Month: March 2019

#ಸಣ್ಣ ಕಥೆ

ಮತ್ತೆ ಬಂದ ವಸಂತ

Latest posts by ಅಬ್ದುಲ್ ಹಮೀದ್ ಪಕ್ಕಲಡ್ಕ (see all)

ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ – ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ – ಗೆಳತಿಯರಾಗಿರೋಣ’. ಅವಳ ಮಾತು ಅವನಿಗೆ ಅರ್ಥವಾಯಿತೋ, ಅಲ್ಲ ಕೇಳುವ ವ್ಯವಧಾನ ಇರಲಿಲ್ಲವೋ ಆವನಂತೂ ಆ ಬಗ್ಗೆ ಏನೂ ಅನ್ನಲಿಲ್ಲ. ಬಹುಶಃ ಅವಳ ಮಾತನ್ನು ಅವನು ಸರಿಯಾಗಿ ಕೇಳಿಸಿಕೊಳ್ಳಿಲಿಲ್ಲವೋ? ಅವಳಂತೂ […]

#ಹನಿಗವನ

ಚಿತ್ತಾರ

0
ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)

ಚಿತ್ತಾರ ಬಿಡಿಸಲು ಚುಕ್ಕಿಗಳು ಬೇಕಿಲ್ಲ ರೇಖೆಗಳು ಬೇಕಿಲ್ಲ ಬಿಡಿಸುವ ಕೈ ಶುದ್ಧ ಮನಸ್ಸಿರಬೇಕು *****

#ಕವಿತೆ

ಗರಗಸ

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಬೆಂಗಳೂರಿನ ಸೆರೆಮನೆಯಲ್ಲಿರುವ ಖೈದಿಗೆ ಬೇಕಾದ್ದು ಸಿಗರೇಟಲ್ಲ, ಪುಸ್ತಕವಲ್ಲ, ಪತ್ರಿಕೆಯಲ್ಲ ಮಾತಾಡಲು ಜನರಲ್ಲ, ಪ್ರೇಯಸಿಯಿಂದ ಪತ್ರವಲ್ಲ, ಬೇಕಾದ್ದು ಗರಗಸ! ಆಹ! ಅದೆಷ್ಟು ಮುದ್ದಾದ ಅಕ್ಷರಗಳಿಂದ ಮಾಡಿದ್ದು (ಬೋರ್ಹೆಸ್‌ ನ ಒಂದು ಪದ್ಯ ಓದಿ) *****

#ಕವಿತೆ

ಯಕ್ಷ ಪ್ರಶ್ನೆಗಳು

0
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು:ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.
ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)

ಜಟಿಲ ಬದುಕಿನ ಯಕ್ಷ ಪ್ರಶ್ನೆಗಳು ಹೊಡೆಮರಳಿ ಕಾಡುವವು ಯಾಕೋ? ಸಮೃದ್ಧ ಸಂಸಾರ ಎಂದುಕೊಂಡರೂ ಅತೃಪ್ತಿ ಅನಾಸಕ್ತಿ ಮುಲುಗುವುದು ಯಾಕೋ? ಬಿಗಿವ ಬಿಗಿಸುವ ಬಗಿವ ಬಗ್ಗಿಸುವ ಸಂಬಂಧ ಅನುಬಂಧಗಳು ಬಾಯಾರಿ ಕಾಂಚಣಕ್ಕೆ ಕುಣಿಯುವವು ಯಾಕೋ? ಜನನ ಮರಣದ ಗುಟ್ಟು ಬೀಜ ವೃಕ್ಷದ ನ್ಯಾಯ ಇಂಚಿಂಚು ಹಿರಿದು ಅರೆದು ಹಿಂಜ ಹೊರಟರೂ ಹಾಗೆ ಗಹನ ಅಗಮ್ಯವಾಗುವುದು ಯಾಕೋ? ಇನ್ನಿಲ್ಲವೆಂದು […]

#ಕವಿತೆ

ನೀವೇಕೆ ಬೇಕು?

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ತಾರೆಯರೇ ಮಿಣುಮಿಣುಕಿ ಅಣಕಿಸಿದ್ದು ಸಾಕು. ಚಂದ್ರಮನೇ, ನಿನ್ನ ನಗುವಿಗೆ ಮೂರು ಕಾಸು. ಕೋಲ್ಮಿಂಚುಗಳೇ ಎಷ್ಟು ಬಗೆಯ ಚಿತ್ತಾರ ಬರೆಯುತ್ತೀರಿ ನೀವು? ಚಣಕೊಮ್ಮೆ ವೇಷ ಬದಲಾಯಿಸಲೇಬೇಕೆ, ಮೋಡಗಳೇ? ಕಲಕಲಿಸದಿದ್ದರೆ ನಿದ್ದೆ ಬರುವುದಿಲ್ಲವೆ, ಜಲವೆ? ಕುಹೂ – ಕುಹೂ ಎಂದು ಕಿರುಲಬೇಡ, ಕೋಗಿಲೆಯೇ… ಖುಷಿಯಿಂದ ಕೂಗುತ್ತೇನೆ ಕಿವಿಗೊಟ್ಟು ಕೇಳಿ- ‘ಕವನ ಹೊಸೆಯಲಿಕ್ಕೆ ಬೇಡ… ನೀವಿನ್ನು’ ೨ ಇಲ್ಲಿ….. ನನ್ನ […]

#ಹನಿಗವನ

ರಾಮ ರಾಮ

0
ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)

ವಾಲಿಗೆ ಮರೆಯಲ್ಲಿ ನಿಂತು ಬಾಣ ಬಿಟ್ಟ ಪುಣ್ಯಾತ್ಮನು ಒಬ್ಬ ಪುರಾಣ ಪುರುಷೋತ್ತಮ ಏನು ಕಲಿಗಾಲ ಬಂತಪ್ಪ ರಾಮ. ರಾಮ. *****

#ಕವಿತೆ

ಈ ಹುಚ್ಚ ಚಿಮಣಿಗಳ ಚಲ್ಲಿಬಿಡಿರಿ

ಪಂಚ ಕಳ್ಳರ ತಂದು ಮಂಚದಾ ಮೇಲಿರಿಸಿ ಈ ಮುಗ್ಧ ಗೋವುಗಳು ಮೆರೆಸಿರುವವು ಪಂಚ ಪೀಠವ ಕಟ್ಟಿ ಪಂಚ ಪಾಲಕಿ ಕಟ್ಟಿ ಅಡ್ಡಾಗಿ ಉದ್ದಾಗಿ ಎತ್ತಿರುವವು ಓ ಮುಗ್ಧ ಸೋದರರೆ ಅತಿಮುಗ್ಧ ಭಾವುಕರೆ ಈ ಚರ್ಮ ಚೀಲಗಳ ಹೊರುವಿರೇಕೆ ಆರತಿಯ ತಂದಿರುವ ಓ ಅಕ್ಕ ತಾಯಿಗಳೆ ಈ ಹೆಣದ ಕುಂಡಗಳ ಪೂಜೆಯೇಕೆ ಪಾಲಕಿಯ ಹೊತ್ತಿರುವ ಶಿವಭಕ್ತ ಗೋಪುಗಳೆ […]

#ಅರ್ಥಶಾಸ್ತ್ರ

ವಸ್ತು ವಿನಿಮಯ ವ್ಯವಸ್ಥೆ : ಹಣದ ಉಗಮ

0

ಮೂಲ ಪರಿಕಲ್ಪನೆಗಳು ಮತ್ತು ಹಣದ ಕಾರ್ಯಗಳು ೧.೧. ವಸ್ತು ವಿನಿಮಯ ವ್ಯವಸ್ಥೆ : ಹಣದ ಉಗಮ ಬಹಳ ಹಿಂದಿನ ಕಾಲದಲ್ಲಿ ಹಣ ಬಳಕೆಯಲ್ಲಿರಲಿಲ್ಲ. ನಮ್ಮ ಅನೇಕ ಪೂರ್ವಿಕರು ಹಣ ಇಲ್ಲದೆ, ಹಣವನ್ನು ನೋಡದೆ ಬದುಕಿದ್ದರು. ಆಸೆಗಳು ಬಹಳ ಮಿತವಾಗಿದ್ದ ಕಾಲದಲ್ಲಿ ಹಣದ ಅಗತ್ಯವೇ ಇರಲಿಲ್ಲ. ಪುರಾತನ ಮಾನವ ಬೇಟೆಯಾಡಿ, ಹಣ್ಣು ಹಂಪಲು ತಿಂದು ಬದುಕುತ್ತಿದ್ದ. ಸ್ವಾವಲಂಬಿ […]

#ಕವಿತೆ

ಹಳೆಬಾಳಿಗೆ ಹೊಸ ಅರ್ಥವ ತಾ

0

ಹಳೆಬಾಳಿಗೆ ಹೊಸ ಅರ್ಥವ ತಾ ಸಂಕ್ರಾಂತಿಯ ಸೂರ್ಯ, ಹೊಸ ಬೆಳಕಲಿ ತೊಳೆ ಈ ಜಗವ ಮೊಳಗಿಸು ನವತೂರ್ಯ. ಕಾಲದ ಬೆಂಕಿಯ ಹಾಯ್ದುಳಿದ ಅಪರಂಜಿಯನುಳಿಸು, ಚಿತ್ತದ ಕತ್ತಲೆಗಳ ಅಳಿಸಿ ಭಾವಶುದ್ಧಿ ಹರಸು. ಅಂತರ್ಮುಖಿ ಆಗಲಿ ಈ ಬಾಳು ತನ್ನ ನಿಜಕೆ ಒಲಿದು, ಹತ್ತಲಿ ಮೆಲ್ಲಗೆ ಸತ್ಯ ಅಹಿಂಸೆಯ ಎತ್ತರಗಳು ಹೊಳೆದು. ತನ್ನ ನಿಜಕೆ ತಾ ಸಂದವನ ಬಾಳೇ […]