ ಪೌರುಷ ಶೌಚಾಲಯದಲ್ಲಿ ಪ್ರಾರಂಭವಾಗುತ್ತದೆ. ಅವರ ಪ್ಯಾಂಟುಗಳನ್ನು ಮೇಲೆ ತೂಗುಹಾಕಲಾಗಿರುತ್ತವೆ. ಅದನ್ನು ತರಲು ಡಸೆಲ್‌ರಿಗೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹೋಗಬೇಕಾಗುತ್ತದೆ.
ಕೆಲವೊಮ್ಮೆ ಟೇಬಲ್ಲಿನ ಮೇಲೆಯೇ ಬಿದ್ದುಕೊಂಡಿರುವ ತಮ್ಮ ಟೈಯನ್ನು ಮರೆತುಬಿಡುತ್ತಾರೆ. ಹಾಗಾಗಿ ಟೈಯನ್ನು ತೆಗೆದುಕೊಳ್ಳಲು ಮತ್ತೊಮ್ಮೆ ಕುರ್ಚಿಗಳನ್ನು ಜೋರಾಗಿ ತಳ್ಳಿ, ದೂಡುತ್ತಾರೆ.

ಆದರೆ ನಾನು ಈ ಎಲ್ಲ ಹಳೆಕಾಲದ ಜನರ ಸಂಗತಿಗಳ ಹೇಳಿ ನಿನಗೆ ಬೇಸರ ತರುವುದಿಲ್ಲ. ಇದರಿಂದ ಏನೂ ಪ್ರಯೋಜನವೂ ಆಗದು. ಮತ್ತು ನನ್ನ ಸೇಡಿನ ಯೋಜನೆಗಳೆಲ್ಲ [ದೀಪ ಆರಿಸುವ, ಬಾಗಿಲು ಮುಚ್ಚುವ. ಅವರ ಬಟ್ಟೆಗಳನ್ನು ಅಡಗಿಸಿಡುವ] ಶಾಂತಿಯನ್ನು ಕಾಯುವುದಕ್ಕಾಗಿ ಬಿಡಲೇ ಬೇಕಾಗುತ್ತದೆ. ಓಹೋ! ನಾನು ಬಹಳೇ ವಿವೇಕಿಯಾಗುತ್ತಿದ್ದೇನೆ! ಪ್ರತಿಯೊಬ್ಬನೂ ತನ್ನ ವಿವೇಚನೆಯನ್ನು ಇಲ್ಲಿ ಬಳಸಲೇಬೇಕಾಗುತ್ತದೆ, ನಮ್ರನಾಗುವುದನ್ನು ಕಲಿಯುವುದು, ನಾಲಿಗೆಯನ್ನು ಮಿತಿಯಲ್ಲಿ ಬಳಸುವುದು, ಸಹಾಯ ಮಾಡುವುದು, ಒಳ್ಳೆಯವರಾಗುವುದು, ನಮ್ಮ ತಪ್ಪನ್ನು ಒಪ್ಪಿಕೊಳ್ಳುವುದು, ಮತ್ತಿನ್ನೇನೋ ನನಗೆ ತಿಳಿಯದು. ನನ್ನ ಎಲ್ಲ ಬುದ್ದಿಯನ್ನು ತುಂಬಾ ಕ್ಷಿಪ್ರವಾಗಿ ಬಳಸಬೇಕಾಗುವುದೇನೋ ಎಂದು ನನಗೆ ಹೆದರಿಕೆ ಆಗುತ್ತಿದೆ. ನನ್ನಲ್ಲಿ ಅಷ್ಟು ಜ್ಞಾನವಿಲ್ಲ. ಆದರೆ ಯುದ್ಧ ಮುಗಿದ ಮೇಲೆ ನನ್ನ ಬುದ್ಧಿ ಅಥವಾ ಈ ವಿಚಾರ ಮಾಡುವ ಶಕ್ತಿ ಮಿಕ್ಕಿ ಉಳಿಯಲಿಕ್ಕಿಲ್ಲ.

ನಿನ್ನ,
ಆನ್
*****

Tagged:

Leave a Reply

Your email address will not be published. Required fields are marked *

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...