ದಿನದಿಂದ ದಿನಕ್ಕೆ ವಿಜ್ಞಾನ ಬೆಯುತ್ತಿದೆ. ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಿವೆ. ಯಾರು ನಿರೀಕ್ಷಿಸದಷ್ಟು ಹೊಸ ಹೊಸ ಸಂಶೋಧನೆಗಳು ಜರುಗುತ್ತಿವೆ.
ಇದಕ್ಕೆ ಪುಷ್ಠಿಯೆಂಬಂತೆ ಜಪಾನಿನ ಟೋಕಿಯೊ ಪ್ರಾಧ್ಯಾಪಕರು ಈಗೀಗ ೨೦೧೫ರಲ್ಲಿ ವಿಶಿಷ್ಟ ಅದ್ಭುತವಾದ ಪಟ್ಟಿಯೊಂದನ್ನು ಅಭಿವೃದ್ಧಿ ಪಡಿಸಿರುವರು. ಇದನ್ನು ‘ಜ್ವರ ಪಟ್ಟಿ’, ‘ತೋಳು ಪಟ್ಟಿ’ ಎಂದು ಹೆಸರಿಟ್ಟಿರುವರು.
ಈ ತೋಳುಪಟ್ಟಿಯನ್ನು ಹಾಕಿದ ಕ್ಷಣ ಜ್ವರವಿದ್ದರೆ ಅದು ಕೂಗುವುದು. ಸೈರನ್ ಮೊಳಗಿಸುವುದು. ಸಲೀಸಾಗಿ ಜ್ವರ ಬಂದಿರುವುದನ್ನು ಸಾರಿ ಸಾರಿ ಹೇಳುವುದು.
ಆಗ ಹಸುಗೂಸುವಾಗಿರಲಿ, ವೃದ್ಧರಿರಲಿ, ಯಾವುದೇ ರೋಗಿಯಾಗಿರಲಿ ಶೂಶ್ರೂಷೆಗೆ ಹೃದಯ ದೇಹದ ತಾಪಮಾನದ ಮೇಲೆ ನಿಗಾ ಇಡಲು ಈ ಜ್ವರಪಟ್ಟಿ ಸಹಾಯ ಮಾಡುವುದೆಂದು ವಿಜ್ಞಾನಿಗಳು ತಿಳಿಸಿರುವರು.
ಅಬ್ಬಾ! ನಾವೆಲ್ಲ ಚಿಕ್ಕವರಾಗಿದ್ದಾಗ ಜ್ವರ ಬಂದರೆ ಹಣೆಗೆ ಕೈ ಇಟ್ಟು ನೋಡುವುದು ಇಲ್ಲವೆ ನಮ್ಮ ಬಾಯಲ್ಲಿ ಥರ್ಮಾಮೀಟರ್ ಇಟ್ಟು ನೋಡಿ ತಿಳಿಯುವುದು.
ಆದರೆ ಇಂದು ವಿಜ್ಞಾನ, ಜ್ಞಾನ, ಬಹಳ ಬಹಳ ಮುಂದೆ ಮುಂದೆ ಹೋಗುತ್ತಿದೆ. ಹೊಸ ಹೊಸ ಸಂಶೋಧನೆಗಳು ಜರುಗುತ್ತಲೇ ಇವೆ.
ಇದೆಲ್ಲರ ಫಲವಾಗಿ ಜ್ವರಪಟ್ಟಿಯನ್ನು ಕಂಡು ಹಿಡಿದಿರುವರು ಜ್ವರ ಬಂದಿದೆಯೆಂದು ಅನಿಸಿದರೆ ಸಾಕು ಅದನ್ನು ತೋಳಿಗೆ ಧರಿಸಿದರೆ ಅದು ಕೂಗುವುದು!
ಜ್ವರ ಬಂದಿದೆಯೆಂದು ಅರ್‍ಥವಾಗುವುದು. ಅದು ಕೂಗಲಿಲ್ಲವೆಂದರೆ ಜ್ವರ ಬಂದಿಲ್ಲವೆಂದು ನೆಮ್ಮದಿಯಿಂದಿರುವುದು.
ಹೇಗಿದೆ ವಿಜ್ಞಾನಿಗಳ ಹೊಸ ಆವಿಷ್ಕಾರದ ಪಟ್ಟ…?
ಬರುಬರುತ್ತಾ ದಿನಗಳು ಉರುಳಿದಂತೆ, ಏನೆಲ್ಲ ಬರುವುದೋ ಕಾದು ನೋಡೋಣವಲ್ಲವೇ??
*****


















