Month: September 2012

#ಕವಿತೆ

ಒಲುಮೆಯ ಹೂವು

0
Latest posts by ಮಂಜುನಾಥ ವಿ ಎಂ (see all)

  ಒಲುಮೆಯ ಹೂವೇ, ನಾನು ಹಣ್ಣೆಲೆಯಾಗಿ ಉದುರುತ್ತಲೇ ನೀನು ವಸಂತವಾಗಿ ಉದಯಿಸಿದೆ. ಚಿನ್ನದಬಣ್ಣದ ನಿನ್ನ ಮುಂಗುರುಳಿನಲಿ ತಂಗಿದ ಆ ಅಸದೃಶ ರಾತ್ರೆಗಳು- ದನಿಗೆಟ್ಟ ಹಕ್ಕಿಯ ಗೊಗ್ಗರುಗಾನದಂತೆ ಮೈ ಹೊದೆಯುತ್ತಿವೆ. ಹಿತ್ತಲಿನ ಮುಳ್ಳು ಪೊದೆಗಳು- ಬೋಗನ್ ವಿಲಾ ಹೂಬಳ್ಳಿಗಳೇ ಮುತ್ತಿಕೊಂಡ ಕೊರಕಲು ಹಾದಿಯತ್ತ ಉನ್ಮತ್ತಿಸಿ, ಮುನ್ನುಗ್ಗುವಂತೆ ಮಾಡಿ ಮಂಜುಗಣ್ಣಾಗಿಸುತ್ತವೆ. ಒಲುಮೆಯ ಹೂವೇ, ನಾನು ವಸಂತವಾಗಿ ಮೈದುಂಬಿ ಬಂದ […]

#ಕವಿತೆ

ಶರಣರಲಾವಿಯಾಡುನ ಬಾರೋ

0

ಶರಣರಲಾವಿಯಾಡುನ ಬಾರೋ ಮನಕ ತಿಳಿದು ನೀ ನೋಡೋ           ||ಪ|| ಸಧ್ಯದಿ ಸಮರದೊಳು ಮಧ್ಯದಿ ಕೂಡುವ ಬುದ್ದಿವಂತರಲ್ಲೆ ತಿದ್ದಿಯಾಡುನು ಬಾ                   ||೧|| ಮಾಡೋದು ಚಂದ್ರನ್ನ ನೋಡಿ ಗುದ್ದಲಿ ಹಾಕಿ ಬೇಡಿಕೊಂಡು ಅಲಾವಿ ಕೂಡಿಯಾಡುನು ಬಾ                 ||೨|! ದೇಶಕಧಿಕವಾದ ವಾಸುಳ್ಳ ಶಿಶುನಾಳ ಗುರುವು ಹೇಳಿದ್ದು ಕೇಳಿ ಕೂಡಿಯಾಡುನು ಬಾರೋ               ||೩|| *****

#ಹನಿಗವನ

ನಮಸ್ಕಾರ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

`ತಿರಸ್ಕಾರಕ್ಕೆ’ ಹಾಕಿ ನಮಸ್ಕಾರ ಕಬಳಿಸೀತು ನಿಮ್ಮನ್ನು ಬಾಚಿ ತನ್ನಕೈವಾರ *****  

#ಕವಿತೆ

ಅಲಾವಿ ಆಡುನು ಬಾ

0

ಏ ಸಖಿಯೆ ಅಲಾವಿ ಆಡುನು ಬಾ                                 ||ಪ|| ಅಲಾವಿಯಾಡುತ ಪದಗಳ ಪಾಡುತ ಬಳ್ಳಿಹಿಡಿದು ಬಲು ಮೌಜಿಲೆ ಕುಣಿದು                             ||೧|| ಸೊಗಸಿನ ಸಿಂಗಾರ ಮಾಡ್ಯಾರು ವಯ್ಯಾರ ಬಾಗಿ ಬಳಕುತ ಹೆಚ್ಚಿ ಚಲ್ಲುತ ಗೆಜ್ಜಿ ಸಪ್ಪಳ ಕೇಳುನು ಬಾ         ||೨|| ಶರಣರ ಲೀಲಾ ಕಲಿಯುಗದ ಮೇಲಾ ಜಾಹೀರಾದಿತು ಶಿಶುನಾಳ ಶಾಹಿದರಾ ಹೊಂದಿಗೂಡುನು ಬಾ     ||೩|| *****

#ಕವಿತೆ

ಬೆಂಗಳೂರಿನ ಕವಿತೆ

0

ಮೊದಲು ಆಕಾಶವಿತ್ತು, ಆಕಾಶಕ್ಕೆ ಕಣ್ಣಿತ್ತು, ಕಿವಿಯಿತ್ತು ಆದರೆ ಕಾಲುಗಳಿರಲಿಲ್ಲ ಬ್ರಹ್ಮಾಂಡದ ಮೇಲೆ ತೇಲಾಡುತ್ತಿತ್ತು ಹಸುಗೂಸು-ಅಂಬೆಗಾಲಿಕ್ಕಿ ನೀನು ಬಂದೆ ಜಗವೆಲ್ಲ ಖಾಲಿ ಇತ್ತು ನೀನು ಕಂಡೆ ನಿನ್ನ ಕಣ್ಣುಗಳಲ್ಲಿ ಆಶ್ಚರ್ಯವಿತ್ತು, ಹೊಳಪಿತ್ತು, ನಗುವಿತ್ತು, ಅಳುವಿತ್ತು ನೀನು ತಂದೆ: ಮೌನಕ್ಕೆ ಜೀವ ತುಂಬುವ ಅರ್ಥ ನಿನ್ನ ಬಗೆಗಣ್ಣಲ್ಲಿ ನೂರಾರು ನವಿಲು ಎಲ್ಲಾ ನವಿಲುಗಳು ಬಿಟ್ಟು ಹೋಗಿವೆ ತಮ್ಮ ನವಿಲುಗರಿ […]

#ಕವಿತೆ

ಅಪ್ಪಣೆ ಹಿಡಿದು ಹೆಜ್ಜೆ ಚಲ್ಲಿ

0

ಅಪ್ಪಣೆ ಹಿಡಿದು ಹೆಜ್ಜೆ ಚಲ್ಲಿ ಧೀನೆಂದು ಕುಣಿದಾಡಿ ||ಪ|| ವೃಂದವನದೊಳು ಬಂದು ತೀಥ೯ ಬಂದನಲ್ಲೋ ಐದು ದೇಹದಿ ||೧|| ತಂದೆ ಪಾಲಿಸು ಗೋವಿಂದ ಚಂದದಿಂದಲಿ ನೆರೆಯ ಪಾಲಿಸೋ ||೨|| *****  

#ಸಣ್ಣ ಕಥೆ

ಕನ್ಯಾಕುಮಾರಿ

0

ಅವಳಿಗೆ ಒಂದು ಮಾತು ಹೇಳದೆ ಅಲ್ಲಿಂದ ಹೊರಡುವುದು ಸಭ್ಯತೆಯಲ್ಲ ಎನಿಸಿ ಯಾವುದಕ್ಕೂ ಒಂದು ಮಾತು ಹೇಳಿಯೆ ಹೊರಡುವ ಎಂದುಕೊಂಡು ಅವಳು ಇಳಿದುಕೊಂಡಿದ್ದ ಹೋಟೆಲ್ ಕಡೆಗೆ ಹೊರಟೆ. ಮೂರೇ ದಿನದ ಪರಿಚಯವಾದ್ದರಿಂದ ಅವಳಿಗೆ ವಿದಾಯ ಹೇಳಿಯೇ ಹೊರಡಬೇಕೆಂಬ ಆಸಕ್ತಿ ಇರಲಿಲ್ಲವಾದರೂ – ಭಾರತೀಯತೆ- ಪಾಶ್ಚಾತ್ಯೀಕರಣ- ಆಂಗ್ಲೀಕರಣ ಇತ್ಯಾದಿಗಳ ಬಗೆಗೆ ನಮ್ಮ ನಡುವೆ ನಡೆದಿದ್ದ ಚರ್ಚೆಗಳನ್ನು ನಾನಾಗಲೀ ಆಕೆಯಾಗಲೀ […]

#ಹನಿಗವನ

ನೈವೇದ್ಯ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಹನಿ ಹನಿಸಿ ಹನಿಗವನ ಮಳೆಯ ಪಾಲಾಯಿತು ಸಿಹಿ ಜೇನ ಇನಿಗವನ ಪ್ರಿಯಗೆ ಮುಡುಪಾಯಿತು ಮಿಣಿ ಮಿಣಿಕಿ, ಮಿನಿ ಗವನ ಮನದ ಕೋಣೆ ಸೇರಿತು ಸ್ವರ ಭರದಿ ಧ್ವನಿಗವನ ಮನದ ಕೋಣೆ ಸೇರಿತು ಸ್ವರ ಭರದಿ ಧ್ವನಿಗವನ ಕೊರಳಲ್ಲಿ ಉಳಿಯಿತು ಇನ್ನು ಪ್ರಕಟಣೆಗೆ ಉಳಿದದ್ದು ಎದೆಯ ಬಡಿತದ ಪುಡಿಗವನ ಜೀವ ಭಾವದ ಕಿಡಿಗವನ ನಿಮಗೆ ನೈವೇದ್ಯ, ಪ್ರೀತಿ […]

#ಕವಿತೆ

ಪ್ರಣಮ ಕಲ್ಮಸ್ಥಾನದ ಲಾವಿಗೆ

0

ಪ್ರಣಮ ಕಲ್ಮಸ್ಥಾನದ ಲಾವಿಗೆ         ||ಪ|| ಅಣಮದ ಗುಣಗದ ತಣವಿದ ಗಣಿತವಲ್ಲಧಾನದ ಲಾವಿಗೆ            ||೧|| ಕತ್ತಲದಿನ ಖೇಲ ಫಲಾಯನಿಗೆ ಹತನದಿ ವತನದಿ ಮಥನದಿ ರತನಜ್ಯೋತಿ ರಾಜವಾಲನಿಗೆ         ||೨|| ಇಮಾಮ ಹುಸೇನೈನ ಭೂಮಿಯೊಳು ತಾಮಸ ಧೂಮಸ ರೋಮಸ ನೇಮದಿ ಮೊಹಮ್ಮದ ಶಿಶುವಿನಾಳಿಗೆ   ||೩|| *****

#ಕವಿತೆ

ಓ ಪ್ರಾಣವೇ

0
Latest posts by ಮಂಜುನಾಥ ವಿ ಎಂ (see all)

  ಓ ಪ್ರಾಣವೇ, ಯಾಕಿಷ್ಟೊಂದು ಮೃದು, ಬಂಡೆಗಲ್ಲಿನಂತೆ ಯಾಕಿಷ್ಟೊಂದು ಕಠಿಣ? ಸಾಯಲೇಬೇಕೆಂದವರಿಗೆ ಸನ್ಮಾರ್ಗ ತೋರಿಸುತ್ತಿ, ಜೀವಿಸಲೇಬೇಕೆಂದು ಪಣ ತೊಟ್ಟವರನ್ನು ದುರ್ಮಾರ್ಗಕ್ಕೆ ದೂಡುತ್ತಿ. ನಮ್ಮ ಪಾಪಗಳು ನಮ್ಮನ್ನು ಕಾಡುವ ದಿನ, ಕನಸಿನರೂಪದಲ್ಲಿ ಬಂದೋಗುವ ನಿನ್ನ ಬಹುಮುಖ್ಯ ಉದ್ದೇಶವಾದರೂ ಯಾವ ತರಹದ್ದು? ಒಣ ಎಲೆಗಳು, ಬಿರಿದ ಮೊಗ್ಗು ಯಾರನ್ನು ಸಂತೈಸಿ, ಪ್ರೇಮದ ಮುದ್ರೆಯನ್ನೊತ್ತುತ್ತವೆ? *****