ಹರಕು ಅಂಗಿಯ ಮುರುಕು ಮನೆಯ ಕೊಟ್ಟೆನೆಂದರೆ ದಾನವೆ ಹಳೆಯ ರೋಗದ ಕೊಳೆಯ ದೇಹವ ಬಿಟ್ಟೆನೆಂದರೆ ತ್ಯಾಗವೆ ಅಲ್ಪ ಕಾಲದ ಆಸೆಗಾಗಿ ಕ್ಷಣಿಕ ತ್ಯಾಗವು ಯೋಗ್ಯವೆ ದೇಹದಾಸೆಗೆ ಎಳೆತ ಸೆಳೆತಕೆ ಜಾರಿಬಿದ್ದರೆ ಜ್ಞಾನವೆ ಮಹಾದಾನಿ ಮಹಾಯೋಗಿ...
ಬರೆಯಬೇಕು ನಾ ಏನನ್ನಾದರೂ ವರ್ಷಗಳಿಂದಲೂ ಮನ ತುಡಿಯುತ್ತಿದ್ದರೂ ಬರೆಯಬಲ್ಲೆನಾದರೂ ನಾನು ಉಳಿದಿರುವುದಾದರೂ ಏನು? ಶತಶತಮಾನಗಳಿಂದ ಬರೆದು ಬರೆದು ನವರಸಗಳೆಲ್ಲವ ಅರೆದು ಕುಡಿದು ಮಾಡಿ ಸರಸತಿಯ ಭಂಡಾರ ಲೂಟಿ ನನಗೇನು ಸಿಕ್ಕದು ಬರೀ ಪಾಟಿ. ಪಂಪ...
ಅಂಬಿನ ಹಿಳಿಕಿನಲ್ಲಿ ಕಟ್ಟಿದ ವಿಹಂಗನ ಗರಿಯಂತೆ ತಾಗುವ ಮೊನೆಗಾಧಾರವಾಗಿ ದೂರ ಎಯಿದುವುದಕ್ಕೆ ಸಾಗಿಸುವ ಗುಣ ತಾನಾಗಿ ಕ್ರೀ ಅರಿವಿನ ಭೇದದ ನೆರಿಗೆಯ ಕಾಬನ್ನಕ್ಕ ಅರಿವು ಕುರುಹು ಎರಡೂ ಬೇಕೆಂದನಂಬಿಗ ಚೌಡಯ್ಯ [ಅಂಬಿನ-ಬಾಣದ, ಹಿಳಿಕಿನಲ್ಲಿ-ಹಿಂಬದಿಯಲ್ಲಿ, ವಿಹಂಗನ...