
ಕೀಟ
ಚಿಕ್ಕಚಿಕ್ಕ ಮನೆಗಳು ಒತ್ತೊತ್ತಾಗಿದ್ದ ಆ ಹಳ್ಳಿ ಚಪ್ಪಟೆಯಾಗಿರುವ ನೆಲದ ಮೇಲಿದ್ದರೂ, ಬಲು ಎತ್ತರದಲ್ಲಿತ್ತು. ಮೊಳೆ ಹೊಡೆದ ಡೊಡ್ಡ ಸೈಜಿನ ಒರಟೊರಟು ಶೂಗಳು ಜಾರುತ್ತಿದ್ದುದರಿಂದ ಸಮಯ ಉಳಿಸಲೆಂದು ಅವರಿಬ್ಬರು ಕೈಗಳ ಸಹಾಯದಿಂದ ಏದುಸಿರುಬಿಡುತ್ತ, ಇಳಿಜಾರನ್ನು ಹತ್ತುತ್ತಿದ್ದರು. ಆಚೆ ಕಡೆ, ಚಿಕ್ಕ ಕಾರಂಜಿಯೆದುರು ಒಂದಿಷ್ಟು ಹೆಂಗಸರು ಗುಂಪು ಕಟ್ಟಿಕೊಂಡು ಜೋರಾಗಿ ಹರಟುತ್ತ ನಿಂತಿದ್ದವರು ಈಗ ಒಮ್ಮೆಲೆ ತಿರುಗಿ ಮೌನವಾಗಿಬಿಟ್ಟರು. […]