ಕಾದಿದ್ದೀಯಾ ನೀನು ಯಾರಾದರೂ ಬಂದಾರೆಂದು,
ಕಲ್ಲೊಣಗಣ ಕಿಚ್ಚು ಉರಿಸುವವರು,
ಅಸಾಮಾನ್ಯರು, ಶಿಲೆಗೆ ಜೀವ ತರುವ
ಅಪರೂಪದವರು, ನಿನ್ನೊಳಗಿನ ಆಳ ಮುಳುಗಿ
ತೋರುವವರು ಬಂದಾರೆಂದು.
ಸಂಜೆಯ ಇಳಿ ಬಿಸಿಲು ದಪ್ಪಹೊತ್ತಗೆಗಳ
ಚಿನ್ನದಕ್ಷರಗಳಿಗೆ ಹೊಳಪು ತಂದಿದೆ.
ನೀನಲೆದ ನಾಡುಗಳ ನೆನಪು ಬಂದಿದೆ.
ಹಿಂದೆಂದೋ ಕಲೆತ ಹೆಣ್ಣುಗಳ
ಚಿತ್ರ, ಅವರುಡುಗೆ, ಮನಸಲ್ಲಿ ಮೂಡಿದೆ.
ತಟ್ಟನೆ ಹೊಳೆಯುವುದು : ಇಲ್ಲೇ!
ಸಾವರಿಸಿಕೊಂಡು ನೋಡಿದರೆ ಕಾಣುವುದು
ತಳಮಳದ, ದರ್ಶನದ, ಪ್ರಾರ್ಥನೆಯ
ಮತ್ತೆಮರಳದ ವರ್ಷಗಳೆಲ್ಲ ಇಲ್ಲೇ ಬಂದು ನಿಂತಿರುವುದು.
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke