ಸುಭದ್ರೆ – ೧೨

ಸುಭದ್ರೆ – ೧೨

ಶಂಕರರಾಯನ ದೇಹಸ್ಮಿತಿಯು ದಿನೆ ದಿನೆ ಕೆಡುತ್ತಾ ಒಂದು ವಾರದೊಳಗೆ ಅವನನ್ನು ಹಾಸಿಗೆಹಿಡಿದು. ಮಲಗುವಂತೆ ಮಾಡಿ ಬಿಟ್ಟಿತು.ಡಾಕ್ಟರುಗಳೆಲ್ಲರೂ ಬಂದುನೋಡಿ ಶಾರೀರಿಕಜಾಡ್ಯವಾವು ದೂ ಗೋಚರವಾಗದಿದ್ದುದರಿಂದ ಏನುಮಾಡುವುದಕ್ಕೂ ತೋಚದೆ ಅವನು ಅಸ್ಕಳವನ್ನು ಬಿಟ್ಟು ಮಸಸ್ಸಿಗೆ ಹರ್ಷವುಂಟಾಗುವಹಾಗೆ ಅಲ್ಲಲ್ಲಿ ಸಂಚಾರಮಾಡುವುದೊಳ್ಳೆಯದೆಂದು ಅಭಿಪ್ರಾಯಪಟ್ಟರು. ಅದರೆ ಅವನ ಆಗಿನಸ್ಥಿತಿಯಲ್ಲಿ ಪುನಹೆಯನ್ನು ಬಿಟ್ಟು ಹೊರಡುವುದೇ ಕಷ್ಟವಾಗಿತ್ತು. ಆದುದರಿಂದ ಶರೀರದ ಬಲವು ಕುಗ್ಗದಂತೆ ಔಷಧ ಗಳನ್ನು ಕೊಟ್ಟು ಸ್ವಲ್ಪ ಗುಣಮುಖವಾದೊಡನೆಯೆ ಬೊಂಬಾಯಿಗೆ ಕಳುಹಿಸುವುದಾಗಿ ನಿಶ್ಚಯಿಸಿಕೊಂಡರು. ಆದರೆ ಶಂಕರರಾಯನಿಗೆ ಸ್ವಲ್ಪ ಮಾತ್ರವೂ ಗುಣವಾಗಲಿಲ್ಲ. ಅವನಿಗೆ ಬುದ್ಧಿಯೇ ವಿಕಲ್ಪವಾಗಿ ಹೋಗಿದ್ದ ಹಾಗಿತ್ತು. ಒಂದೊಂದು ಸಲ “ಹಾ ! ಮಾಧವಾ ! ಬಂದೆಯಾ ಅಪ್ಪ ಬಾ ಕೂತುಕೊ“ ಎನ್ನುವನು. ಒಂದೊಂದು ಸಲ ” ಇವಳೇ ನಮ್ಮ ಸುಭದ್ರೆ, ನಮ್ಮ ಮಾಧವನ ಹೆಂಡತಿ ಸುಭದ್ರೆ, ಸುಭದ್ರೆ, ಸುಭದ್ರೆ“ ಎಂದು ತನ್ನಷ್ಟಕ್ಕೆ ತಾನೆ ಗುಣಗುಟ್ಟಿಕೊಳ್ಳು ವನು. ಗಂಗಾಬಾಯಿಯೊಬ್ಬಳನ್ನು ಮಾತ್ರ ಗುರ್ತಿಸುತ್ತಿದ್ದನು. ಅವಳು ಬಂದಾಗ “ಯಾಕೆ ಸುಭದ್ರೆಯನ್ನು ಕರತರಲಿಲ್ಲ“ ಎಂದು ಕೇಳುವನು. ಗಂಗಾಬಾಯಿಗೆ ವಾಸ್ತವವಾಗಿ ಸುಭದ್ರೆಯು ಬಂದರೆ ಸ್ವಲ್ಪ ಗುಣಮುಖವಾದೀತೆಂಬ ಭರವಸೆಯು ಹುಟ್ಟಿತು. ತಾನು ಅವನನ್ನು ಬಿಟ್ಟುಹೋಗಿ ಸುಭದ್ರೆಯನ್ನು ಕರೆತರಲು ಧೈರ್ಯ ಸಾಲದೆ, ಒಬ್ಬ ಆಳಿನ ಕಾಗದವನ್ನು ಕೊಟ್ಟು ರಾಂಪುರಕ್ಕೆ ಕಳುಹಿಸಿದಳು, ಆ ಆಳು ಅಲ್ಲಿಗೆ ಹೋಗಿ ಬಂದು ವಿಶ್ವನಾಥನ ಮನೆಗೆ ಬೀಗ ಹಾಕಿದ್ದಿತೆಂದೂ ನೆರೆಹೊರೆಯಲ್ಲಿ ವಿಚಾರಿಸಲಾಗಿ ಅವರೆಲ್ಲಿಯೊ ದೇಶಾಂತರ ಹೋದಂತೆ ತಿಳಿಯಿತೆಂದೂ, ಇಂತಹ ಕಡೆ ಹೋದ ರೆಂಬುದು ಯಾರಿಗೂ ಗೊತ್ತಿಲ್ಲವೆಂದೂ. ಹೇಳಿದನು . ಗಂಗಾ ಬಾಯಿಗೆ ಮನಸ್ಸಿನಲ್ಲಿ ಸ್ವಲ್ಪ ಪೇಚಾಟಕ್ಕೆ ಬಂದಿತು. ಶಂಕರ ರಾಯನನ್ನು ಮಾತ್ರ ಎಡೆಬಿಡದೆ ಉಪಚರಿಸುತ್ತಿ ದ್ದಳು.

ಆತ್ಮಾ ರಾಮನ ಮೊಕದ್ದಮೆಯು ಸೆಷನ್‌ ಕೋರ್ಟಿನಲ್ಲಿ ತೀರ್ಮಾನವಾಯಿತು. ಶಂಕರರಾಯನ ಔದಾಸೀನ್ಯದಿಂದಲೋ, ರಾಮರಾಯನ ದ್ರವ್ಯ ಬಲದಿಂದಲೊ, ಹೊಸ ಅಡ್ವೊಕೇಟನ ಶಕ್ತಿಯಿಂದಲೊ, ಅಥವಾ ಇವೆಲ್ಲವೂ ಸೇರಿದುದರಂದಲೂ, ಆತ್ಮಾ ರಾಮ ನಿಗೆ ಬಿಡುಗಡೆಯಾಯಿತು. ಅವನಿಗೆ, ರಾಮುರಾಯನಲ್ಲಿ ಉಂಟಾದ ಬಕ್ತಿ ವಿಶ್ವಾಸಗಳನ್ನು ಹೇಳುವ ಹಾಗಿರಲಿಲ್ಲ. ಅವನು ರಾಮರಾಯನನ್ನು ಒಹಳವಾಗಿ ವಂದಿಸಿ, ಯಾವಜ್ಜೀವವೂ ಅವನ ದಾಸಾನುದಾಸನಾಗಿರುವುದಾಗಿ . ಹೇಳಿದನು. . ರಾಮರಾಯನು, “ಇನ್ನೂ ನಮ್ಮ್ ಕೆಲಸವು ಮುಗಿಯಲಿಲ್ಲ. ನಿನ್ನಲ್ಲಿದ್ದ ಹಣವನ್ನೂ ನಗಗಳನ್ನೂ ಕಸುಕೊಂಡ ಆ ವಿಶ್ವನಾಥನನ್ನು ಸುಮ್ಮನೆಬಿಡುವುದೆ? ಅವನ ಮಗಳು ನಿನ್ನ ಮನೆಯ ತೊತ್ತಾದುದನ್ನು ನೋಡಿದ ಹೊರತು ನನಗೆ ನಿದ್ರೆಬರುವುದಿಲ್ಲ. ನೀನು ಸ್ನಲ್ಪವೂ ಶ್ರಮಪಡಬೇಕಾದುದಿಲ್ಲ. ನಾನು ಹೇಳಿದ ಹಾಗೆ ಕೇಳು? ” ಎಂದನು. ಅತ್ಮಾ ರಾಮನು, “ಮಹಾ ಪ್ರಸಾದ. ತಮ್ಮಂತಹ ಪ್ರಭುವು ನನಗೆ ದೊರಕಿದುದು ನನ್ನ ಪೂರ್ವಜನ್ಮದ ಸುಕೃತಶೇಷಪದಿಂದಲ್ಲದೆ ಬೇರೆಯಿಲ್ಲ ,” ಎಂದು ಬಹಳ ವಾಗಿ, ರಾಮರಾಯನನ್ನು ಕೊಂಡಾಡಿದನು.

ರಾಮರಾಯನು ಶ್ರೀಧರರಾಯನ ಹೆಸರಿನಲ್ಲಿ ( ಇದೇ ಆತ್ಮಾ ರಾಮನ ಈಗಿನ ಹೆಸರಷ್ಟೆ) ವಿಶ್ವನಾಥನಿಗೆ ಲಾಯರು ನೋಟೀ ಸ” ನ್ನು ಕೊಡಿಸಿದನು. ವಿಶ್ವನಾಥನು ಕೂಡಲೆ ಮಗಳನ್ನು ಕರೆದು ಕೊಂಡು ಬಂದು ಮದುವೆಮಾಡಿಕೊಡಬೇಕೆಂದೂ ತಪ್ಪಿದರೆ ದಾವಾ ಮಾಡುವುದಾಗಿಯೂ ಅದರಲ್ಲಿ ಬರೆದಿತ್ತು. ವಿಶ್ತನಾಧನು ಪಂಡರ ಪುರದಿಂದ ಆ ದಿನವೆ ರಾಂಪುರಕಕ್ಕೆ ಬಂದಿದ್ದನು. ಅವನಿಗೆ ಆ “ನೋಟೀಸ`“`ನ್ನು ನೋಡಿ ಅಶ್ಲರ್ಯವಾಯತು. ತನ್ನ ತಪ್ಪಿತದಿಂದ ಮದುವೆ. ನಿಂತುದಲ್ಲವೆಂದೂ, ಶ್ರೀಧರರಾಯನನ್ನು ” ಕ್ರಿಮಿನಲ್ ಕೋರ್ಟಿ”ನಲ್ಲಿ ವಿಚಾರಣೆಗೆ ಗುರಿಮಾಡಿದಮೇಲೆ ಮಗಳಿಗೆ ಬೇರೆಕಡೆ ವಿವಾಹವಾಯಿತೆಂದೂ, ಆದುದರಿಂದ ಯಾವ ಪರಿಹಾರ ವನ್ನು. ಕೊಡು ವುದಕ್ಕಾ ಗಲಿ ಹುಡುಗಿಯನ್ನೊಪ್ಪಿಸುವುದಕ್ಕಾಗಲಿ ಕಾರಣವಿಲ್ಲವೆಂದು ವಿಶ್ವನಾಥನು ಉತ್ತರಕೊಟ್ಟನು, ಅನಂತರ ಶ್ರೀಧರರಾಯನು ವಿಶ್ನನಾಥನಮೇಲೆ ಪುನಹ “ಡಿಸ್ಟ್ರಿಕ್ಟ್‌ಜಡ್ಜಿ ” ಯವರ ಕೋರ್ಟನಲ್ಲಿ ವ್ಯವಹಾರ ನಡಿಸಲು ಅರ್ಜಿಯನ್ನು ಕೊಟ್ಟನು ವಿಶ್ವನಾಥನೂ ಪುನಹೆಗೆ ಬಂದು ವಕೀಲನ್ನಿ ಟ್ಬು ವಾದಿಸಿದನು. ಸಫಲವಾಗಲಿಲ್ಲ. ಅವನ ಕಡೆಯ ಸಾಕ್ಷಿಗಳಾದ ಪುರೋಹಿತ ಮತ್ತು ಇನ್ನೂ ಕೆಲವರು ಮದುವೆಯಲ್ಲಿ ಚೆನಾ ಗಿ ತಿಂದು ತೇಗಿದ್ದರೂ ರಾಮರಾಯನ ದ್ರವ್ಯಬಲದಿಂದ ಅಪಸಾಕ್ಷ್ಯವನ್ನು ನುಡಿದು ತಾವು ಯಾವ ಸಂಗತಿಯನ್ನೂ ಕಾಣೆವೆಂದು ಹೇಳಿ ಬಿಟ್ಟರು. ಇದರಿಂದ ಸುಭದ್ರೆಗೆ ವಿವಾಹನೇ ಆಗಿಲ್ಲವೆಂಬದಾಗಿ ಸ್ಥಾಪಿತವಾಯಿತು. ವಿಶ್ವ ನಾಥನು ಹುಡು ಗಿಯನ್ನು ಶ್ರೀ ಧರರಾಯ ನವಶಕ್ಕೊಪ್ಪಿಸಬೇಕೆಂದೂ, ಅಥವಾ ಅದಕ್ಳ ಬದಲಾಗಿ ಶ್ರೀಧರರಾಯನೊಪ್ಪುವುದಾದರೆ ೨೦೦೦ ರೂಪಾಯಿಗಳನ್ನು ಪರಿಹಾರ ರೂಪವಾಗಿ ಕೊಡುವುದಲ್ಲದೆ ಅವನು ಕೊಟ್ಟ ನಗಗಳನ್ನು ಹಿಂದಿಕ್ಕೆ ಕೊಟ್ಟು ಬಿಡಬೇಕೆಂದೂ ? “ಜಡ್ಜಿ” ಮಹಾಶಯರು ತೀರ್ಮಾನ ಮಾಡಿದ್ದರು. ಕ್ರೀಧರರಾಯನಿಗೆ ಹಣ, ನಗ, ಬಂದರೆ ಸಾಕೆಂದು ಮನಸ್ಸಿನಲ್ಲಿದ್ದರೂ ರಾಮರಾಯನ ಬಲುಮೆ ಯಿಂದ, ತನಗೆ ಹಣವೂ ನಗವೂ ಬೇಕಲ್ಲವೆಂದೂ, ಹುಡುಗಿಯನ್ನು ಸ್ವಾಧೀನ ಪಡಿಸಿಕೊಳ್ಳಲು “ಡಿಕ್ರಿ” ಯಾ ಗಬೇಕೆಂದೂ ಕೇಳಿಕೊಂ ಡನು. ಅದ ರಂ ತೆ ” ಡಿಕ್ರಿ“ ಯಾಯಿತು.

ಇಲ್ಲಿ ನಾವು ತಿಳಿಸಬೇಕಾದದ ವಿಶೇಷ . ವಿಷಯವೇನೆಂದರೆ, “ಸಿವಿಲ್ ಕೋರ್ಟ್”ಗಳಲ್ಲಿ ವ್ಯಾಜ್ಯಗಳು ಆನೇಕ ವರ್ಷ ಗಳು-ಕೆಲವು ಸಾರಿ ಕಕಿ.ಗಾರರ ಜೀವಮಾನವಿರುವ ಪರ್ಯಂತ.ನಡೆದರೂ ತೀರ್ಪಾ ಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ವ್ಯವಹಾರಗಳು ಮಕ್ಳಳ್ಳು ಮು ಮ್ಮಕ್ಕಳು, ಮರಿಮಕ್ಕಳ ಕಾಲದ ವರೆಗೂ ನಡೆದು ಅನೇಕ ನ್ಯಾಯಾ ಧಿಪತಿಗಳ ಕೈ ಮುಟ್ಟಿ, ಕೊನೆಗೆ ತೀರ್ಪಾಗುವಾಗ್ಗೆ ಕಕ್ಷಿಗಾರರು ಇಂಥವರೀ ಎಂಬುದು ಕೂಡ ಮರೆತು ಹೋಗಿರುವುದೂ ಉಂಟು,) ಹೀಗಿದ್ದಾಗ್ಗೂ ವಿಶ್ವನಾಥನ ಮೇಲಿನ ಮೊಕದ್ದಮೆಯು ಮಾತ್ರ ಎರ ಡೇ ತಿಂಗಳಕಾಲದಲ್ಲಿ ತೀರ್ಮಾನವಾಯಿತು. ಇದಕ್ಕೆ ಕಾರಣ ಬೇರೆ ಯಿಲ್ಲ. . ರಾಮರಾಯನ ಸಾಹಸವೇ ಕಾರಣ,

ಪುನಹೆಯ ಳೋರ್ಟನತೀರ್ಮಾನವು ರಾಂಫುರದಲ್ಲಿ ತಿಳಿಯು ವುದಕ್ವೆ ಮುಂಚೆಯೆ ರಾಮರಾಯನೂ, ಶ್ರೀಧರರಾಯನೂ “ಅಮೀ ನ”ನನ್ನು ಕರೆದುಕೊಂಡು ಅಲ್ಲಿಗೆ ಬಂದು ಬಿಟ್ಟರು. ವಿಶ್ವನಾಥನೂ ಆದಿನವೇ ಬಂದು ಸೇರಿದನು. ಕೂಡಲೆ ಹುಡುಗಿಯನ್ನು ತನ್ನ ಸ್ವಾಧೀ ನಕ್ಕೆ ಕೊಡಬೇಕೆಂದು ಕ್ರೀಧರರಾಯನ್ನು ಕೇಳಿದನು. ಅ ದಿನ ವಿಶ್ವ ನಾಥನ ಮನೆಯಲ್ಲಿ ಉಂಟಾದ ಕೋಲಾಹಲವು ವರ್ಣನಾತೀತವಾ ಗಿದ್ದಿತು.ಒಂದುಕಡೆ ವಿಶ್ವನಾಥನೂ ಮತ್ತೊಂದುಕಡೆ ರಮಾಬಾಯಿ ಯೂ ಅಳುತ್ತು ನೆಲದಮೇಲೆಬಿದ್ದು ಹೊರಳಾಡುತ್ತಿದ್ದರು. ಸುಭದ್ರೆ, ಮಾತ್ರ ಮಂಕು ಹಿಡಿದವಳಂತೆ ಕುಳಿತುಕೊಂಡಿದ್ದಳು. ಆ ಊರಿನ ಜನರೆಲ್ಲರೂ ಬಂದು ವಿಶ್ವನಾಥನ ಮನೆಯೆದುರಿಗೆ ಸೇರಿ ಬಿಟ್ಟರು. ಅನೇಕ ಜನರು ಆ ತಂದೆ ತಾಯಿಗಳ ಗೋಳನ್ನು ನೋಡಲಾರದೆ ಕಣ್ಣಿನಲ್ಲಿ ನೀರುಸುರಿಸುತ್ತಿದ್ದರು. ಮತ್ತೆ ಕೇವರು ವಿಶ್ನನಾಥನಿ ಗೂ ರಮಾಬಾಯಿಗೊ ಸಮಾಧಾನ. ಹೇಳುತ್ತಿದ್ದರು. ವಿಶ್ವನಾಥನು ಮಗಳ ಕಡೆಗೆ ಕೈನೀಡಿ . “ಕರದುಕೊಂಡು ಹೋಗಿ“ ಎಂಬಂತೆ ಸನ್ನೆ ಮಾಡಿ ಗಟ್ಟಿಯಾಗಿ ಅಳಲು ಪ್ರಾರಂಭಿಸಿದನು: ಶ್ರೀಧರರಾ ಯನು ಸುಧದ್ರೆಯನ್ನು ಬಾರೆಂದು ಕರೆದು, ಕೈ ಹಿಡಿದನೋ ಇಲ್ಲ ವೊ, ಅವಳು ಕಿಟ್ಟನೆ ಕಿರಿಚಿಕೊಂಡು ಸ್ಮೃತಿ ತಪ್ಪಿ ನೆಲದ ಮೇಲೆ ಬಿದ್ಧು ಬಿಟ್ಬ್ಗಳು . ಶ್ರೀಧರರಾಯನಂತಹನಿಗೂ ಕೂಡ ಕನಿಕರ ಹುಟ್ಟಿ ಹಿಂದೆ ಸರಿದನು. ಉಳಿದವರೆಲ್ಲರಗೂ ಕಣ್ಣೀರು ಕೋಡಿಗಳು ಹರಿ ಯುತ್ತಿದ್ದುವು ಆದರೆ ಆ ಪಾಷಾಣ ಹೃದಯನಾದ ರಾನುರಾಯನ ಮನಸ್ಸು ಮಾತ್ರ ಕರಗಲಿಲ್ಲ. ಮೂರ್ಛೆ ಹೋಗಿರುವ ಹುಡುಗಿ ಯನ್ನೆ ಎತ್ಕಿ ಕೊಂಡು ಹೋಗಿ ಗಾಡಿಯಲ್ಲಿ ಮಲಗಿಸುವಂತೆ ಶ್ರೀಧ ರರಾಯನಿಗೆ ಸೂಚಿಸಿದನು. . ಅವನು ಅದರಂತೆಯೇ ಮಾಡಿದನು.

ಹೀಗೆ ವಿಶ್ವನಾಥನ ಯಾವ ಕುಟೀರವು ಸುಭದ್ರೆಯ ಮೃದು ವಾದ ಮಾತಿನಿಂದಲೂ, ಮನೋಹ್ಲಾದಕರವಾದ ನಗುವಿನಿಂದಲೂ, ಇಂಪಾದ ಗಾನದಿಂ ದಲೂ, ಶೋಭಿಸುತಲಿದ್ದಿತೋ ಅದೇ ಕುಟೀ ರವರು ಈಗ ಶೋಕಮಯವಾಗಿ ಸ್ಮಶಾನ ಸದ್ಭಶವಾಯಿತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವಿತ್ರಿ
Next post ಗೆಳೆಯನಿಗೆ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…