ನಿನ್ನ ಹಳಿದರೆ ಲೋಕ ಅದು ನಿನ್ನ ತಪ್ಪಲ್ಲ

ನಿನ್ನ ಹಳಿದರೆ ಲೋಕ ಅದು ನಿನ್ನ ತಪ್ಪಲ್ಲ,
ಉತ್ತಮರು ನಿಂದೆಮಾತಿಗೆ ಸದಾ ಸಿಕ್ಕವರೆ;
ಸೌಂದರ್‍ಯದಾಭರಣ ಸಂಶಯಕೆ ಹೊರತಲ್ಲ
ನಿರ್‍ಮಲಾಕಾಶದಲೂ ಕಾಗೆ ಹಾರುವುದೇ.
ನೀನು ಯೋಗ್ಯನೆ, ನಿನ್ನ ಕುರಿತ ಆರೋಪಗಳು
ನಿನ್ನ ಮೇಲ್ಮೆಯನೆ ಹೇಳುವುವು, ಕೇಡೂ ಬಿಡದೆ
ವಿಷಕೀಟದಂತೆ ಮೊಗ್ಗನ್ನೆ ಸಾರುವುದು,
ನೀ ಮಾತ್ರ ನಿರ್‍ದಿಷ್ಟ ತಾರುಣ್ಯವನೆ ಮೆರೆವೆ.
ನಿನ್ನ ಯೌವನ ಹೊಂಚುಗಳನು ದಾಟಿರುವುದು
ಆಕ್ರಮಣಕೇ ಸಿಗದೆ, ಅಥವ ಎದುರಿಸಿ ಉಳಿದು;
ಈ ಕೀರ್‍ತಿ ತಡೆಯದು ಬೆಳೆವ ಅಸಹನೆಯನ್ನು,
ಹಾಗೆಂದೆ ನಿನ್ನ ಕೀರ್‍ತಿಯು ಕೊಡ ಮಸುಳುವುದು.

ಕೆಟ್ಟುದರ ಶಂಕೆ ಕವಿಯದೊ ನಿನ್ನ ನಡತೆಗೆ
ಆಗ ನೀನೇ ಪ್ರಭು ಹೃದಯಸಾಮ್ರಾಜ್ಯಕ್ಕೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 70
That thou art blam’d shall not be thy defect

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉತ್ತರಣ – ೧೪
Next post ಹಾರೈಕೆ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…