ಅವರು ಒಬ್ಬರನ್ನು ಒಬ್ಬರು ಪ್ರೇಮಿಸಿದರು. ಅವರ ಪ್ರೇಮ ಸಮಾಗಮವನ್ನು ಅತ್ಮೀರೆಲ್ಲರು ಧಿಕ್ಕರಿಸಿದರು. ಅವರು ಗುಡಿ ಕಂಭ ಗಳಂತೆ ದೂರ ನಿಂತರು. ಅವರ ಹೃದಯದಲ್ಲಿ ಎದ್ದ ಪ್ರೀತಿ ಗೋಪುರ ಮಾತ್ರ ಅಕಾಶವನ್ನು ಚುಂಬಿಸಿತು. ಹೃದಯ ಗರ್ಭ ಗುಡಿಯಲ್ಲಿ ಪ್ರೀತಿ ದೈವವಾಗಿ ನಂದಾ ದೀಪವಾಗಿ ಉರಿಯಿತು. ಅಲ್ಲಿ ಯಾರ ಧಿಕ್ಕಾರವೂ ಇರಲಿಲ್ಲ.
*****