Day: June 17, 2018

#ಸಣ್ಣ ಕಥೆ

ಯಿದು ನಿಜದಿ ಕತೀ…

0
ದಲಿತ-ಬಂಡಾಯ ಚಳವಳಿಯ ಕಾಲದಿಂದಲೇ, ಬರವಣಿಗೆಯನ್ನು ಆರಂಭಿಸಿರುವ ಇವರು, ಸಾಕಷ್ಟು ಬರವಣಿಗೆಯನ್ನು ವಿವಿಧ ಪ್ರಾಕಾರಗಳಲ್ಲಿ ಮಾಡಿರುವಂಥವರು.ಇವರ ಕಥೆಗಳು ಕುತೂಹಲಕಾರಿ ಹಾಘೂ ಅಭ್ಯಾಸಪೂರ್ಣ ಯೋಗ್ಯವಾಗಿವೆ.ಒಂದು ವಿಶಿಷ್ಟ ಬಗೆಯ ಪ್ರಯೋಗಗಳನ್ನು - ಭಾಷಿಕ ಪ್ರಯತ್ನಗಳನ್ನು ಮಾಡುವುದರಿಂದ ಇವರ ಕಥೆಯೊಳಗೆ ಒಂದು ಚೈತನ್ಯಶೀಲತೆ ಮತ್ತು ಸಾಂಸ್ಕೃತಿಕ ಬಿಕ್ಕಟುಗಳ ಅನಾವರಣಗೊಳಿಸುವ ಗಂಭಿರ ಪ್ರಯತ್ನವನ್ನು ಕಾಣಬಹುದು.
ಡಾ || ಯಲ್ಲಪ್ಪ ಕೆ ಕೆ ಪುರ
Latest posts by ಡಾ || ಯಲ್ಲಪ್ಪ ಕೆ ಕೆ ಪುರ (see all)

ಯೀ ಕತೀನ ನಾ… ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ…  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು… ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ…’ ಅಂಬಂಗೆ,  ವುಗಾದಿ ಕಳ್ದೆ ಮೂರ್ನೆ ದಿನ್ದ, ಶನಿವಾರದ ಸರಿ ರಾತ್ರಿ ವತ್ತಿನಾಗೆ, ಕೇರಿ ನಾಯ್ಗಳ ಯಿಂಡ್ನಿ ಜೊತ್ಗೆ… ಮನೆ ನಾಯ್ಗಿಳು… ನಾಲ್ಕು ಕೂಡಾ, ಕಂಡಾಬಟ್ಟೆ ಬೊಗ್ಳುತ್ತಿವೆ. ಕೇರಿ ಯಜ್ಮಾನ ಸಣ್ಣಯಲ್ಲಪ್ಪ, […]

#ಹನಿಗವನ

ಬಿಕ್ಕಳಿಕೆ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಹಸಿ ಹಸಿಯಾದ ನೋವಿಗೆ ಬಿಸಿ ನೆನಪಿನ ಚಕ್ರದ ಮೊಣಚು ಚುಚ್ಚಿ ಚುಚ್ಚಿ ಗಾಯಗೊಳಿಸಿದಾಗ, ಗಟ್ಟಿಯಾದ ಬರ್ಫು ಸಮುದ್ರದ ಉಪ್ಪಾಗಿ ಕೈಗೆ ಜಿಗುಟಿ ಅಲ್ಲೇ ಒತ್ತಿಕೊಂಡಿತು. *****