ಕೊಡುಗೈಯ ದೊರೆ ನಮ್ಮ ರಾಮಚಂದ್ರಾ!
ಕಡೆವರೆಗು ಕೈಪಿಡಿವ ಪ್ರೇಮಸಾಂದ್ರಾ!
ಎಷ್ಟೊಂದು ಜೀವಿಗಳಿಗಿತ್ತಿನೋ ಮೋದ!
ಮತ್ತೊಂದು ಜೀವಲತೆಗಿಂದಾಸರಾದ!
ಎಂಥ ಧೀರೋದಾತ್ತ ಸ್ನೇಹಶೀಲ!
ಇಂಥವನಿಗೆಂದಿಗೂ ದೇವನನುಕೂಲ!
ಇಂಗಡಲ ಚಂದಿರಗೆ ಇಂದೇಕೆ ಜೋಕೆ?
ಮಂಗಲಾತ್ಮಗೆ ಬೇರೆ ಮಂಗಲವು ಬೇಕೇ?
*****
ಕನ್ನಡ ನಲ್ಬರಹ ತಾಣ
ಕೊಡುಗೈಯ ದೊರೆ ನಮ್ಮ ರಾಮಚಂದ್ರಾ!
ಕಡೆವರೆಗು ಕೈಪಿಡಿವ ಪ್ರೇಮಸಾಂದ್ರಾ!
ಎಷ್ಟೊಂದು ಜೀವಿಗಳಿಗಿತ್ತಿನೋ ಮೋದ!
ಮತ್ತೊಂದು ಜೀವಲತೆಗಿಂದಾಸರಾದ!
ಎಂಥ ಧೀರೋದಾತ್ತ ಸ್ನೇಹಶೀಲ!
ಇಂಥವನಿಗೆಂದಿಗೂ ದೇವನನುಕೂಲ!
ಇಂಗಡಲ ಚಂದಿರಗೆ ಇಂದೇಕೆ ಜೋಕೆ?
ಮಂಗಲಾತ್ಮಗೆ ಬೇರೆ ಮಂಗಲವು ಬೇಕೇ?
*****