ಬೆಳೆ
ಮನವ ಮಣ್ಣ ಮಾಡಿ ಭಕ್ತಿಯ ಬೀಜ ಬಿತ್ತಿ ನಂಬುಗೆಯ ಮಳೆಗರೆದರೆ ಮರವಾಗಿ ಫಲಿಸಿತ್ತು ನೋಡಾ ಮುಕ್ತಿ *****
ಜ್ಯೂಲಿಯೋ ಅಕುರ್‍ಜಿ ಊರಿನಲ್ಲಿ ಒಳ್ಳೆಯ ಯುವಕನೇ ಆಗಿದ್ದ ಬಿಡಿ. ಮೂವತ್ತರ ಹರೆಯದ ಅನುಕೂಲಸ್ಥ; ಅಲ್ಲದೆ ನೀಟಾಗಿ ಬಟ್ಟೆಧರಿಸುವ ಬುದ್ಧಿವಂತ ಕೂಡ. ಅವನ ಗೆಳೆಯರ ಪ್ರಕಾರ ಅವನಲ್ಲಿ ಇನ್ನೂ ಒಂದು ಇತ್ತು: ಅದೆಂದರೆ ತನ್ನ ಬಾಡಿಗೆದಾರರೊಂದಿಗೆ ಆತ ಯಾವಾಗಲೂ ಪ್ರೇಮದಲ್ಲಿ ಸಿಲುಕುವುದು. ಅವನ ಮನೆಗೆ ಎರಡು ಮಹಡಿಗಳು: ಕೆಳಮಹಡಿಗೆ ತಾರಸಿಯಿದ್ದು, ಅದು ತೋಟಕ್ಕಿಂತ ಎತ್ತರದಲ್ಲಿತ್ತು. ಈ ತೋಟವನ್ನು […]