Home / ಲೇಖನ / ವ್ಯಕ್ತಿ / ಸುಪ್ರಿಯಾ ದಯಾನಂದ್

ಸುಪ್ರಿಯಾ ದಯಾನಂದ್

ಕನ್ನಡ ನಾಡು ಪ್ರತಿಭಾವಂತರ ಬೀಡು. ಅದರಲ್ಲಿಯೂ ಕೊಡಗು ಎಂದಾಕ್ಷಣ ಕಣ್ಣ ಮುಂದೆ ಕಾಶ್ಮೀರ ಬಂದು ಹೋಗುವುದು. ವೀರ ಸೇನಾನಿಗಳ ನಾಡು ಕೆಚ್ಚೆದೆಯ ಬೀಡು.

ಕೊಡಗು ದೇಶ ಸೇವೆಗೂ ಮುಂದೆ ಪ್ರತಿಭಾವಂತರಿಗೆ ಮುಂದೆ ಎನ್ನುವುದಕ್ಕೆ ಸುಪ್ರಿಯಾ ದಯಾನಂದ್ ಅವರು ನಮಗೆಲ್ಲ ಇಂದು ಹಿರಿಸಾಕ್ಷಿಯಾಗಿರುವರು. ಸುಪ್ರಿಯಾ ದಯಾನಂದ್ ಕೊಡಗಿನ ಸೋಮವಾರ ಪೇಟೆ ತಾಲ್ಲೂಕಿನ ಗೆಜ್ಜೆ ಹಣಕೋಡು ಗ್ರಾಮದ ಹೆಮ್ಮೆಯ ಸುಪುತ್ರಿ.ತಂದೆ- ಸಿದ್ಧಿ ಪ್ರಸಿದ್ಧಿ ಕಾಫಿ ಬೆಳೆಗಾರರಾದ ದಯಾನಂದ್ ತಾಯಿ- ಅಮ್ಮ ಕಾವೇರಮ್ಮನ ವರಪುತ್ರಿ ಕವಿತಾ.

ಸುಪ್ರಿಯಾ ದಯಾನಂದ್ ಈಗ ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿ ಕೃಷಿ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ.

ದಿನಾಂಕ ೧೨-೦೮-೨೦೧೫ ರಿಂದ ೨೨-೦೮-೨೦೧೫ ರವರೆಗೆ ಫ್ರಾನ್ಸ್‌ನ ಪ್ಯಾರೀಸ್‌ನಲ್ಲಿ ಜರುಗಲಿರುವ ಜಾಗತಿಕ ಮಟ್ಟದ ಆಹಾರ ಪದ್ಧತಿ ಕುರಿತು ಬೃಹತ್ ವಿಚಾರ ಸಂಕೀರ್ಣಕ್ಕೆ ಭವ್ಯ ಭಾರತದಿಂದ ಏಕೈಕ ಪ್ರತಿನಿಧಿಯಾಗಿ ಇವರು ಹೋಗಿ ಬರಲಿದ್ದಾರೆ.

ಇಲ್ಲಿ ವಿಶ್ವದ ೫೦ ದೇಶದ ಪ್ರತಿನಿಧಿಗಳು ತಮ್ಮ ತಮ್ಮ ದೇಶಗಳಲ್ಲಿನ ಆಹಾರ- ಬೀಜ-ದವಸ-ಧಾನ್ಯ-ತಳಿಗಳ ಉತ್ಪಾದನೆ, ಆಮದು, ರಫ್ತು ಗುಣಮಟ್ಟ, ಮಾರುಕಟ್ಟೆಯ ಬಗ್ಗೆ ವ್ಯಾಪಕ ಚರ್ಚೆ, ಪ್ರಬಂಧ ವಿಚಾರ ವಿನಿಮಯ ನಡೆಯಲಿದೆ.

ದಿನಾಂಕ ೧೬-೦೯-೨೦೧೫ ರಿಂದ ೨೦೧೬ ರ ಫೆಬ್ರವರಿವರೆಗೆ ಬೆಲ್ಲಿಯಂನ ಗೆಂಟ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವ ಸುವರ್ಣಾವಕಾಶವನ್ನು ಸುಪ್ರಿಯಾ ದಯಾನಂದ್ ಅವರು ಪಡೆದುಕೊಂಡಿರುವರು.

ಹೀಗೆ ಸುಪ್ರಿಯಾ ದಯಾನಂದ್ ತಾನುಟ್ಟಿದ ಊರಿಗೆ, ತಂದೆತಾಯಿಗೆ, ಕಲಿತ ಶಾಲೆ ಕಾಲೇಜಿಗೆ ಕೀರ್ತಿ ತಂದಿರುವರು. ಇವರ ಪ್ರತಿಭೆ, ಉತ್ಪತ್ತಿ, ವಿದ್ವತ್ ಉಳಿದವರಿಗೆ ಸ್ಫೂರ್ತಿದಾಯಕ ಹರ್ಷದಾಯಕವಾಗಿದೆ.

ಕಲಿತರೆ ಇದ್ದರೆ ಇರಬೇಕು ಸುಪ್ರಿಯಾ ದಯಾನಂದ್‌ವರಂತೆ, ಪ್ರತಿಭಾವಂತ ಮಕ್ಕಳು ಅಲ್ಲವೇ?

ನಾವು ನೀವು ಎಲ್ಲರೂ ಸುಪ್ರಿಯಾ ದಯಾನಂದ್ ಅವರಿಗೆ ಆಲ್ ದಿ ಬೆಸ್ಟ್, ಹೇಳೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...