ಸಾವಿರ ಭಾಷೆ ಸಾವಿರ ವೇಷ

ಸಾವಿರ ಭಾಷೆ ಸಾವಿರ ವೇಷ
ನಮ್ಮದು ಭಾರತ ದೇಶ
ಸೌಹಾರ್ದದ ಹಾಲ್ಗಡಲಿನ ಒಳಗೆ
ಯಾತಕೊ ಕೋಮು ದ್ವೇಷ //ಪ//

ಸ್ವತಂತ್ರ ಭಾರತಕರವತ್ತು
ಅಭಿವೃದ್ಧಿಯ ರಥ ಚುರುಕಲ್ಲ
ಉಳ್ಳವರಿಗೆ ಆಕಾಶ ಸಲೀಸು
ಸರ್ವೋದಯಕೆಡೆ ಇಲ್ಲಿಲ್ಲ
ಇದು ಯಾಕೆ ಯಾರಿಗೆ ಶೋಭೆ
ಕಾಣದೆ ಕಣ್ಣಿಗೆ ಆದೆವೆ ಗೂಬೆ

ವಿಶಾಲ ಭಾರತ ವಿಶಾಲವೆ
ಆದರು ಸಮಾಜ ಕಿಷ್ಕಿಂದೆ
ನಿಸರ್ಗ ಸಂಪತ್ತಿಗೆ ಬರವೆ?
ಆದರು ಉಣ್ಣಲು ದಾರಿದ್ರ್ಯವೆ
ಇಂತಹ ವೈರುಧ್ಯ ಇದೆ ಯಾಕೆ?
ಒಳಗಿರುವ ತಿಳುವಳಿಕೆ ಸಾಕೆ?

ಹೇಳುವೆವು ಭಾರತವು ಮಹಾನ್
ಸೊರಗಿದ್ದರೂ ದೇಹ
ಇದರ ನಡುವೆಯೆ ಹೊಸ ವಿದ್ವೇಷ
ಕಳಚುತಿಲ್ಲ ನಾವ್ ಇದರ ವೇಷ
ಭದ್ರ ಭಾರತವ ಕಟ್ಟುವಲಿ
ಹೊಸ ಇತಿಹಾಸವ ಬರೆಯುವಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಚಿಕ್ಕ ತಂದೆ
Next post ನನ್ನ ಅಂಬೋಣ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…