ಹೊಸ ವರುಷ
ಹೊಸ ಹರುಷ
ಬರಲಿ ಬರಲಿ
ಮನುಜ ಪ್ರತಿ ನಿಮಿಷ||

ಫಲಿಸಲಿ ಕನಸು
ದಿಟ್ಟ ಹೆಜ್ಜೆ ಇಡುತಲಿ
ಮಾನ್ಯತೆ ಇರಲಿ ಮಾನವೀಯತೆ ಇರಲಿ
ನಿನ್ನ ದನಿಯಲಿ||

ಕಷ್ಟಗಳ ಕಳೆದು
ಸುಖ ಸಂಪನ್ನವು ಬರಲಿ
ಅಕ್ಕರೆ ಅಭಿಮಾನಗಳ
ಸೌಖ್ಯವಾಗಲಿ ನಿನ್ನ ದನಿಯಲಿ||

ಬೆಳಕಾಗಲಿ ಬೆಳಕು
ಚೆಲ್ಲಲಿ ಬಾಳಹಾದಿಯಲಿ
ಕೈಹಿಡಿದು ನಡೆಸುವಾತನು
ಇಹನು ಮರೆಯದಿರು ಎಂದಿಗೂ||
*****

Latest posts by ಹಂಸಾ ಆರ್‍ (see all)