ಓ ನನ್ನ ಪ್ರಿಯ ರಾಧೆ ಕಾಂತ
ನಿನಗಾಗಿ ನಿತ್ಯ ರೋದಿಸುತ್ತಿರುವೆ
ನಿನ್ನಲ್ಲದ ಪ್ರಪಂಚ ಸುಖಗಳೆಲ್ಲ
ಬೇಡವೆಂದು ನಾ ವಿರೋಧಿಸುತ್ತಿರುವೆ

ಕೃಷ್ಣ ನನ್ನಲೇನು ದೋಷ ಕಂಡೆಯೆ
ಮತ್ತೇಕೆ ನಿನ್ನ ರೂಪ ದರ್‍ಶಿಸಲಾರೆ
ನಾನೇನು ಮಾಡಲಾಗದ ಪಾಪಿಯೇ
ಮತ್ತೇಕೆ ನಿನ್ನರೂಪ ತೋರಲಾರೆ

ನನ್ನ ಕಂಗಳ ನೀರು ಧಾರೆಯಾಗಿದೆ
ನನ್ನ ಅಂತಃಕರಣಗಳು ಕರಗಿದೆ
ನನ್ನ ಮನವು ನಿರಾಶವಾದಿಯಾಗಿದೆ
ನನ್ನ ಕಣ್ಣ ನಿನ್ನ ಕಾಣಲು ಸೊರಗಿವೆ

ಕನಸಲ್ಲೂ ಎಲ್ಲ ಸಾಕ್ಷಾತ ನೀ ನಿಲ್ಲವೆ
ಅಂದರೆ ಈ ಜನ್ಮದಲ್ಲಿ ನಾ ನೋಡೆನೇನು
ನಿನ್ನ ಕಾಣದ ಮೇಲೆ ಈ ಜನ್ಮವು
ವ್ಯರ್ಥವಲ್ಲದೆ ಇನ್ನೇನು ಬೇಡನೇನು

ಕೃಷ್ಣ ಇನ್ನು ಎನ್ನ ಕಾಡಿಸದಿರು
ಎಲ್ಲಿದ್ದರೂ ನೀ ನನ್ನಲೆಂದು ಭಾವಿಸುವೆ
ನಿನ್ನ ಕಾಣುವ ಭಾಗ್ಯ ನನ್ನದಾಗಿರಲಿ
ಮಾಣಿಕ್ಯ ವಿಠಲಗೆ ನಮಿಸಿ ಜೀವಿಸುವೆ
*****