ಒಬ್ಬ ದೇವರನ್ನು ಕುರಿತು ತಪನ್ನು ಮಾಡಿದ. ದೇವರು ಪ್ರತ್ಯಕ್ಷನಾದ. `ಏನು ವರ ಬೇಕು ಕೇಳಿಕೋ’ ದೇವರು ನುಡಿದ. “ಪ್ರಭೂ ನನಗೆ ಎರಡು ಹೃದಯಗಳನ್ನು ಕೊಡು. ಇದೇ ನನ್ನ ಬೇಡಿಕೆ.” “ಅದೇನು ಎರಡು ಹೃದಯಗಳು?” “ದೇವರ ಪ್ರಶ್ನೆ”. “ಒಂದು ನನ್ನ ಹೆಂಡತಿಗೆ.” ಅಂದ ಭಕ್ತ. “ಓಹೋ ಇವನು ನನ್ನ ಭಕ್ತ. ಬಹುಶಃ ಎರಡನೇ ಹೃದಯವನ್ನು ನನಗೆ ಅರ್ಪಿಸಲು ಎಂದು ಕಾಣುತ್ತೆ ಎಂದುಕೊಂಡ ಆ ದೇವರು ಆಯ್ತು, “ಎರಡನೇ ಹೃದಯ ನನಗೆ ತಾನೆ?” ಕೇಳಿದ. ಅದು ನನ್ನ ಆಫೀಸಿನಲ್ಲಿ ಲೇಡಿ ಟೈಪಿಸ್ಟ್ ಇದ್ದಾಳಲ್ಲಾ ಅವಳು ನನ್ನನ್ನು ತುಂಬಾ ಪ್ರೀತಿಸುತ್ತಾಳೆ – ಅವಳಿಗೆ ಎರಡನೇ ಹೃದಯ” ಅಂದ ಭಕ್ತ! ದೇವರು ತಕ್ಷಣವೇ ಮಾಯ!
***

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)