Home / ಬಾಲ ಚಿಲುಮೆ / ಕಥೆ / ಒದಿದ ದಡ್ಡರ ಕಥೆ

ಒದಿದ ದಡ್ಡರ ಕಥೆ

ಒಂದಾನೊಂದು ಊರಿನಲ್ಲಿ ನಾಲ್ವರು ಮಿತ್ರರು ಇದ್ದರು. ಅವರಲ್ಲಿ ಮೂವರು ಶಾಸ್ತ್ರವನ್ನು ಚೆನ್ನಾಗಿ ಓದಿದವರು. ಆದರೂ ಬುದ್ಧಿಯಿಲ್ಲದವರು.  ಉಳಿದ ನಾಲ್ಕನೆಯವನು ಬುದ್ಧಿವಂತನಾದರೂ ಶಾಸ್ತ್ರವನ್ನು ಅರಿಯದವನು. ಅವರು ನಾಲ್ವರೂ ಒಂದು ದಿನ ಒಂದು ಕಡೆ ಸೇರಿ ಯೋಚಿಸಿದರು: “ವಿದ್ಯೆಯನ್ನು ಕಲಿತುದಕ್ಕೆ ದೇಶಾಂತರಗಳಿಗೆ ಹೋಗಿ ನರಪತಿಗಳನ್ನು ಸಂತೋಷಪಡಿಸಿ ಬೇಕಾದ ಹಾಗೆ ಹಣವನ್ನು ಸಂಪಾದಿಸಬೇಕು. ಇಲ್ಲದಿದ್ದರೆ ಏನು ಫಲ?” ಎಂದು ಒಬ್ಬನು ಹೇಳಿದನು. ಹಾಗೇ ಆಗಲೆಂದು ಎಲ್ಲರೂ ದೇಶಾಟನಕ್ಕೆ (ದೇಶಗಳನ್ನು ತಿರುಗುವುದು) ಹೊರಟರು.
ಅಷ್ಟು ದೂರ ಹೋದಮೇಲೆ ಅವರೆಲ್ಲೆಲ್ಲಾ ದೊಡ್ಡವನು “ನಮ್ಮಲ್ಲಿ ಇವನು ಬುದ್ಧಿವಂತನಾದರೂ ವಿದ್ಯಾವಂತನಲ್ಲ. ವಿದ್ಯೆಯಿಲ್ಲದೆ ರಾಜರನ್ನು ಮೆಚ್ಚಿಸುವುದೆಂತು? ನಾನು ಸಂಪಾದಿಸುವುದರಲ್ಲಿ ಇವನಿಗೆ ನಾನು ಪಾಲು ಕೊಡುವುದಿಲ್ಲ. ಅದರಿಂದ, ಇವನು ಬೇಕಾದರೆ ಈಗಲೇ ಮನೆಗೆ ಹೋಗಲಿ” ಎಂದನು. ಎರಡನೆಯವನು “ನಿಜ ಅಯ್ಯಾ ಸುಬುದ್ಧಿ, ನೀನು ಹಿ೦ತಿರುಗು. ನೀನು ವಿದ್ಯಾವಂತನಲ್ಲ.” ಎಂದನು. ಮೂರನೆಯವನು “ಎಲಾ, ಇದು ಸರಿಯಲ್ಲ. ನಾವು ನಾಲ್ವರೂ ಬಾಲ್ಯದಿಂದಲೂ ಒಟ್ಟಿಗಿದ್ದು ಬಂದುದನ್ನೆಲ್ಲಾ ಸಮವಾಗಿ ಅನುಭವಿಸಿದವರು. ಅಲ್ಲದೆ,
ತನ್ನವನಿವನವ ಬೇರೆಂಬಿಣಿಕೆ.| ನಿಜದಿಂ ನೋಡಲು ಸಣ್ಣದು ಮನಕೆ || 
ಎಲ್ಲರು ತನ್ನವರೆಂಬುವ ಎಣಿಕೆ | ಸತ್ಯವು ಕೇಳಾ ಹಿರಿಯಮನಕ್ಕೆ ||೧೭||
ಅದರಿಂದ ಎಲ್ಲರೂ ಸೇರಿ ಹೊಗೋಣ” ಎಂದನು. ಎಲ್ಲರೂ ಹಾಗೇ ಆಗಲಿ ಎಂದು ಮುಂದೆ ಹೋದರು.
ಹಾದಿಯು ಕಾಡಿನಲ್ಲಿ ಹಾದು ಹೋಗುವುದು. ದಾರಿಯಲ್ಲಿ ಒ೦ದು ಸಿಂಹದ ಮೂಳೆಗಳು ಚೆಲ್ಲಾಡಿದ್ದುವು. ಅದನ್ನು ಕಂಡು ಒಬ್ಬನು “ಇದೋ, ಇಲ್ಲಿ ಯಾವುದೋ ಪ್ರಾಣಿಯು ಸತ್ತು ಬಿದ್ದಿದೆ. ಇದಕ್ಕೆ ನಮ್ಮ ವಿದ್ಯಾ ಪ್ರಭಾವದಿಂದ ಜೀವವು ಬರುವಂತೆ ಮಾಡೋಣ. ನಾನು ಈ ಅಸ್ಥಿಗಳನ್ನು ಸರಿಯಾಗಿ ಜೋಡಿಸುವೆನು.” ಎಂದು ಆ ಮೂಳೆಗಳನ್ನೆಲ್ಲ ಜೋಡಿಸುವೆನು. “ಎರಡನೆಯವನು ತನ್ನ ವಿದ್ಯಾಬಲದಿಂದ ಚರ್ಮ ಮಾಂಸ ರಕ್ತಗಳು ಬರುವಂತೆ ಮಾಡಿದನು. ಮೂರನೆಯವನು ಜೀವವನ್ನು ಬರಿಸುವೆನೆಂದು ಹೊರಟನು.
ಅಷ್ಟರಲ್ಲಿ ಸುಬುದ್ದಿಯು ಮುಂದೆ ಬಂದು ತಡೆದು, “ಎಲೈ ನಿಲ್ಲು, ಇದು ಸಿಂಹ! ಇದನ್ನು ಬದುಕಿಸಿದರೆ ಇದು ನಮ್ಮೆಲ್ಲರನ್ನೂ ಸಂಹರಿಸುವುದು” ಎಂದನು. ಅವನಿಗೆ ಕೋಪಬಂತು. ಅವನು ಛೇ, ಮೂರ್ಖ! ನನ್ನ ವಿದ್ಯೆಯನ್ನು ತೋರಿಸಬೇಡ ಎನ್ನುವೆಯಾ?” ಎಂದು ಅವನನ್ನು ಹೊಡೆಯುವುದಕ್ಕೆ ಹೋದನು. ಆದಕ್ಕವನು, “ಹಾಗಾದಕ್ಕೆ ಕೊಂಚ ತಡೆ, ನಾನು ಮರವನ್ನು ಹತ್ತಿ ಕೂಳ್ಳುವೆನು” ಎಂದು ಸರಸರನೆ ಮರವನ್ನು ಹತ್ತಿದನು.
ಅನಂತರ ಅವನು ಮಂತ್ರವನ್ನು ಹಾಕಿದನು. ಸಿಂಹಕ್ಕೆ ಜೀವವೂ ಬಂತು. ಅದು ಅವರ ಮೇಲೆಯೇ ಬಿದ್ದು ಅವರು ಮೂವರನ್ನೂ ಕೊಂದೂ ಹಾಕಿತು. ಆ ಸಿಂಹವು ಅವರನ್ನು ತಿಂದು ತೇಗಿ ಹೊರಟು ಹೋದಮೇಲೆ, ಸುಬುದ್ದಿಯು ಮರದಿಂದಿಳಿದು ಮನೆಗೆ ಹೋದನು. “ಅದರಿಂದ ವಿದ್ಯೆಗಿಂತ ಬುದ್ಧಿಯು ಹೆಚ್ಚು.” ಎಂದು ಹೇಳಿದೆನು. ಅಲ್ಲದೆ,
ಶಾಸ್ತ್ರವ ಬಲ್ಲೊಡೆ ಸಾಲದು ಕೇಳೈ | ಲೋಕಾಚಾರವ ತಿಳಿದಿರಬೇಕೈ ॥ 
ಮೂರ್ಖರು ಪಂಡಿತರಾಗೇನಾಯಿತು? ಅಪಹಾಸ್ಯವ ಪಡೆದರು ಸರ್ವತ್ರ ॥೧೮॥
ಎನ್ನಲು ಚಕ್ರಧರನು “ಅದೆಂತು?” ಎಂದು ಕೇಳಿದನು.
‘ಸುವರ್ಣಸಿದ್ಧಿಯು ಹೇಳಿದನು:-
*****
ಮೂರ್ಖ ಪಂಡಿತರ ಕಥೆ ಓದಿ
Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...