ಅಪನಂಬಿಕೆ

ಕೇಳಲಾರೆ ಹರಿಯ ನಾ ತಾಳಲಾರೆ
ನಿನ್ನ ಮರೆಸುವ ಅಪನಂಬಿಕೆ ಯೋಚ್ನೆ
ನೀನು ನನ್ನವನೆಂದು ನಾ ತಿಳಿದ ಮೇಲೆ
ಕಾಡದಿರಲಿ ಯಾವ ಮೌಲ್ಯದ ಇಂಥ ಯೋಚನೆ

ತಾವು ಹರಿಯನ್ನು ಕಳೆದುಕೊಂಡ ಅವರು
ಇನ್ನೋರ್ವರಿಗೂ ದಾರಿ ಬದಲಾಯಿಸುವವರು
ತಮ್ಮ ವಿಚಾರಗಳೇ ತಮಗೆ ಸಾಟಿ ಇಲ್ಲದಾಗ
ಇನ್ನೋರ್ವರಿಗೆ ಆಧ್ಯಾತ್ಮದಿಂ ಪುಸಲಾಯಿಸುವರು

ಹರಿಯೇ ನಿನಗೇ ನೆನಪಿರಹುದಲ್ಲ ಅದು
ಅಂದು ನಾಸ್ತಿಕ ಗ್ರಂಥ ವಾಚನೆ ಮಾಡಿದೆ
ಅನೇಕ ತಿಂಗಳಿಂದ ನಿನ್ನ ನಂಬಿ ನಂಬಿ
ಅಂದೇಕೋ ಅಪನಂಬಿಕೆಯಲಿ ನಾ ಕೂಡಿದೆ

ಆ ರಜನಿಯ ವೇಳೆಯಲಿ ರಾಗದಿ ಅತ್ತೆ
ಏನೋ ಕಳೆದುಕೊಂಡಂತೆ ಚಡಪಡಿಸಿದೆ
ಹರಿಯೇ ನಿನ್ನ ಎದೆಯಲಿ ಶಿರವಿಟ್ಟು ಬೇಡುವೆ
ಮಾಣಿಕ್ಯ ವಿಠಲನಿಗೆ ಏಕೆ ಕಾಡಿ ಕಾಡಿಸಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನುಜನಿಗಿಂತ ಮೃಗ
ಪಾಳೇಗಾರ Next post ಪಾಳಯಗಾರರು – ಭೂಮಿಯ ಹಿಡುವಳಿ ವಿಧಾನ

ಸಣ್ಣ ಕತೆ

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

 • ಅವನ ಹೆಸರಲ್ಲಿ

  ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಆವಲಹಳ್ಳಿಯಲ್ಲಿ ಸಭೆ

  ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…