Month: May 2019

#ಕವಿತೆ

ನಾನು ಮತ್ತು ಅವನು

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

೧ ಅವನ ಕಣ್ಣಲ್ಲಿ… ಬೆಟ್ಟಗಳು ಬೆಳೆಯುತ್ತಿದ್ದವು ತಾರೆಯರು ಹೊಳೆಯುತ್ತಿದ್ದವು. ಬಣ್ಣಗಳು ಅರಳುತ್ತಿದ್ದವು. ಮೋಡಗಳು ಹೊರಳುತ್ತಿದ್ದವು. ಮಳೆ ಸುರಿಯುತ್ತಿತ್ತು. ಹೊಳೆ ಹರಿಯುತ್ತಿತ್ತು. ಹಗಲು ಉರಿಯುತ್ತಿತ್ತು. ಇರುಳು ತಂಪೆರೆಯುತ್ತಿತ್ತು. ನನಗೊ… ಅಚ್ಚರಿ! ೨ ನಾನು ಬೆಟ್ಟವನ್ನೇರಿ ಮೋಡಗಳೊಂದಿಗೆ ಮಾತಾಡುತ್ತಿದ್ದೆ. ಬಣ್ಣಗಳನ್ನು ಬಳಿದುಕೊಂಡು ಮಳೆಯಲ್ಲಿ ಮೀಯುತ್ತಿದ್ದೆ. ಹೊಳೆಯಲ್ಲಿ ಮುಳುಗಿ ತಾರೆಯರನ್ನು ಆರಿಸುತ್ತಿದ್ದೆ. ನನಗೆ ಖುಷಿ. ೩ ಈಗ ನಾನೆ ಮೋಡವಾಗಿದ್ದೇನೆ. […]

#ಹನಿಗವನ

ಎಲ್ಲಿದೆ ಕೆರೆ

0
ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)

ಅರೆ ಅರೆ ಎಲ್ಲಿದೆ ಕೆರೆ ಇಲ್ಲಿ ಎಲ್ಲಿ ನೋಡಿದರಲ್ಲಿ ಬರೀ ಕೆಂಪು ತಾವರೆ *****

#ಕವಿತೆ

ಜೋ ಜೋಽಽ

ಜೋಜೋ ಜೋಜೋ ಜೋಜೀಜಿ ಜೋಜೋ ತಾಯಿಯಿಲ್ಲದ ಕಂದ ಜೋಜೋ ಲಾಲೀ ಲಾಲೀ ಲಾಲೀ ಲಾಲೀ ತಂದೆಯಿಲ್ಲದ ಕಂದ ಜೋಜೋ ಕಮಲದ ಹೂ ನೀನು ಹವಳದ ಕುಡಿ ನೀನು ತುಂತುಂ ತುಂಬಿದಾ ಸುವ್ವಾಲಾಲಿ ಚಂದ್ರಲೋಕದ ಬೆಣ್ಣಿ ಸೂರ್ಯಲೋಕದ ತುಪ್ಪ ಚುಂಚಂ ಚುಂಚುಂ ಚಂದ್ರಲಾಲಿ ನನಸೀರಿ ನೀ ಹಿಡಿದಿ ನೀನಪ್ಪ ನನಗೆಂದಿ ಅವ್ವೀ ಅವ್ವೀ ಸುವ್ವಾಲಾಲೀ ನನ್ನೆದಿಯ ನೀ […]

#ಇತರೆ

ಪುಸ್ತಕ ಪ್ರೀತಿ

ಪ್ರಿಯ ಸಖಿ, ಪುಸ್ತಕದಿ ದೊರೆತರಿವು ಮಸ್ತಕದಿ ತಳೆದಮಣಿ. ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಪುಸ್ತಕ ಜ್ಞಾನವು ಬಹಿರಂಗ ವ್ಯಾಪ್ತಿಯಲ್ಲಿ ಬರುವುದು. ಚಿಂತನೆ ಜನ್ಯವಾದ ಜ್ಞಾನವು ಅಂತರಂಗ ವ್ಯಾಪ್ತಿಯಾದುದು. ನಿಜವೇ ಆದರೆ ಚಿಂತನಶೀಲತೆ ಬೆಳೆಯುವುದು ಪುಸ್ತಕಗಳ ಸಂಪರ್ಕದಿಂದ. ಆದ್ದರಿಂದ ಪುಸ್ತಕಗಳ ಪ್ರಯೋಜನವು ಅಂತರಂಗ ಚೈತನ್ಯದ ಸಾಧನೆಗೆ ಮೊದಲ ಮೆಟ್ಟಿಲು ಎನ್ನಬಹುದು. […]

#ಕವಿತೆ

ಹೊಳೆಸಾಲಿನ ಮರ

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಹೊಳೆಸಾಲಿನ ಮರಕ್ಕೆ ನಿಂತ ನೆಲವೇ ವರ ; ಇಳಿಸುತ್ತದೆ ಬೇರನ್ನು ಅಳಕ್ಕೆ, ಅಗಲಕ್ಕೆ ನೀರಿನ ಯೋಚನೆ ಎಲ್ಲಿದೆ ಅದಕ್ಕೆ ? ಹೊಳೆಸಾಲಿನ ಮರದ ತಲೆತುಂಬ ಫಳಫಳ ಎಲೆ, ಕೆಳಗೆ ನದಿಯುದ್ದ ಏರಿಳಿಯುವ ಜುಳು ಜುಳು ಅಲೆ. ನೀರಿನ ವಿಶಾಲ ಕನ್ನಡಿ ಹೊಳೆಯುತ್ತ ಬಿದ್ದಿದೆ ಕೆಳಗಡೆ, ಸೂರ್ಯ ಚಿಕ್ಕೆ ಚಂದ್ರಮರ ಬಿಂಬ ಒರೆಸಿಟ್ಟಂತೆ ಅದರ ತುಂಬ; ನಡುವೆ […]

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೧೮

ಸಹಜ ತಿಳಿವಳಿಕೆಯಂತೆ ಹಸಿವೆಂದರೆ ದೈನ್ಯತೆ. ಆದರೆ ರೊಟ್ಟಿ ಸಕಾಲಕ್ಕೆ ಒದಗುವವರೆಗೂ ಹಸಿವೆಗೆ ಒಣ ಗರ್ವ. ರೊಟ್ಟಿ ವ್ಯಕ್ತಿತ್ವಹೀನ.

#ಹನಿಗವನ

ಮಿಲನ

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಬೆಳಗಿನ ಕಿರಣ ರಾತ್ರಿಯ ಕನಸು ನಿಂತಿವೆ ದಡದೆರಡು ಕಡೆ ಭೋರ್ಗರಿದಿದೆ ಸಾಗರ ಮಧ್ಯೆ ಕನಸು ಕೈ ಚಾಚಿದೆ ಕಿರಣ ಕೈಹಿಡಿಯಲಿಕ್ಕೆ

#ಕವಿತೆ

ಬೆಳಗು ಬೈಗು

ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಇಲ್ಲಿ ಹಸುರ ಹಸುರಿಗೆಚಿಗುರು ಹೂವ ಕಂಪುಬಳ್ಳಿ ಬಳ್ಳಿ ತೇಲಿ ಸೂಸಿಗುಂಗಿ ಗಾನ ಇಂಪು. ನೆರಳಕಾವ ಮುಗಿಲಮೋಡಇಣುಕಿ ಸೂರ್ಯ ಬೆಳಕ ಚೆಲ್ಲಿಇಬ್ಬನಿ ಹನಿ ಹನಿ ಮುತ್ತು ಹರಡಿದಂಡೆಯಾಗಿ ಸೇವಂತಿಗೆ ಮಲ್ಲಿಗೆ. ಮೆದು ಹಸಿರು ಎಳೆಹೆಸರುಚಾಪೆ ಹಾಸಿ ತಿಳಿಗಾಳಿಸೂಸಿಬಿದ್ದ ಎಲೆಗಳ ಮನಸ್ಸಿನಲಿಮುದ್ದು ಮುಖ ಪ್ರತಿ ಬೈಗಿನಲಿ. ಗುಂಗಿಗಾನದಲಿ ತುಂಗೆ ಹರಿದುಜಗದ ಸ್ನಾನ ಒಳಹೊರಗೆಮನಸ್ಸು ಮನಸ್ಸಿನ ದಾಟುಹಾಯಿ ಬಂಧ ಸೇತುವೆ […]

#ಹನಿಗವನ

ಕನಸು

ಲತಾ ಗುತ್ತಿ
Latest posts by ಲತಾ ಗುತ್ತಿ (see all)

ನಿನ್ನ ಬಗೆಗೆ ಎಷ್ಟೊ ಕನಸುಗಳೂ ಕಟ್ಟಿಕೊಳ್ಳುತ್ತಿದ್ದೇನೆ ಎಂದೆ- ಬೆಚ್ಚಿಬಿದ್ದೆ, ತಿರುಕನ ಕನಸಿನಂತಾದೀತು ತಿರುಕಿಯಾಗಬೇಡ ಎಂದಾಗ.