Home / ಕವನ / ಕವಿತೆ / ಮಿಂಜೈಮೇಳ

ಮಿಂಜೈಮೇಳ

ನವ ಶತಮಾನದಲಿ ಕಾಲಿಡುತಿಹೆವು
ಸ್ವಾತಂತ್ರ್ಯದ ಸುವರ್ಣ ಹಬ್ಬದ..
ಸಡಗರದ… ಸಂತಸಗಳಲಿ

ಗತಿಸಿ ಹೋದ ನಲವತ್ತೇಳರ
ಘಟನೆಗಳ ನೆನೆಯುತ
ಬಲಿದಾನದ ವೀರಸೇನಾನಿಗಳ
ತ್ಯಾಗದ ರೂಪ ಕಾಣುತ
ಸಾಗಿಹದು ಸ್ವಾತಂತ್ರ್ಯಯ ಸುವರ್ಣೋತ್ಸವ

ಸೌಂದರ್ಯರಾಣಿ… ಮುಕುಟ ಮಣಿ
ಶ್ವೇತಧಾರಿಣಿ ಜಮ್ಮು ಕಾಶ್ಮೀರದ
ಗಿರಿ ಕಾನನಗಳ ಮಡಿಲು
ನದಿ ನಲೆಗಳ ನಡುವಲಿ
ಮಿಂಜೈಮೇಳ… ನಡೆದಿತ್ತು

ಹಸಿರ ಧರೆಯ ಸೊಬಗಿನಲಿ
ಚಂಬಾ, ಟಿಸ್ಸಾ, ದೋಡದ, ಜನಪದರು
ಸಂಪಾಗಿ ಸಂತಸದಿ ನಿದ್ರಾವಶದಲ್ಲಿದ್ದರು
ಮಧ್ಯರಾತ್ರಿಯ ಕಾರ್ಗತ್ತಲಲ್ಲಿ
ಏ.ಕೆ-ನಲವತ್ತೇಳು ಗುಡುಗಿದವು
ಅಟ್ಟಹಾಸದಿ ಜಿಹಾದಿಗಳು ಮೆರೆದವು

ಮಲಗಿದಲ್ಲೆ ನಲುಗಿದ ಜೀವಗಳು
ಸ್ವಾತಂತ್ರ್ಯಯೋತ್ಸವ ಸಡಗರದಲಿ…
ವಿಧಿಯಾಟದ ರೂಪ ಕುಣಿದಿತ್ತು
ನಲವತ್ತೇಳರ ನೆನಪಿನಂಗಳದ
ನೆನಪನ್ನೆ ಅಳಿಸಿದವು – ಏಕ.ಎ.೪೭
ವಿಕಾರದಿ-ವಿಕ್ಷಿಪ್ತದಿ ನಗುತ್ತಿದ್ದವು
೫೦ನೇ ಸ್ವಾತಂತ್ರ್ಯಯದ ಸಂಭ್ರಮವ ಅಣಕಿಸುತ್ತಿದ್ದವು

***

 

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...