ಗೆಳೆಯ ಬಾಳು ಇದು ಕ್ಷಣಿಕ
ಇದು ಸತ್ಯವಲ್ಲ ಅನಿತ್ಯ
ಮಿಥ್ಯದಲ್ಲಿ ಮೈ ಮರೆತು ನೀನು
ಮರೆತೆಯಾ ಪರಮಾತ್ಮ ನಿತ್ಯ

ಧರ್‍ಮದಲ್ಲಿ ಕಾಣದೆ ಆಶಿವಗೆ ನಿ
ಧರ್‍ಮವೇ ನಿನ್ನದೆಂದು ಹೆಮ್ಮೆ ಪಡೆವೆ
ಧರ್‍ಮಯಾವುದಾದರೇನು! ಮಿತ್ರ
ದೇವರಿಗೆ ದೊರಕಿಸಿ ಕೊಡದ ಧರ್ಮವೆ

ಪ್ರತಿ ನಿತ್ಯ ಬಿಡದೆ ಕರ್‍ಮಮಾಡು
ಆ ಕರ್‍ಮವೆ ಪೂಜೆಯೆಂದು ಅರಿಯು
ಮನವು ಕಶ್ಮಲದಿಂದ ಮುಕ್ತಿವಿರಲಿ
ಹೆಜ್ಜೆ ಹೆಜ್ಜೆಗೆ ನೀನು ಪವಿತ್ರ ತಿಳಿಯು

ಮರಳಿನ ಮೇಲೆ ಮನೆ ಕಟ್ಟುವಂತೆ
ಆಸೆಗಳಿಂದ ಗೋಪುರ ಕಟ್ಟುತ್ತಿರುವೆ
ಆಸೆ ನಿರಾಸೆಗಳಲಿ ಜೀವಕೊನೆಗಾಣಿಸಿ
ಮೌಲ್ಯಬಾಳು ಹಾಳು ಗೆಡುತಿರುವೆ

ಬಿಡು ನೀನು ವಿಷಯ ಸುಖಗಳಿಗೆ
ದಾಸನಾಗದಿರು ನೀ ಐಹಿಕ ಭೋಗಗಳಿಗೆ
ನಾಳಿನ ಮುಕ್ತಿಗೆ ಇಂದೇ ಅಣಿಯಾಗು
ಮಾಣಿಕ್ಯ ವಿಠಲನಿಗೆ ಮುಡಿಪಾಗು
*****