ನಾವು ಯಾರೆಂಬುದು ನಿಗೂಢ
ಆದರೆ ನಮ್ಮ ಸಂಬಂಧಗಳ ಘಾಡ
ಮತ್ತೆ ನರಕದತ್ತ ಸರಿಯುವುದು ಬೇಡ
ನಿತ್ಯ ಗುನಿಗುನಿಸಬೇಕು ದೇವರ ಹಾಡ

ನಾಕ ನರಕಗಳೂ ಇಲ್ಲಿಯೆ ಇವೆ
ಅವುಗಳ ಅನುಭವದಿಂದ ಸವೆ
ಪುಣ್ಯ ಕಾರ್ಯಗಳಿಗೆ ಚರಿತ್ಯ ದಿವ್ಯ
ಪಾಪಕಾರ್ಯಗಳಿಗೆ ರೋಗದಿ ನವೆ

ನರ್ಕದಿಂದ ಬಂದವರು ನಾವಂತೆ
ಸ್ವರ್ಗದಿಂದ ಇಳಿದವರು ನಾವಂತೆ
ಮನುಷ್ಯ ಜನ್ಮವೇ ಎಲ್ಲರಿಗೂ ಭೇಟಿ
ಮನುಜನ್ಮವೆ ಇಹ ಪರಕೆ ಸಾಟಿ

ಅರ್ಥವಾದಾಗ ನಾವು ಎಚ್ಚರಾಗೋಣ
ಮರೆಯೋಣ ಸ್ವಾರ್ಥ ರಾಮಾಯಣ
ನಾಳೆಯೆಂಬುದೊಂದು ದೊಡ್ಡ ಶಾಪ
ಕಾಣು ಮಾಣಿಕ್ಯ ವಿಠಲನ ರೂಪ
*****