Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ, ಸೆಪ್ಟೆಂಬರ ೨೭, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ, ಸೆಪ್ಟೆಂಬರ ೨೭, ೧೯೪೨

ಪ್ರೀತಿಯ ಕಿಟಿ,

ಬಹಳ ಕಾಲದ ಮೇಲೆ ಈಗ ತಾನೆ ನಾನು ಮಮ್ಮಿಯಿಂದ ಒದೆ ತಿಂದೆ. ಇತ್ತೀಚೆಗೆ ನಾವು ಒಬ್ಬರಿಗೊಬ್ಬರು ಹೆಚ್ಚಾಗಿ ಬೆರೆಯುವುದಿಲ್ಲ. ಮಾರ್‍ಗೊಟ್ ಮತ್ತು ನನ್ನ ಸಂಬಂಧವೂ ಸರಿಯಾಗಿಲ್ಲ. ನಮ್ಮ ಮನೆಯ ನಿಯಮದಂತೆ ನಾವು ಈ ರೀತಿಯಲ್ಲಿ ಸಿಟ್ಟು ಸೆಡವುಗಳ ಮಾಡುವಂತಿಲ್ಲ. ಹಾಗಿದ್ದರೂ ನನಗೆ ಕಾರಣವಿಲ್ಲದೇ ಸಿಟ್ಟು ಮಾಡುವುದು ಖುಷಿ ಕೊಡುತ್ತದೆ. ನನ್ನ ಸ್ವಭಾವ ಮಾರ್‍ಗೊಟ್ ಮತ್ತು ಮಮ್ಮಿಗಿಂತ ಸಂಪೂರ್ಣ ಭಿನ್ನ. ನಾನು ನನ್ನ ಗೆಳತಿಯರನ್ನು ಅರ್ಥಮಾಡಿಕೊಂಡಷ್ಟು ನನ್ನ ತಾಯಿಯನ್ನು ಅರ್ಥಮಾಡಿಕೊಳ್ಳಲಾರೆ.- ಇದು ಕಷ್ಟ.

ನಾವು ಆಗಾಗ ಯುದ್ಧದ ನಂತರದ ಸಮಸ್ಯೆಗಳನ್ನು ಚರ್ಚಿಸುತ್ತೇವೆ.ಇನ್ನು ಮುಂದೆ ಕೆಲಸಗಾರರ ಜೊತೆ ಹೇಗೆ ವ್ಯವವಹರಿಸಬೇಕಾದೀತು,ಮಾತಾಡಬೇಕಾದೀತು ಎಂಬಿತ್ಯಾದಿ.

ಶ್ರೀಮತಿ ವ್ಯಾನ್ಡ್ಯಾನ್‌ರದು ಮಕ್ಕಳಾಟದ ಸ್ವಭಾವ. ಅವರದು ವಿಚಿತ್ರ ವ್ಯಾಕುಲತೆ. ತಮ್ಮ ಖಾಸಗಿ ವಸ್ತುಗಳನ್ನು ಅಡಗಿಸಿಡುತ್ತಾರೆ. ಆದರೆ ಅವರ ಪ್ರತಿಯೊಂದು ವಸ್ತುಗಳು ಕಾಣೆಯಾದಾಗಲೂ ಮಮ್ಮಿ ಅದಕ್ಕೆ ಉತ್ತರಿಸಬೇಕು. ಅವುಗಳ ಕಣ್ಮರೆಗೆ ಸಕಾರಣ ಉತ್ತರ ನೀಡಬೇಕು. ಕೆಲವು ಜನ ತಮ್ಮ ಮಕ್ಕಳೊಂದಿಗೆ ಇತರರ ಮಕ್ಕಳನ್ನು ಸಾಕುವುದನ್ನು, ಅವರಿಗೆ ಬುದ್ದಿ ಹೇಳುವುದನ್ನು ಎಷ್ಟೊಂದು ಇಷ್ಟಪಡುವರು. ಶ್ರೀಮತಿ ವ್ಯಾನ್ಡ್ಯಾನ್ ಇಂತಹ ಜನ. ಮಾರ್‍ಗೊಟ್ ಇದನ್ನು ಬಯಸುವುದಿಲ್ಲ. ಆಕೆ ಸಜ್ಜನರಲ್ಲಿ ಸಜ್ಜನಳು. ಎಲ್ಲ ರೀತಿಯಿಂದಲೂ ಪರಿಪೂರ್ಣ, ಆದರೆ ನಮ್ಮಿಬ್ಬರನ್ನೂ ಜೊತೆಗಿಟ್ಟು ನೋಡಿದರೆ ನನ್ನಲ್ಲಿ ತುಂಬಾ ಕಿಡಿಗೇಡಿತನವಿರುವಂತೆ ಕಾಣುತ್ತದೆ. ನಮ್ಮ ಊಟದ ಸಮಯದಲ್ಲಿ ಅತ್ತಲ್ಲಿಂದ ಇತ್ತಲಿಗೆ ಇತ್ತಲಿಂದತ್ತಲಿಗೆ ಉದ್ದಟತನದ ಉತ್ತರಗಳು, ಪರಸ್ಪರ ಛೀಮಾರಿಗಳು ಹಾರಾಡುವುದನ್ನು ನೀನು ಕೇಳಬೇಕು. ಮಮ್ಮಿ ಡ್ಯಾಡಿ ಯಾವಾಗಲೂ ನನ್ನನ್ನೆ ಬಲವಾಗಿ ಸಮರ್ಥಿಸುತ್ತಾರೆ. ಅವರ ಬೆಂಬಲ ಇಲ್ಲದಿದ್ದರೆ ನಾನು ಜಗಳವನ್ನು ಕಾದುವುದು ಸಾಧ್ಯವಿಲ್ಲ. ಆದಾಗ್ಯೂ ಅವರು ನಾನು ಹೆಚ್ಚು ಮಾತನಾಡಬಾರದೆಂದು, ಸ್ವಲ್ಪ ನಯನಾಜೂಕಿನಿಂದ ಇರುವಂತೆ, ಎಲ್ಲ ವಿಷಯದಲ್ಲೂ ನನ್ನ ಮೂಗು ತೂರಿಸಬಾರದೆಂದು ಹೇಳುತ್ತಾರೆ. ಆದರೆ ಅದು ನನ್ನಿಂದಾಗುವುದಿಲ್ಲ. ಒಂದೊಮ್ಮೆ ಡ್ಯಾಡಿಗೆ ಅಷ್ಟು ತಾಳ್ಮೆ ಇಲ್ಲದಿದ್ದರೆ, ನನ್ನ ಹೆತ್ತವರಿಗೆ ಅದೆಂಥಹಾ ನೋವನ್ನು ನಾನು ತಂದೊಡ್ಡುತ್ತಿದ್ದೆ ಎಂಬುದನ್ನು ನೆನೆದರೆ ನನಗೆ ಭಯವಾಗುತ್ತದೆ. ಅವರು ನನ್ನನ್ನು ಅದೆಷ್ಟು ಪ್ರೀತಿಯಿಂದ ಸಹಿಸಿಕೊಳ್ಳುತ್ತಾರೆ.

ನನಗೆ ಇಷ್ಟವಿಲ್ಲದ ಕೆಲವು ತರಕಾರಿಗಳನ್ನು ಬಟಾಟೆಯೊಂದಿಗೆ ಮಿಶ್ರಣ ಮಾಡುವ ಸಮಯದಲ್ಲಿ ನಾನೇಕೆ ಹಾಗೇ ಮಾಡಿದೆನೆಂದು ಶ್ರೀಮತಿ ವ್ಯಾನ್ಡ್ಯಾನ್ ಮತ್ತು ಮವರೋವ್‌ರಿಗೆ[ ಮಮ್ಮಿ] ಅರ್ಥವಾಗುವುದಿಲ್ಲ. ಮಕ್ಕಳು ಹೀಗೆಲ್ಲ ಮಾಡಬಾರದು ಅನ್ನುತ್ತಾರವರು.

“ಆನ್, ಇಗೋ, ಇನ್ನೊಂದಿಷ್ಟು ತರಕಾರಿ ತಗೋ” ಅವರು ನೇರವಾಗಿಯೇ ಹೇಳಿಬಿಡುತ್ತಾರೆ.

“ಬೇಡ. ಥ್ಯಾಂಕ್ಸ , ಶ್ರೀಮತಿ ವ್ಯಾನ್ಡ್ಯಾನ್ ನನ್ನಲ್ಲಿರುವುದೇ ನನಗೆ ಸಾಕು” ಎಂದು ಹೇಳಿದರೂ,

“ತರಕಾರಿಗಳು ಆರೋಗ್ಯಕ್ಕೆ ಒಳಿತು. ನಿನ್ನ ಮಮ್ಮಿ ಕೂಡಾ ಅದನ್ನೇ ಹೇಳುವುದು. ಸ್ವಲ್ಪ ತೆಗೆದಿಕೋ” ಎನ್ನುತ್ತಾ ಡ್ಯಾಡಿ ಅವರಿಂದ ನನ್ನ ಬಚಾವ್ ಮಾಡುವವರೆಗೂ ಒತ್ತಾಯ ಮಾಡುತ್ತಾರೆ.

ಆನಂತರ ನಾವು ವ್ಯಾನ್ಡ್ಯಾನ್‌ರಿಂದ ಪುರಾಣ ಕೇಳಬೇಕಾಗುತ್ತದೆ. ನೀನು ನಮ್ಮ ಮನೆಯಲ್ಲಿರಬೇಕಾಗಿತ್ತು. ನಾವೆಲ್ಲ ಎಷ್ಟು ಸರಿಯಾಗಿ ಬೆಳೆದಿದ್ದವು. ಇದನ್ನು ನೋಡಿದರೆ ಆನ್ ಎಷ್ಟೆಲ್ಲಾ ಹದತಪ್ಪಿ ಬೆಳೆದಿದ್ದಾಳೆ. ಆಕೆ ನನ್ನ ಮಗಳಾಗಿದ್ದರೆ ನಾನು ಇದನ್ನು ಖಂಡಿತಾ ಸಹಿಸುತ್ತಿರಲಿಲ್ಲ.

ಆನ್ ನನ್ನ ಮಗಳಾಗಿದ್ದರೆ ಇದು ಯಾವಾಗಲೂ ಅವರು ಮೊದಲ ಮತ್ತು ಕೊನೆಯ ಮಾತು.

ಪುಣ್ಯಕ್ಕೆ ನಾನವರ ಮಗಳಾಗಲಿಲ್ಲ.

ಮಕ್ಕಳನ್ನು ಬೆಳೆಸುವ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಶ್ರೀಮತಿ ವ್ಯಾನ್ಡ್ಯಾನ್ ಮಾತಾಡಿದ ಮೇಲೆ ಅಲ್ಲೊಂದು ಸ್ಮಶಾನ ಮೌನವಿತ್ತು. ಆನಂತರ ಡ್ಯಾಡಿ, ನನ್ನಗನ್ನಿಸುತ್ತೆ, ಆನ್ ಬಹಳ ಸಂಸ್ಕಾರಯುತವಾಗಿಯೇ ಬೆಳೆದಿದ್ದಾಳೆ. ಅಷ್ಟಕ್ಕೂ ನಿಮ್ಮ ತರಕಾರಿಯ ಕುರಿತ ಉದ್ದುದ್ದ ಪ್ರವಚನಗಳಿಗೆ ಎದುರು ಮಾತಾಡದೇ ಸುಮ್ಮನೇ ಸಹಿಸಿಕೊಳ್ಳುವುದನ್ನು ಕಲಿತಿದ್ದಾಳೆ. ಆದರೆ ನೀವೊಮ್ಮೆ ನಿಮ್ಮ ತಟ್ಟೆಯನ್ನು ನೋಡಿಕೊಳ್ಳಿ‌ಎಂದು ನುಡಿದರು. ಈ ಮಾತುಗಳು ಅವರ ಮುಖಭಂಗ ಮಾಡಿದವು. ಒಂದು ನಿಮಿಷ ಸುಮ್ಮನೇ ಇದ್ದ ಅವರು ಅವುಗಳನ್ನು ತೆಗೆದುಕೊಳ್ಳತೊಡಗಿದರು. ಅವರು ಕೆಟ್ಟವರಲ್ಲ. ಆದರೆ ಸಂಜೆ ಹೊತ್ತಿಗೆ ಇಷ್ಟೊಂದು ತರಕಾರಿಗಳು ಅವರ ಹೊಟ್ಟೆನೋವಿಗೆ ಕಾರಣವಾಗುವುದು. ಅವರು ನನ್ನ ಬಗ್ಗೆ ಸುಮ್ಮನೇ ಬಾಯಿ ಮುಚ್ಚಿಕೊಂಡಿರುವುದಿಲ್ಲ, ಹಾಗಿದ್ದಲ್ಲಿ ಹೀಗೆ ಸುಮ್ಮನೇ ಸಣ್ಣ ಸಂಗತಿಗಳಿಗೆಲ್ಲ ಕ್ಷಮೆ ಕೇಳಬೇಕಾಗಿರಲಿಲ್ಲ. ಇನ್ನು ಶ್ರೀಮತಿ ವ್ಯಾನ್ಡ್ಯಾನ್ ತನ್ನನ್ನು ಹೊಗಳಿಕೊಳ್ಳುವುದು ಅದ್ಭುತವಾಗಿರುತ್ತದೆ. ಅದು ನನಗೆ ಬರದು. ನಾನು ತೆಪ್ಪಗಿರುತ್ತೇನೆ ಮತ್ತು ನನ್ನ ಆ ಸ್ವಭಾವವನ್ನು ಅವರು ಧ್ವೇಷಿಸುತ್ತಾರೆ.

ನಿನ್ನ,
ಆನ್

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...