Home / ಕವನ / ಕವಿತೆ / ಏಡನ್‌

ಏಡನ್‌

ಮುಗಿಲುದ್ದ ನಿಗಿನಿಗಿ ಕೆಂಡದಂಥ ನೆಲದೊಳಗಿಂದ ನೆಗೆಯುತಿವೆ ನೋಡು,-
ಗುಡ್ಡ ದಿನ್ನೆಗಳು, ಪರ್ವತಗಳು, ಪರ್ವತಾವಳಿಗಳು!
ಭೂಮಿತಿಯ ನೆನೆದು ದೇವನಿಟ್ಟ ತ್ರಿಕೋಣಾಕೃತಿಗಳಂತೆ,-
ಉಸುಬಿನರಣ್ಯದಿ ಕಾವಲು ನಿಂತ ಹಿರಣ್ಯಕಶ್ಯಪನಂತೆ!
ಗಿಡವಿಲ್ಲ ಬಳ್ಳಿಯಿಲ್ಲ, ಹಾಳು ಹಾಳು! ಬೀಳು ಬೀಳು!
ವೃಕ್ಷವಿಲ್ಲ! ರುಕ್ಷ! ರುಕ್ಷ! ಹೊಗಿ! ಹೊಗಿ! ನಿಗಿ ನಿಗಿ!
ಹಸಿರ ಹೆಸರಿಲ್ಲ, ತಣ್ಣುಸಿರು ತಣ್ಣೆಳಲಿಲ್ಲ, ತೊಯ್ದ ಮಳಲಿಲ್ಲ,-
ನೀರಡಿಸಿ ಚಾಚಿದ ನಾಲಗೆಯಿದು! ಏಡನ್ನು!

ಮುನ್ನೀರ ಹತ್ತಿರ ನಿಂತು ಇಷ್ಟು ನೀರಡಿಸಿತೇ ನೆಲವು?
ಇಲ್ಲಿ ನೀರೆಲ್ಲಿ? ಉಪ್ಪಿನರಣ್ಯವಿದು!
ನೀರಡವಿಯ ಬದಿಗೆ ಉಸುಬಿನ ಬಯಲ ಹೊಯಲು!
ಇಲ್ಲಿಯ ಕೆರೆ ಬರಿದು! ಬಾವಿ ಬರಿದು! ಕುಂಡ ತೆರವು! ಹೊಂಡ ತೆರವು!
ಹನಿಹನಿ ನೀರನರಸಿ ಅಂಡಲೆಯುತಿದೆ ನೋಡು, ಜನದನದ ಜಂಗುಳಿಯು!
ಅತ್ತಕಡೆ ಬಿದ್ದರೆ ಕೆಂಡದಂಥುಸುಬು! ಇತ್ತ ಜಲಸಮಾಧಿ!
ಅರಣ್ಯದ ಹಡಗವೇ ಪಶುವಿಲ್ಲಿ-ಒಂಟಿಯಾದ ಒಂಟಿ!
ಅದೇ ಎತ್ತು! ಅದೇ ಕರು! ಅದೇ ಎಮ್ಮೆ! ಅದೇ ಆಕಳು!
ಅಲ್ಲಿಯ ನರಪ್ರಾಣಿ ಸಹ ಒಂಟಿಯಂತೆ ಗೋಣೆತ್ತಿ ನೋಡುವನು.
ಪರಿಧಾನದಿ ಮೃಗಜಲವ ಕಂಡು ಬೆನ್ನಟ್ಟಿ ಬಿಸುಸುಯ್ಯುವನು.
ಎಂಥ ಭಯಂಕರ ತಾಪ! ಎಂಥ ಭಯಂಕರ ಶಾಪ!!

ಏಡಿಯಂತೆ ಏಡನ್ನನು ಹಿಡಿದ ಗುಡ್ಡದ ಕೆಳಗೆ
ಗಿಡ್ಡದಾಗಿ ನಿಂತಿದೆ ನೋಡು,-ಬ್ರಿಟನ್ನಿನ ಬ೦ದರ! ಕಡ್ಡಿಯ ಹಂದರ!
ಸಾಮ್ರಾಜ್ಯವೈಭವವೇ! ಮಣ್ಣು ಮುಕ್ಕಿಲ್ಲಿ ಬಂದು.
ಉಸುಬಿನ ಕಣಗಳನ್ನೆಣಿನು! ಮರಣದ ಪಾಠವನ್ನು ಕಲಿ!
ಹೋಲಿಸು ನಿನ್ನ ಸಂಪತ್ತನ್ನು ಈ ಹಾಳಿನೈಸಿರಿಯೊಡನೆ.
ಇದರ ಸಂಯಮ ನಿನಗೆ ಸಂಧಿಸೀತೆ?
ಇದರ ತಾಳ್ಮೆಯ ಗುಟ್ಟು ನಿನಗೆ ತುಸುವಾದರೂ ತಿಳಿದೀತೆ?
ಈ ಗುಡ್ಡದಡಿಗೆ ನಿನ್ನ ಮನೆಗಳು ಗುಬ್ಬಿಮನೆಗಿಂತ ಕಡೆ!
ಸುಡು ಅವುಗಳನು! ಬೆಂಕಿ ಹಚ್ಚು! ಅರಣ್ಯದಲಿ ತಿರುಗು ಅರಬನಂತೆ!
ಇಲ್ಲಿ ಬೇಡ ನಿನ್ನ ಸೊಕ್ಕು. ನಿನ್ನ ಸೆಡವಿಗೆ ಎಡೆಯಿಲ್ಲಿಲ್ಲಿ.
ಕಿತ್ತು ನಿನ್ನ೦ಗಡಿಯ! ಹದ್ದುಪಾರಾಗು ಬಿಟ್ಟೀ ಗಡಿಯ!
ನಿನ್ನ ಗರ್ವಭಂಗಕ್ಕೆ ಹೆಚ್ಚೇನು ಬೇಕು? ಏಡನ್ನಿನ ಗುಡ್ಡವೊಂದು ಸಾಕು!

ಈ ಉಸುಬಿನ ಬೈಲಿಗೆ ಹೊಸಬನಾದ ನನಗೆ ಹೂಳೆಯುವದು ಅರ್ಥವೊಂದು.
ನೀರಿಲ್ಲದ ಬೆಟ್ಟಗಳ ನಡುವೆ ಬೇರೂರಿ ಬೆಳೆದ ಆಲವ ನೋಡು!
ಸಾವಿರ ವರುಷ ಸೂರ್ಯನಡಿಗೆ ನೀರಡಿಸಿ ಮಲಗಿತ್ತು ಅರಬ್ಬಿ ದೇಶ!
ಆಗ ತಣಿಸಿದನದರುದರವನು ಪೈಗಂಬರನು ಹುಟ್ಟಿ.
ಆಂದು ಅರಬ್ಬಿಯು ಕುಡಿದ ನೀರಿಗೆ ಸಮುದ್ರಗಳು ಬತ್ತಿದವು,
ಆರಬು ಹಿಂಗಿತ್ತು, ಭೂಮಿಗಿಳಿದಿದ್ದ ಚಂದ್ರ!
ಜಗದ ನಂದನವನಗಳೆಲ್ಲ ಅರಬರ ಕೈವಶವಾದವಂದು!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...