ಆಡ ಬಂದಿದೇ ಬಾರೇ ಗೀಜಗತೀ
ಓಡ ಬಂದಿದೇ ಬಾರೇ ಗೀಜಗತೀ || ಪಲ್ಲವಿ ||
ಗೀಜಗ್ತಿ ಮನೆಯಲ್ಲಿ ಶ್ರೀಗಂಧ ಪರಿಮಳ
ಆಡ ಬಂದಿದೇ ಬಾರೇ ಗೀಜಗತೀ || ೧ ||
ತೂಕದ ಹಾರವ ಹಾಕೀದ ಬಳಗವ
ನಾರೀಯೋರೆಲ್ಲ ಕೂಡಿಲಿಡ ಬಂದಿದೇ
ಆಡ ಬಂದಿದೇ ಬಾರೇ ಗೀಜಗತೀ || ೨ ||
ಮಣಿಮಯ ಹಾರವ ಪಣಿಯಲ್ಲಿ ದರಿಸಿ
ಆಡ ಬಂದಿದೇ ಬಾರೇ ಗೀಜಗತೀ || ೩ ||
ಕೋಲೂ ಕೋಲೆಂಬದು ಕೈಯಲ್ಲಿ ನಿತ್ತಿತು
ಚೀಣಿ ಕೋಲಿನಾಟಾನಾಡಿ ಬಂದಿದೇ
ಆಡ ಬಂದಿದೇ ಬಾರೇ ಗೀಜಗತೀ || ೪ ||
ಹಾರವ ಹಾಕಿದ ಮಾನವರಿಗೆ
ನಾರಿಯರೆಲ್ಲರು ಬಂದಿ ಓಡಾಡಿ ಬಂದಾಗೆ
ಆಡ ಬಂದಿದೇ ಬಾರೇ ಗೀಜಗತೀ || ೫ ||
ಬಳಗವ ಕೂಡಿಕೊಂಡು ಮಣಿಹಾರ ಹಾಕಿಕೊಂಡು
ಬಳಗವ ಬಾಚಿಕಿ ವರಬೇಡೇನಂದಳೂ
ಆಡ ಬಂದಿದೇ ಬಾರೇ ಗೀಜಗತೀ || ೬ ||
ಗೀಜಗ್ತಿ ಮನಿಯಲ್ಲಿ ಶ್ರೀಗಂಧ ಪರಿಮಳ
ಆಡ ಬಂದಿದೇ ಬಾರೇ ಗೀಜಗತೀ || ೭ ||
ಕಂಕಣ ಹಾರವ ಕೈಯಲ್ಲಿ ದರಸೀ
ಕಾಲಗೆಜ್ಜೆ ನೋಡಕಂಡು ಓಡ ಬಂದಿದೆ
ಆಡ ಬಂದಿದೇ ಬಾರೇ ಗೀಜಗತೀ || ೮ ||
ಸರ್‍ಪವ ಸುತ್ತಿಕೊಂಡು ಹಾರವ ಹಾಕಿಕೊಂಡು
ಹಣಿ ಮೇಲೆ ಮೇಲಚಾವಟ್ಟು ಹಾಕಿಕೊಂಡಿದೇ
ಆಡ ಬಂದಿದೇ ಬಾರೇ ಗೀಜಗತೀ
ಓಡ ಬಂದಿದೇ ಬಾರೇ ಗೀಜಗತೀ || ೯ ||
*****
ಹೇಳಿದವರು: ಧಾಕು ನಾಯ್ಕ, ಅರಗಾ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.