ಐ.ಟಿ., ಬಿ.ಟಿ. ಕಂಪನಿಗಳು ನಗರದ ಜನಜಂಗುಳಿ ಝಗಝಗಿಸುವ ದೀಪಾಲಂಕಾರ ಕಣ್ಣು ಕುಕ್ಕುವ ಬೆಳಕು ತಲೆಸುತ್ತುವ ಎತ್ತರದ ಬಂಗಲೆಗಳು. ಗಿಜಿಗುಡುವ ಜನಜಂಗುಳಿಯ ಮಧ್ಯೆ ಏಕಾಂಗಿಯಾಗಿದೆ ಒಂಟಿ ಬದುಕು ಮನುಜ ಮನುಜರ ಮದ್ಯ ತುಂಬಲಾಗದ ಆಳ ಕಂದಕ ಎಷ್ಟೊಂದು ಗಹನ?...

ನೋಡಲು ಥೇಟ್ ಭೈಸಿಕಲ್ಲಿನಂತೆ ಕಾಣುವ ಈ ಬೈಕಿಗೆ ದೊಡ್ಡ ಚಕ್ರಗಳಿರುತ್ತವೆ. ಹಿಂದಿನ ಚಕ್ರದ ಮೇಲಿನ ಸ್ಯ್ಟಾಂಡ್ ಮೇಲೆ ಸೋಲಾರ್ ಸಿಸ್ಟಮ್ ಅಳವಡಿಸಿ ಅದರಿಂದ ಎಲೆಕ್ಟ್ರೋ ವಿದ್ಯುತ್ ಉತ್ಪತ್ತಿಮಾಡಿ ಹಿಂದಿನ ಚಕ್ರಕ್ಕೆ ಸನ್ನೆ ಮಾಡುವಂತೆ ಮಾಡಲಾಗಿದೆ. ...

ಇನ್ನು ನೀನೆನ್ನವನು ನಾನಿನ್ನು ನಿನ್ನವನು ಇಂದಿನಿಂದೆ, ಇಂದಿನಿಂದ ಮುಂದೆ. ನಿನ್ನ ನೆನವುದೆ ಚನ್ನ, ನಿನ್ನ ಕನವುದೆ ನನ್ನ ದಿನದ ಬಾಳು, ನನ್ನ ಮನದ ಕೂಳು. ಮಳೆಯೆ ಬೇಸಗೆಯಾಸೆ ಯಂತೆ ನನ್ನ ಪಿಪಾಸೆ ಯೆದೆಯ ನೀನೆ ತಣಿಪ ಸೊದೆಯ ಸೋನೆ. ಮುಚ್ಚುಕಿಟಿಕಿಯ...

ಹುಟ್ಟುವುದಿದ್ದರೆ ಮರುಜನುಮದಲಿ ಕನ್ನಡ ನಾಡಲ್ಲೆ ಈ ಚಿನ್ನದ ಬೀಡಲ್ಲೆ ಹುಟ್ಟದಿದ್ದರೂ ಮಾನವನಾಗಿ ಕಾವೇರಿಯಲಿರುವೆ – ಅಲ್ಲಿ ಹನಿಹನಿಯಾಗಿರುವೆ – ಕನ್ನಡ ಹೊಂಬೆಳೆ ಸಿರಿ ತರುವೆ ಹಾಡದಿದ್ದರೂ ಗಾಯಕನಾಗಿ ಕೋಗಿಲೆಯಾಗಿ ಇರುವೆ –...

ನಿಧಾನವಾಗಿ ಮೆಟ್ಟಲು ಹತ್ತಿಕೊಂಡು ಮೂರನೆ ಮಾಳಿಗೆಯ ತನ್ನ ಮನೆಯೆದುರು ಬಂದು ನಿಂತವನಿಗೆ ಎದೆಯ ಉಬ್ಬಸದಿಂದ ಮೈನಡುಗಿದಂತೆನಿಸಿ, ತೊಡೆಯ ಸಂದುಗಳು ಕಂಪಿಸಿದವು. ಢಗೆಯ ರಭಸ ಹೆಚ್ಚಾಗಿ ಮೆಟ್ಟಲಿನ ದಂಡೆಗೆ ಕೈಕೊಟ್ಟು ನಿಂತುಕೊಂಡ. ಕೆಮ್ಮು ಮತ್ತೆ ಮತ್...

ಕನ್ನಡದಾ ಕಸ್ತೂರಿ ನೀನಾಗಿ ಬೆಳೆದು ಕನ್ನಡದಾ ಹೊನಲ ಬಾಳಿನಂದದಿ ನಲಿದು ಒಂದಾಗಿ ಹಾಡೋಣ ಕನ್ನಡವೇ ಉಸಿರು ಮನ ಅಭಿಮಾನದಿ || ಮೂಡಣದಾ ರವಿಕಿರಣವು ಧರೆಗೆ ಮುಖ ಚೆಲ್ಲಿ ನಿಂದು ಬೆಳದಿಂಗಳ ಹೊತ್ತಿಕೆಯ ಮಡಿಲಲ್ಲಿ ಒಂದಾಗಿ ಬೆಸೆದು ಹಾಡೋಣ ಕನ್ನಡವೇ ಉಸಿ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಪ್ರದರ್‍ಶನಕ್ಕಿಟ್ಟ ಮೂಕಮೃಗದಂತೆ ಸುತ್ತ ತಿರುಗುವೆನು ನಾನು, ನಾನು ಯಾರು ಎನ್ನುವುದೆ ತಿಳಿಯದು, ಎಲ್ಲಿ ಹೊರಟಿರುವೆ ಏನು? ನನಗೆ ಗೊತ್ತಿರುವುದೊಂದೇ ಮಾತು ಪ್ರೇಮಿಸಿರುವೆ ನಾನು, ನಾಚಿಕೆ – ಗೇಡಿ ಪೂರ ನಾನು....

ಆರೋಗ್ಯ ಇಲಾಖೆ ನಿರ್ದೇಶಕರು ರೋಗಗಳ ಬಗ್ಗೆ ಅದಕ್ಕೆ ನಿವಾರಣೆಯನ್ನು ತಿಳಿಸುವ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲು ಕೆಲವರಿಗೆ ಅನುಮತಿ ಕೊಟ್ಟಿತ್ತು. ಅದರಲ್ಲೂ ಭ್ರಷ್ಟಾಚಾರ ಕಣೆ. ಹಾಳಾಗಿ ಹೋಗಲಿ ಅದರ ಬಗ್ಗೆ ನಾನ್ಯಾಕೆ ಯೋಚಿಸಲಿ… ನಾನಂತೂ ಹ...

ಈಕೆ ನನ್ನ ಯಶೋದೆ, ಇವಳೆನ್ನ ಸಲಹುವಳೊ ನಾನಿವಳ ಸಲಹುವೆನೋ ನನಗರಿದು. ಕೈಯೆತ್ತಿ ರೆಕ್ಕೆಯೊಲು ಬಡಿವಾಗ, ಕಣ್ಣನರಳಿಸಹತ್ತಿ ಕುಲುಕುಲನೆ ನಗುವಾಗ,- ಇವಳೆ ಅನುಭವಿಸುವಳೊ ಹಿರಿದಾದ ಸಂತಸವ, ನಾನೊ? ಇದು ನನಗರಿದು. ಕೇಕಿಯನು ಹಾಕಿವಳು ಕುಣಿದು ಕಳೆಯೇರು...

ರೂಪ ವಸಂತ ರೂಪ ಸುಂದರ ಪ್ರೇಮ ಪೂರ್‍ಣನೆ ಶಿವಶಿವಾ ನೀನೆ ಶೀತಲ ನೀನೆ ಕೋಮಲ ನೀನೆ ನಿರ್‍ಮಲ ವರಪ್ರಭಾ ಸುಖದ ವರ್‍ಷಾ ಪ್ರೀತಿ ಹರ್‍ಷಾ ಶಾಂತ ಸುಂದರ ವಸುಂಧರಾ ನಗುವ ಚಂದಿರ ಚಲುವ ಮಂದಿರ ಭುವನ ಪ್ರೇಮದ ಹಂದರಾ ನಿನ್ನ ನೆನಪು ಕಂಪು ತಂಪು ವಿಮಲ ಕೋಮಲ ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...