Home / ಕವನ / ಕವಿತೆ / ಇಲ್ಲಿಯ ನ್ಯಾಯ

ಇಲ್ಲಿಯ ನ್ಯಾಯ

ಸುಡು ಈ ಗಾಳಿವೇಗವನ್ನು, ಭೋಗವನ್ನು, ಚೆಲುವನ್ನು!
ಪಯಣವಿಲ್ಲದೆ ನರನು ಬಾಳಿದರೆ-ತಪ್ಪೇನಿತ್ತು?
ನಿರ್ಮಿಸಿಹನೀಗ ನರಕವನ್ನು ನರಪ್ರಾಣಿಗಳಿಗೆ,
ಒಬ್ಬನ ಸುಖಕಾಗಿ ಇನ್ನೊಬ್ಬರಿಗೆ ದುಃಖ:
ಒರ್ವನ ಸ್ವರ್ಗಕ್ಕಾಗಿ ಇನ್ನೊರ್ವನಿಗೆ ರವರವ ನರಕ!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?

ಬಿಳಿಯನಿಗಿದೆ ಮಂಜುಗಡ್ಡೆಯ ತಿನುವಾಸೆ;
ಅದಕೆ ನಂಜಿನಂಥ ಶೆಡ್ಡಿನಲ್ಲಿ ನಿಲ್ಲುವನು ಕರಿಯ.
ಬಿಳಿಯನಿಗೆ ಬೇಕು ಕೈಜೋಡಿಸಿದ ಸೇವೆ,-
ಆದಕೆ ಕರಿಯನಾದ ನಿತ್ಯಸೇವಕ!
ಇವ ಬಿಳಿಯ ಅವ ಕರಿಯ, ಇವ ಹಾರುವ ಅವ ಹೊಲೆಯ,
ಇವ ಸೇವ್ಯ ಅವ ಸೇವಕ, ಇವ ಗಾಣಿಗ ಅವ ಗಾಣ,-
ಅವ ತ್ರಾಣ-ಅವ ನಿತ್ರಾಣ!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?

ಮಾನವಜಾತಿಯನ್ನು ಮಣ್ಣುಮುಕ್ಕಿಸುವ ರೀತಿಯ ನೋಡಿರೆ!
ಪಶುವಿಗಿಂತ ಕಡೆ,-ಪಕ್ಷಿಗಿಂತ ಕೀಳು ಮಾನವನಿಲ್ಲಿ!
ತಲೆಗೆ ಎಣ್ಣೆಯಿಲ್ಲ, ಮೈಗೆ ಬಟ್ಟೆಯಿಲ್ಲ-
ಮೈಯಲ್ಲಿಯ ಎಣ್ಣೆ ಮುಗಿಯುವ ತನಕ-
ಕಣ್ಣೆದುರಿನ ಬಟ್ಟೆ ಕಾಣುವ ತನಕ-
ದುಡಿಯಬೇಕು ಮಡಿಯಬೇಕಿಲ್ಲಿ ಮಾನವನು!
ಅಡಿಯಾಳಾಗಿ ನಡೆಯಬೇಕು!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?

ದಾಸ್ಯದಲ್ಲಿ ಸಿಲುಕಿ ಗಾಸಿಗೊಂಡ ತಾಯ್ನಾಡೆ!
ಭಾರತದೇವಿ!
ಈ ಬವಣಿ ಮಾತ್ರ ಬರದಿರಲಿ ನಿನಗೆ.
ಪಾರತಂತ್ರ್ಯದಲ್ಲಿ ಬಿದ್ದು ಪಾರಗಾಣದಿರಬಹುದು,-
ಬಡತನ, -ಒಡಕುತನ,-ಎಲ್ಲ ಬರಬಹುದು.
ಆದರೆ ಈ ಮದೋನ್ಮತ್ತತೆಯ ಅಂಧತೆ ಬೇಡ!
ಒಡೆತನದ ನರಕ ಬೇಡ!
ಬಂಡಿವಾಳದ ಬಂಡು ಬೇಡ!
ಅದು ಪರಮ ದಾಸ್ಯ! ದುಃಸ್ಸಹ ನರಕ!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...