ಐಸುರ ಮೋರುಮ ಎರಡು ಮಾತಾಡಿ

ಐಸುರ ಮೋರುಮ ಎರಡು ಮಾತಾಡಿ             || ಪ ||

ಈಶಾಡಿ ಕರ್ಬಲದ್ಹೊಳಿಯೊಳು ಉಕ್ಕುತ
ನಾಶವಾದಿತು ಧಾಮಶಪುರ ನೋಡಿ                ||೧ ||

ಕಾಳಗದೊಳು ವಿಧಿ ಕಟಗಿ ಮಾರುತಲಿ
ಬಾಳ ವಿಲಾಸದಿ ಆಶಪತ್ತಿ ಬೇಡುತ
ತಾಳಲಾರದೆ ಹೋಗಿ ತವಕದಿ ಕೂಡಿ               || ೨ ||

ಶಿಶುನಾಳಧೀಶ ಸದ್ಗುರುನಾಥ ಜೋಡಿ
ದಶದಿನದಿ ದೆಸೆದೆಸೆಗೆ ಅಲಾವಿನಾಡುತ
ಕಸರಿದ್ದ ಕಾಸರಕಮಲ ಹಾರ್ಯಾಡಿ                || ೩ ||
*****

ಕೀಲಿಕರಣ : ಎಮ್.ಎನ್.ಎಸ್.ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಭೇದಾ
Next post ಮನಸ್ಸಿದ್ದರೆ ಮಾರ್ಗ

ಸಣ್ಣ ಕತೆ