ಅಗತ್ಯ
ಹೆಮ್ಮರದಿಂದ ಕೆತ್ತಿದ ಬುಗುರಿ ತಿರುಗಲುಬೇಕು ಸಣ್ಣ ಹತ್ತಿಯ ಗಿಡದ ಹೊಸೆದ ಹುರಿ *****
ಪೆರಾಜ್ಹೆಟ್ಟಿ ಅವನ ಪಾಡಿಗೆ ಮಜವಾಗಿದ್ದ – ಬಹಳ ಜತನದಿಂದ ಬೆಳೆಸಿಕೊಂಡಿರುವ ತನ್ನ ವಕ್ರವಾದ, ಉದ್ದ ಉಗುರುಗಳನ್ನೇ ಗಮನಿಸುತ್ತ, ಆತ ಅತ್ಯಂತ ಗಂಭೀರವಾಗಿ ಮಾತಾಡುವಾಗ ನಿಮಗೆ ಆಶ್ಚರ್ಯವಾಗುವುದಂತೂ ಗ್ಯಾರಂಟಿ. ನಂತರ ವಿನಾಕಾರಣ, ಇದ್ದಕ್ಕಿದ್ದಂತೆ ಬಾತುಕೋಳಿಯ ಹಾಗೆ ಕರ್ಕಶವಾಗಿ ಕೂಗುತ್ತ, ನಗಾಡುತ್ತ, ಅತ್ತಿತ್ತ, ಸುತ್ತುತ್ತಿದ್ದ. ಪೆರಾಜ್ಹೆಟ್ಟಿ, ಹೀಗೆ, ನಕ್ಕರೀತಿಯಲ್ಲೇ, ಅವನಿಗೆ ತಲೆ ಕೆಟ್ಟಿದೆಯೆಂದು ಊರಿನವರಿಗೆ ಆಗಲೇ ಖಾತರಿಯಾಗಿತ್ತು. ಕಣ್ಣಾಲಿಗಳು […]