ಯಾವ ಹೆಣ್ಣು ಬರುವಳೊ ಇಲ್ಲವೊ

ಯಾವ ಹೆಣ್ಣು ಬರುವಳೊ ಇಲ್ಲವೊ
ಮದ್ಯದ ಮಂದಿರಕೆ
ನೀನಂತೂ ನನಗಾಗಿಯೆ ಬಂದೆ
ಕರುಣೆಯ ಕಡಲಾಕೆ-ನೀ
ಕರುಣೆಯ ಕಡಲಾಕೆ //ಪ//

ಕೈಯಲ್ಲಿಹುದು ಬಟ್ಟಲು
ಸುತ್ತಲು ಎಲ್ಲೂ ಕತ್ತಲು
ನನಗೆ ಮಾತ್ರ ನೀ ಗೋಚರ
ಉಳಿದೆಲ್ಲರಿಗೂ ಅಗೋಚರ
ದೇವರು ಎಲ್ಲೆಡೆ ಇರಬಹುದೇನೊ
ನನಗೋ ಖಚಿತ ಈ ದೇವತೆಯಿನ್ನು!

ಹೋಗುವ ಬರುವ ತೀರ್ಥಕ್ಷೇತ್ರಗಳು
ಪ್ರೇಮಕ್ಷೇತ್ರಗಳೆ ಆಗಿವೆ
ಮೊಳಗುವ ಘಂಟಾ ನಾದಗಳಲ್ಲೂ
ಪ್ರೇಮ ಕವಿತೆಗಳೆ ಮೊಳಗಿವೆ
ಇದು ನಿನ್ನಿಂದಲೆ ಸಾಕ್ಷಾತ್ಕಾರ
ಇದಕೆ ಹೊರತಾದುದು ಸುಳ್ಳು ಅಕ್ಷರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೊಣಗಳು
Next post ಬುದ್ಧಿವಂತ

ಸಣ್ಣ ಕತೆ

 • ಬಿರುಕು

  ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

 • ವಲಯ

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

 • ಬಲಿ

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…