Home / ಕವನ / ಕವಿತೆ / ಪಯಣದ ಹಾಡು

ಪಯಣದ ಹಾಡು

ಗಾಳಿ ಬಿಟ್ಟಿತು ಏಳು ಕೆಳದಿ ಕೇಳು ಕಡಲಿನ ಕರೆಯನು
ನಾಳೆ ಸಿಕ್ಕದು ಇಂಥ ವೇಳೆಯು ಹೇಳು ಪಯಣದ ಹಾಡನು

ದೇವಲೋಕದ ದಿವ್ಯ ಗಾನದ ಭವ್ಯನಾದವನಾಲಿಸು
ಸಾವು ನೋವುಗಳಾಚೆ ಚಾಚಿಹ ಭಾವಲೋಕವನೀಕ್ಷಿಸು

ಸತ್ಯನಿತ್ಯಗಳಿಂದ ಬಂದಿಹ ಚೈತ್ಯಪುರುಷನಮಾತ್ಯರು
ಮೃತ್ಯು ಮುಖದಿಂದಮರರಾದೆವು ನಮ್ಮ ಹಿರಿಯರು ಕರೆವರು

ತೊರೆದು ತೀರದಿ ತೊಡವುಗಳನೀನೇರು ಹಡಗವು ಕಾದಿದೆ
ತೊರೆಯ ತೊಡೆಯನ್ನೇರಿ ಆಚೆಯ ದಡದ ವರೆಗೂ ಸಾಗಿದೆ

ಹೊಂಬಣ್ಣದ ಹೊನ್ನು ಹಡಗವು ಹೊಂಬಿಸಿಲಲಿ ಹೊಳೆವುದು
ನಂಬಿದವರಿಗೆ ಇಂಬು ದೊರೆಯುವದೆಂಬ ಸತ್ಯವ ಸಾರ್ವುದು

ನೀಲಿ ಪಟ ಮೇಲೆದ್ದು ಮೆರೆವುದು ನೀಲವ್ಯೋಮದ ಮಧ್ಯದಿ
ಕಾಲದೊಂದಿಗೆ ತಾಲ ಹಾಕುತಕಾಲ ಮಂಡಲ ಗರ್ಭದಿ

ದಾರಿಯುದ್ದಕು ಕೆತ್ತಿ ಕೋದಿದೆ ಹವಳ ಮುತ್ತಿನ ತೋರಣ
ಹಾರದಂದದಿ ಹಾರ ಹಕ್ಕಿಗಳಿಂದ ಬೆಳಗಿದೆ ಮೂಡಣ

ಮುಗಿಲ ನೀರಿನ ಮೀನದಂದದಿ ರೆಕ್ಕೆಗೊಂಡಿಹ ಮನುಜರು
ನಗುತ ನಮ್ಮನ್ನೆ ದುರುಗೊಳ್ಳುತ ಮುಂದ ಮುಂದಕೆ ಹೊರಟರು

ಅಲೆಯುತಲೆಯುತ ಅಲೆಗಳೊಂದಿಗೆ ಆಟವಾಡುತ ಸಾಗುವಾ
ಕಲೆತು ಕಡಲಿನ ಜೀವದೊಂದಿಗೆ ದೇವಲೋಕಕ್ಕೇರುವಾ

ನೋಡು ದೂರದಿ ಆಚೆ ತೀರದಿ ದೇವಗಡಣವು ಕೂಡಿದೆ
ಮೋಡದೊಡಲಿಂದಿಳಿದು ಬಂದಿಹ ತಾರೆ ಹೂಮಳೆಗರೆದಿದೆ

ಜೀವ ಹಿರಿ ಹಿರಿದಾಗಲಿ
ದೇವನೊಲುಮೆಗೆ ಬಾಗಲಿ

ಆತನುಸುರಿಗೆ ಹೆಸರು ಬರಲೆಂದೆನ್ನು ಸಾಗುವಾ ಮುಂದಕೆ
ಆತನಿಂದಲೆ ಬ೦ದು ಮರಳಿದೆವೆನ್ನು ಆತನ ಪಾದಕೆ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...