ಸಾಮಾನ್ಯವಾಗಿ ಮೂಗು ವಾಸನೆಯನ್ನು ಗ್ರಹಿಸುವಲ್ಲಿ O.R.N.L. ಸೆನ್ಸಾರ್‌ಗಳು ರಾಸಾಯನಿಕ ಸರಳೀಕರಿಸುವ ವ್ಯವಸ್ಥೆಯಿಂದ ಜೀವಂತನಾಶಿಕದಂತೆಯೇ ಕೆಲಸ ಮಾಡಬಲ್ಲದು. ಈ ವಿದ್ಯುತ್ ಹಂದರ ಘಟಕಗಳನ್ನು ಕಂಪ್ಯೂಟರ್‌ಮ್ಯದಲ್ಲಿ ಅಡಗಿಸಿಡಲಾಗಿದೆ.
ಕೃತಕ ಸ್ನಾಯುಗಳ ಸಂಶೋಧನಾ ಸಂಸ್ಥೆ( A.N.R.I.) : ತಂತ್ರಜ್ಞಾನದ ಈ ಯುಗದಲ್ಲಿ ಸೈಬರ್ಗ್, ಬಳಕೆಯಲ್ಲಿದೆ ಮುಂದೆ ಬರುವ ಜ್ಞಾನ ತಂತ್ರಜ್ಞಾನತೆಯು ನೈಸರ್ಗಿಕವಾದ ವಿಧಿ ವಿಧಾನಗಳಿಗೆ ಆದ್ಯತೆ ಪಡೆದು ಇಟ್ಟುಕೊಂಡಿದೆ. ಮಾನವನ ಅಂಗಗಳು ಬಳುಕಿ ಬಾಗುವಂತೆ ಆಯೊನಿಕ್ ಪಾಲಿಮರ್ ಲೋಹದಾತುಗಳಿಂದ ಮಾಡಿರುವ ಸಾಮ್ಯ ಅಂಗಗಳು ಸಹ ಕ್ರಿಯೆ, ಪ್ರಕ್ರಿಯೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತದೆ. ಇದರ ಅಂಗವಸ್ತುಗಳನ್ನು ಈಗಾಗಲೇ ಮೆಕ್ಸಿಕೋದಲ್ಲಿ ತಯಾರಿಸಲಾಗಿದೆ. ಕೃತಕ ಸ್ನಾಯುಗಳ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಮೊಹಸೆನ್ ಶಹಿನ್‌ಪುರ್ ಈ ಅಂಗದ್ರವ್ಯಗಳನ್ನು ಸಿದ್ಧಪಡಿಸುವಲ್ಲಿ ಸಫಲರಾಗಿದ್ದಾರೆ. ವಿದ್ಯುತ್ ಶಕ್ತಿಯನ್ನು ಒರಗಿಸಿಕೊಳ್ಳುವ ಪಟ್ಟಿಕೆಗಳು ಬಾಗುವ ಸುರಳಿ, ಸುರಳಿಸುತ್ತಿಕೊಳ್ಳುವ ಕ್ರಿಯೆಗಳಲ್ಲಿ ನಿಯಮಬದ್ಧವಾಗಿ ಹೊಂದಿಕೊಳ್ಳುತ್ತವೆ.
ಕೃತಕ ಮಾಂಸ ಖಂಡಗಳು : A.N.R.I. ಮತ್ತೊಂದು ರೀತಿಯಲ್ಲಿ ಕೃತಕ ಮಾಂಸ ಖಂಡವನ್ನು ಅಭಿವೃದ್ಧಿಪಡಿಸಿದೆ. ಈ ಅಂಗಾಂಶಗಳ ದ್ರವ್ಯಗಳನ್ನು ರಸಾಯನಿಕ ದ್ರವ್ಯಗಳಲ್ಲಿ ಕುದಿಸಿ ತಯಾರಿಸಲಾಗಿದೆ. ದ್ರವ್ಯ ಸಂಸ್ಕಾರದಿಂದಾಗಿ ನಾರುಗಳಲ್ಲಿರುವಂತೆ ಎಲಾಸ್ಟಿಸಿಟಿ, ಮತ್ತು ದ್ರವ್ಯರಾಶಿ ಗುಣಗಳಂತೆ ಹಿಗ್ಗು ಕುಗ್ಗುಗಳನ್ನು ಹೊಂದಿರುವುದು ಈ ಸಿಂಥೆಟಿಕ್ ನಾರಿನ ವೈಶಿಷ್ಟ್ಯವಾಗಿದೆ. ಹೀಗೆ ತಯಾರಿಸಿದ ಮಾಂಸ ಖಂಡಗಳು ವಿದ್ಯುತ್ ಪ್ರವಾಹಕ್ಕೆ ಒಳಪಡುತ್ತವೆ. ಅಲ್ಲದೇ ನರಮಂಡಲ ವಿದ್ಯುತ್ ತರಂಗದ ಭಾಷೆಯನ್ನು ಅರ್ಥಮಾಡಿಕೊಂಡು ಚಲನೆಗೊಳ್ಳಲು ಅನುವುಗೊಳಿಸುತ್ತವೆ. ಈ ಎಲ್ಲ ಸಾಧ್ಯತೆಗಳು ಸಧ್ಯದ ವೈಜ್ಞಾನಿಕ ಅಭಿವೃದ್ಧಿಗಳ ಸಾಧ್ಯತೆಯಲ್ಲಿ ರೂಪಿಸಬಹುದಾದ ಅಗತ್ಯಗಳೇ ಆಗಿದ್ದರೂ, ಕೂಡ ವಾಸ್ತವಕ್ಕೆ ಇಳಿಯುವ ತಂತ್ರ ಜ್ಞಾನ ಸಿದ್ಧಿ ಬಹಳಷ್ಟು ದೂರವೇ ಉಳಿದಿದೆ.
ಕೃತಕ ತೋಳು : ಮನುಷ್ಯನ ದೇಹದ ಸಂಪೂರ್ಣ ತೋಳನ್ನು ಈ ತಂತ್ರಜ್ಞಾನದಲಿ ಅಭಿವೃದ್ಧಿಪಡಿಸಿ ವ್ಯವಸ್ಥಗೊಳಿಸಲಾಗಿದೆ. ಇದನ್ನು ‘ಎಡಿನ್‌ಬರ್ಗ್ ಮಾಡ್ಯುಲಾರ್ ಆರ್ಮಸಿಸ್ಟಂ, ಎಂದೇ ಕರೆಯಲಾಗಿದೆ. ಬ್ಯಾಟರಿ ವಿದ್ಯುತ್ತಿನಿಂದ ಚಾಲನೆಗೊಳ್ಳುವ ಯಂತ್ರವು ದೇಹದ ಹೊರಭಾಗದಲ್ಲಿ ಜೋಡಿಸಿರುವ ಗೇರ್ ಬಾಕ್ಸ್ ತೋಳಿನ ಕಾರ್ಯವನ್ನು ನಿಯಂತ್ರಣ ಮಾಡುವುದಲ್ಲದೇ ಬಲಾಢ್ಯತೆಯನ್ನು ಸಮರ್ಥವಾಗಿ ಬಳಸಬಹುದಾಗಿದೆ. ಈ ತೋಳನ್ನು ಬಳಸಿಕೊಂಡಿರುವ ವ್ಯಕ್ತಿ ಕಾಂಪೈಲ್ ಎರ್ಡ್ ಹದಿನಾರು ವರ್ಷಗಳ ಹಿಂದೆ ಈತನ ಬಲಗೈ ಕ್ಯಾನ್ಸರ್‌ಗೆ ತುತ್ತಾದಾಗ ಊನಗೊಂಡ ತೋಳಿನ ಬದಲು ಎಡಿನ್‌ಬರ್ಗ್ ಈ ಕೃತಕ ತೋಳನ್ನು ಬಳಸಿಕೊಂಡು ವಾಸ್ತವವಾಗಿ ಬದುಕಿದ ಉದಾಹರಣೆ ಇದೆ. ಪ್ರಕೃತಿ ದತ್ತವಾಗಿ ಇರುವಂತೆಯೇ ಬೆರಳು, ಮಣಿಕಟ್ಟು, ಮೊಳಕೈ ಭುಜ, ಎಲ್ಲವೂ ಕಾರ್ಬನ್ ಫೈಬರ್‌ನಿಂದಲೇ ತಯಾರಿಸಲ್ಪಡುತ್ತದೆ. ಸಿಲಿಕಾನ್ ರಬ್ಬರ್‌ನಿಂದಾಗಿ ಹೊರಕವಚ ನೋಟಕ್ಕೆ ಜೀವಂತ ತೋಳೆ ಇರುವಂತೆ ಭಾಸವಾಗುತ್ತದೆ. ಏರ್ಡ್‌ನಂತೆಯೇ ಹಲವು ವ್ಯಕ್ತಿಗಳು ಅಂಗ ನ್ಯೂನ್ಯತೆಗಳನ್ನು ಮರೆತು ಸಹಜ ಅಂಗಗಳಂತೆಯೇ ಉಪಯೋಗಿಸಿ ವಾಸ್ತವೆನಿಸಿಕೊಂಡಿದ್ದಾರೆ.
ಬೆರಳುಗಳು : ಸ್ನಾಯು ರಜ್ಜುಗಳ ಚಲನೆ ಪಡೆದು ಬೆರಳಿನ ಚಾಲನೆಯಿಂದ ಕೆಲಸ ಕೈಗೊಳ್ಳುವ ಸಾಮಾಂಗ ಪಡೆದಿದ್ದಾರೆ. ಈಡೆಕ್ಟ್ ಟರಸ್ ಪ್ರೊಸ್ತಸಿಸ್ (ಕುಶಾಗ್ರಮತಿಯ ಅಂಗ ಚಿಕಿತ್ಸೆ) ವಿಧಾನದಲ್ಲಿ ಸಾಮ್ಯಾಂಗ ತಂತ್ರದಿಂದಾದ ಬೆರಳುಗಳು ಸಂಗೀತ ನುಡಿಸಲು ಕೀ ಬೋರ್ಡ್‌ಗಳನ್ನು ನುಡಿಸಲು ಶಕ್ತವಾಗಿವೆ.
ಸಾಮ್ಯಾಂಗ ಕಣ್ಣು : ನಿಜವಾದ ಕಣ್ಣನ್ನೇ ತಂತ್ರಜ್ಞಾನದಿಂದ ಸೃಷ್ಟಿಸಿ ಮನುಷ್ಯರಿಗೆ ಬೆಳಕಿನ ಭಾಗ್ಯ ಕಲ್ಪಿಸುವುದು. ವಿಸ್ಮಯವೇಸರಿ ಕನಸಿನ ಹಾಗೆ ಕಾಣುವ ಕೃತಕ ಕಣ್ಣಿನ ಅಭಿವೃದ್ಧಿ ಜೀವವಿಜ್ಞಾನದಲ್ಲಿ ಹೊಸ ಮೈಲುಗಲ್ಲೆನಿಸಿದೆ. ಅಕ್ಷಿ ಪಟಲದ ಪುನರ್ಸೃಷ್ಟಿಯೂ ಅಷ್ಟೇ ಕೌತುಕಗಳನ್ನು ಒಳಗೊಂಡಿದೆ. ಬೆಳಕಿನ ಗ್ರಹಣಿಕೆಗಳ ಊನಗೊಂಡ ಸ್ಥಿತಿಯಲ್ಲಿ ಬೈಪಾಸ್ ಚಿಕಿತ್ಸೆಯಿಂದ ಅಕ್ಷಿಪಟಲದ ಜೀವಾಂಗಗಳನ್ನು ಪುನಹ ಚೇತನಗೊಳಿಸುವ ಕ್ರಿಯೆಯಿಂದ ಕಣ್ಣಿನ ನರಗಳ ಚಿತ್ರ ಸಾದೃಷ್ಯ ಸಂದೇಶವನ್ನು ಮಿದುಳಿಗೆ ರವಾನಿಸುವಲ್ಲಿ ಸಫಲವಾಗುವವೆಂಬುದು ಈ ಮೊದಲೇ ಸಂಶೋಧಕರಿಗೆ ತಿಳಿದ ವಿಷಯವಾಗಿತ್ತು. ಈದೀಗ ಹೊಸ ತಂತ್ರಜ್ಞಾನದಿಂದ ಅಕ್ಷಿಪಟಲವನ್ನು ಬದಲಿಸುವುದು, ಯಂತ್ರ ಅಳವಡಿಕೆಯಿಂದ ದೃಷ್ಟಿ ಬರಿಸುವುದು. ಇದರಿಂದ ಕಣ್ಣಿಲ್ಲದವರೂ ಕೂಡ ದೃಷ್ಯಇಂದ್ರಿಯವನ್ನು ಪಡೆಯುತ್ತಾರೆ. ಸಿಲಿಕಾನ್ ಮೈಕ್ರೋಚಿಪ್‌ನಿಂದ ತಯಾರಿಸಿದ ಅಕ್ಷಿಪಟಲದ ಚಿಪ್ ಇಲ್ಲಿ ಬಳಕೆಮಾಡಲಾಗುತ್ತದೆ. ಕೃತಕ ಅಕ್ಷಿಪಟಲದ ಸಾಧನ ವಲ್ಕಂದಿಂದ ದೃಷ್ಟಿಕೇಂದ್ರಗೊಳ್ಳುವ ಅಕ್ಷ ಪಟಲದ ಭಾಗದಲ್ಲಿ ಕೂರಿಸಲಾಗುವುದು. ಬೆಳಕು ಮತ್ತು ಬಿಂಬಗಳು A.R.C.C.ಯ ಮುಂಭಾಗದ ಪ್ರದೇಶದಿಂದ ಹೊರಟ ಕಣ್ಣು ಪಾಪೆಯ ಮೂಲಕ ಸಾಗಿ ಚಿಪ್‌ನ ಹಿಂಭಾಗದಲ್ಲಿರುವ ಬೆಳಕಿನ ನಿಯಂತ್ರಣಗಳಿಗೆ ತಲುಪುತ್ತವೆ.
ಕೃತಕ ಕಿವಿ: 50 ವರ್ಷಗಳ ಹಿಂದಿನಿಂದಲೂ ಕಿವಿಯ ಶ್ರವಣಶಕ್ತಿಯ ಬಗೆಗೆ ಮಹತ್ತರ ಸಂಶೋಧನೆಗಳು ನಡೆದಿವೆ. ವಿದ್ಯುತ್ ಉದ್ದೀಪಕಗಳ ಬಳಕೆಯಿಂದ ಶ್ರವಣ ಗ್ರಂಥಿಗಳನ್ನು ಪುನಶ್ಚೇತನಗೊಳಿಸಿ ಕಿವಿಯ ಅಂಗದಿಂದ ಶಬ್ದಗಳು ಕೇಳುವಂತೆ ಮಾಡಲು ಹೊಸ ಸಾಧನಗಳನ್ನು ತಯಾರಿಸಲಾಗಿದೆ. ಕೊಚ್‌ಲರ್‌ಕಸಿ, ಶ್ರಾವ್ಯ ಸಂಶೋಧನೆಗಳು ಹೀಗೆ ಶ್ರವಣ ಸಾಧನಗಳನ್ನು ಅಭಿವೃದ್ಧಿಗೊಳಿಸಿ ವಿದ್ಯುತ್ ಪ್ರಸರಣ ವಿಧಾನದಿಂದ ಶಬ್ದತರಂಗಗಳನ್ನು ಶ್ರಾವ್ಯಮಾರ್ಗದಲ್ಲಿ ಕಳಿಸಿ ವಿದ್ಯುತ್ ವರ್ಧಕಗಳಿಂದ ಧ್ವನಿಗ್ರಹಣಕ್ಕೆ ನೆರವು ನೀಡುತ್ತದೆ.
*****



















